Headlines

Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…


Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಶ್ರೀಮಂತಿಕೆ (ಶ್ರೀಮಂತ) ಪಡೆಯುವುದು ನಾವು ಜನರ ಆಸೆ ಪಡುವ ಗುರಿ. ಆದರೆ, ಶ್ರೀಮಂತಿಕೆ ಸಾಧಿಸುವುದು ಸುಲಭವೂ ಹೌದು, ಕಷ್ಟವೂ ಹೌದು. ಶ್ರೀಮಂತರಾಗಲು ಮೂಲಭೂತ ಅಂಶಗಳೆಂದರೆ, ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಕೂಡ ಸಮತೋಲಿತವಾಗಿ ಬದುಕು ಚೆನ್ನ. ನೀವು ತಿಂಗಳಿಗೆ ನಾಲ್ಕೈದು ಲಕ್ಷ ರೂ ಸಂಪಾದಿಸಿ, ಅದನ್ನು ಉಳಿಸಲಿಲ್ಲ ಎಂದರೆ ಪ್ರಯೋಜನ ಇರೋದಿಲ್ಲ. ನೀವು ತಿಂಗಳಿಗೆ 10,000 ರೂ ದುಡಿದು ಅದರಲ್ಲಿ 8,000 ರೂ ಉಳಿಸಿದರೂ ದೊಡ್ಡ ಪ್ರಯೋಜನವಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತಿಳಿದಿರಬೇಕಾದ ಕೆಲ ಹಣಕಾಸು ಜಾಣ್ಮೆಯ ಮಾತುಗಳು ಇಲ್ಲಿವೆ…

ಹಣದ ಹರಿವು ನಿಯಂತ್ರಣದಲ್ಲಿರಲಿ….

ನಿಮಗೆ ಸಿಕ್ಕಾಪಟ್ಟೆ ಖರ್ಚು ಮಾಡುವ ಉಮೇದಿದ್ದರೆ ಅದಕ್ಕೆ ಕಡಿವಾಣ ಹಾಕಲು 50-30-20 ಸೂತ್ರ ಮಾಡಿಕೊಳ್ಳಿ. ಇಲ್ಲಿ 50 ಎಂದರೆ ಮನೆ ಬಾಡಿಗೆ, ಬಿಲ್‌ಗಳು, ದಿನಸಿ ಇತ್ಯಾದಿ ಅತ್ಯಗತ್ಯ ವೆಚ್ಚಗಳಿಗೆ ಶೇ. 50 ಹಣ ಮೀಸಲಿಡಿ. ಮನರಂಜನೆ, ಪ್ರಯಾಣ, ಹೊರಗೆ ಊಟ ಇತ್ಯಾದಿ ಲಕ್ಷುರಿಗೆ ಶೇ. 30 ಹಣ ಎತ್ತಿಡಿ. ಇದು ಈ ಮಿತಿ ದಾಟದಂತೆ ನೋಡಿಕೊಳ್ಳಿ. ಇನ್ನು, ಶೇ. 20ರಷ್ಟು ಹಣವನ್ನು ಹೂಡಿಕೆಗೆ ಸಮರ್ಪಿಸಿ. ಹೂಡಿಕೆಯು ಇದಕ್ಕಿಂತ ಕಡಿಮೆ ಇರಬಾರದು. ನಿಮ್ಮ ಲಕ್ಷುರಿ ವೆಚ್ಚವನ್ನು ಕಡಿಮೆಗೊಳಿಸಿ, ಆ ಹಣವನ್ನು ಹೂಡಿಕೆಗೆ ಸೇರಿಸುತ್ತಾ ಹೋಗಬಹುದು.

ಇದನ್ನೂ ಓದಿ: ಮ್ಯೂಚುಯಲ್ ಫಂಡ್‌ಗಳು: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್‌ಗಳ ನಡುವೆ ಏನು ವ್ಯತ್ಯಾಸ?

ಹೂಡಿಕೆಯನ್ನು ಆಟೋಮೇಟ್ ಮಾಡಿ…

ನಿಮ್ಮ ಆದಾಯದಲ್ಲಿ ಕನಿಷ್ಠ ಶೇ. 20ರಷ್ಟಾದರೂ ಹಣವು ಉಳಿತಾಯವಾಗಬೇಕು. ಈ ಹಣ ಎತ್ತಿಡುವಷ್ಟರಲ್ಲಿ ಎಲ್ಲಾ ಖರ್ಚಾಗಿ ಹೋಗುತ್ತದೆ ಈ ಕೆಳಗಿನ ಉಪಾಯ ಮಾಡಿ. ಸಂಬಳ ಬಂದ ಕೂಡಲೇ ಶೇ. 20ರಷ್ಟು ಹಣವನ್ನು ಬೇರೊಂದು ಸೇವಿಂಗ್ಸ್ ಅಕೌಂಟ್‌ಗೆ ವರ್ಗಾಯಿಸಿ. ಅಥವಾ ಮ್ಯೂಚುವಲ್ ಫಂಡ್ ಎಸ್ಐಪಿಯಂತಹ ಹೂಡಿಕೆಗೆ ಆಟೋಮೇಟ್ ಮಾಡಿ.

