
ತೇಜ್ ಪ್ರತಾಪ್ ಯಾದವ್ ತಂದೆಯಾಗಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮದ ವರದಿಗಳನ್ನು ಅವರು ನಿರಾಕರಿಸಿದ್ದು, ಇವೆಲ್ಲಾ ಸುಳ್ಳು ಗಾಸಿಪ್‌ಗಳು ಎಂದು ಅವರು ಕರೆದಿದ್ದಾರೆ. ಈ ವದಂತಿಗಳು ಸೋಶೀಯಲ್ ಮೀಡಿಯಾ ತುಂಬ ತೀವ್ರವಾಗಿ ಹಬ್ಬಿದ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖೇಶ್ ರೋಷನ್, ಸಂಜಯ್ ಯಾದವ್, ರಮೀಜ್, ಶಕ್ತಿ ಸಿಂಗ್ ಮತ್ತು ಸುನಿಲ್ ಸಿಂಗ್ ಜೈಚಂದ್ ಎಂಬುವವರು ಈ ವಿಚಾರವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.