
ಸೋನಂ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಟನೆ ಮಾಡಿದರು. ಆದರೆ, ನಿಮಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ. ಈಗ ಅವರ ಫ್ಯಾಮಿಲಿ ಜೊತೆ ಹಾಯಾಗಿದ್ದಾರೆ.

ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಕಪೂರ್ ವಿವಾಹ ಆಗಿದ್ದಾರೆ. 2018ರಲ್ಲಿ ಅದ್ದೂರಿಯಾಗಿ ಈ ಮದುವೆ. ಈಗ ಸೋನಂ ಕಪೂರ್ ಅವರು ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ.

2022ರಲ್ಲಿ ಸೋನಂ ಕಪೂರ್ ಅವರಿಗೆ ಗಂಡು ಮಗು ಜನಿಸಿತು. ಮಗುವಿಗೆ ಅವರು ವಾಯು ಎಂದು ನಾಮಕರಣ ಮಾಡಿದ್ದಾರೆ. ಈಗ ಎರಡನೇ ಬಾರಿಗೆ ಅವರು ತಾಯಿ ಆಗಿದ್ದಾರೆ. ಅವರ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಸೋನಂ ಕಪೂರ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಖ್ಯಾತ ನಟ ಅನಿಲ್ ಕಪೂರ್ ಮಗಳು ಎಂಬ ಕಾರಣಕ್ಕೆ ಸಾಕಷ್ಟು ಆಫರ್‌ಗಳು ಬಂದಿವೆ. ಈ ಆಫರ್‌ಗಳನ್ನು ಒಪ್ಪಿ ನಟಿಸಿದರು. ಆದರೆ, ದೊಡ್ಡ ಗೆಲುವು ಸಿಕ್ಕಿಲ್ಲ.


ಸೋನಂ ಅವರಿಗೆ ಈಗ 40 ವರ್ಷ. ಅವರಿಗೆ ಅಭಿಮಾನಿಗಳ ಕಡೆಯಿಂದ ಸಾಕಷ್ಟು ವಿಶೇಷತೆಗಳು ಬಂದಿವೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ರಂದು ಪ್ರಕಟಿಸಲಾಗಿದೆ – 12:56 pm, ಸೋಮ, 9 ಫೆಬ್ರವರಿ 26