ಬೆಂಗಳೂರು, ಫೆಬ್ರುವರಿ 9: ಕಳೆದ ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ (ಚಿನ್ನದ ದರಗಳು) ಇಂದು ಸೋಮವಾರವೂ ಮತ್ತಷ್ಟು ದುಬಾರಿಯಾಗಿದೆ. ಗ್ರಾಮಕ್ಕೆ 205 ರೂ ಏರಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆ 16,000 ರೂ ಗಡಿ ಸಮೀಪ ಹೋಗುತ್ತಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಏರಿಕೆಯಾಗಿದೆ. ಇದೆ ವೇಳೆ, ಬೆಳ್ಳಿ ಬೆಲೆಯ ಜಿಗಿತವೂ ಮುಂದುವರಿದಿದೆ. ಸೋಮವಾರ ಇದರ ಒಂದು ಗ್ರಾಮ್ ಬೆಲೆ 15 ರೂ ಏರಿಕೆಯಾಗಿ 300 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,45,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,58,840 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 30,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,45,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 30,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 9ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,884 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,560 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,913 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,884 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,560 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 14,560 ರೂ
- ಬೆಲೆ: 14,650 ರೂ
- ಮುಂಬೈ: 14,560 ರೂ
- ದೆಹಲಿ: 14,575 ರೂ
- ಕೋಲ್ಕತಾ: 14,560 ರೂ
- ಕೇರಳ: 14,560 ರೂ
- ಅಹ್ಮದಾಬಾದ್: 14,565 ರೂ
- ಜೈಪುರ: 14,575 ರೂ
- ಲಕ್ನೋ: 14,575 ರೂ
- ಭುವನೇಶ್ವರ್: 14,560 ರೂ
ಇದನ್ನೂ ಓದಿ: ಸರ್ವಮ್ ಐನಿಂದ ಹೊಸ ಮಾದರಿ; ಡಾಕ್ಯುಮೆಂಟ್ ಇಂಟೆಲಿಜೆನ್ಸ್ ವಿಶ್ವದಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 599 ರಿಂಗಿಟ್ (13,981 ರೂಪಾಯಿ)
- ದುಬೈ: 562.50 ಡಿರಾಮ್ (14,128 ರೂಪಾಯಿ)
- ಅಮೆರಿಕ: 153.50 ಡಾಲರ್ (13,735 ರೂಪಾಯಿ)
- ಸಿಂಗಾಪುರ: 192.10 ಸಿಂಗಾಪುರ ಡಾಲರ್ (14,057 ರೂಪಾಯಿ)
- ಕತಾರ್: 550 ಕತಾರಿ ರಿಯಾಲ್ (13,712 ರೂ)
- ಸೌದಿ ಅರೇಬಿಯಾ: 559 ಸೌದಿ ರಿಯಾಲ್ (13,449 ರುಪಾಯಿ)
- ಓಮನ್: 58.60 ಒಮಾನಿ ರಿಯಾಲ್ (13,691 ರೂಪಾಯಿ)
- ಕುವೇತ್: 45.21 ಕುವೇತಿ ದಿನಾರ್ (13,391 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 300 ರೂ
- ಬೆಲೆ: 300 ರೂ
- ಮುಂಬೈ: 300 ರೂ
- ದೆಹಲಿ: 300 ರೂ
- ಕೋಲ್ಕತಾ: 300 ರೂ
- ಕೇರಳ: 300 ರೂ
- ಅಹ್ಮದಾಬಾದ್: 300 ರೂ
- ಜೈಪುರ: 300 ರೂ
- ಲಕ್ನೋ: 300 ರೂ
- ಭುವನೇಶ್ವರ್: 300 ರೂ
- ಪುಣೆ: 300
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