ಸ್ಯಾಲರಿ ಹೈಕ್ ಆದರೆ ಏನು ಮಾಡಬೇಕು?

ಸಂಬಳ ಹೆಚ್ಚಾದರೆ, ಹೆಚ್ಚುವರಿ ಸಂಬಳ ಕಣ್ಣಿಗೆ ಕಾಣದಂತೆ ಖರ್ಚಾಗಿ ಹೋಗುವುದು. ಅದಕ್ಕೆ ಅವಕಾಶ ಕೊಡಬೇಡಿ. ಸಂಬಳ ಹೆಚ್ಚಾದಾಗ ನಿಮ್ಮ ಜೀವನಶೈಲಿ ಮತ್ತು ವೆಚ್ಚ ಈ ಮೊದಲಿನಂತೆಯೇ ಮುಂದುವರಿಯಲಿ. ಹೆಚ್ಚುವರಿ ಸಂಬಳವನ್ನು ಉಳಿಸುತ್ತಾ ಹೋಗಬಹುದು.

ಅಧಿಕ ಬಡ್ಡಿಯ ಸಾಲ ತೀರಿಸಿ

ನಾವು ನಾನಾ ಕಾರಣಗಳಿಗೆ ಸಾಲ ಮಾಡುತ್ತೇವೆ. ತುರ್ತಾಗಿ ಬೇಕೆಂದು ಪರ್ಸನಲ್ ಲೋನ್ ಬಯಸಿರುತ್ತೇವೆ. ಇವು ಅಧಿಕ ಬಡ್ಡಿ. ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಉಳಿದಾಗಲೂ ಅದಕ್ಕೆ ಅಧಿಕ ಬಡ್ಡಿ ಇರುತ್ತದೆ. ಆರಂಭದಲ್ಲಿ ಅತ್ಯಧಿಕ ಬಡ್ಡಿ ಇರುವ ಸಾಲವನ್ನು ತೀರಿಸಲು ಗಮನ ಕೊಡಿ.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್ನಿಂದ ಭರ್ಜರಿ ಆದಾಯ

ನಿವೃತ್ತಿಯಾಗುವವರಿಗೆ 4 ಪರ್ಸೆಂಟ್ ರೂಲ್

ನೀವು ನಿವೃತ್ತಿಯಾದಾಗ ಲ್ಯಾಂಪ್ಸಮ್ ಆಗಿ ಹಣ ಹೊಂದಿದಾಗ, ಅದನ್ನು ನಿಭಾಯಿಸಲು 4% ವಿತ್ತರಾಯಲ್ ರೂಲ್ ನೆರವಿಗೆ ಬರುತ್ತದೆ. ನಿಮ್ಮ ಒಟ್ಟು ನಿಧಿಯಿಂದ ಮೊದಲ ವರ್ಷ ಶೇ. 4ರಷ್ಟು ಹಣವನ್ನು ವಿತ್ತ್ರಾ ಮಾಡಿದರೆ, ಆ ಫಂಡ್ ಕನಿಷ್ಠ 30 ವರ್ಷವಾದರೂ ಖಾಲಿಯಾಗದೇ ಉಳಿದಿರುತ್ತದೆ. ಅದು ಶೇ. 10-12ರಷ್ಟು ವಾರ್ಷಿಕ ರಿಟರ್ನ್ ನೀಡುತ್ತಿರುವ ಫಂಡ್ ಆಗಿರಬೇಕು.

ಎಮರ್ಜೆನ್ಸಿ ಫಂಡ್

ಇದು ಬಹಳ ಮುಖ್ಯ. ಯಾರಿಗೆ ಬೇಕಾದರೂ ದಿಢೀರ್ ಖರ್ಚು ಎರಗಿಬರಬಹುದು. ಅಂಥದ್ದಕ್ಕೆಂದು ಒಂದಿಷ್ಟು ಹಣವನ್ನು ಪ್ರತ್ಯೇಕವಾಗಿ ಇಟ್ಟಿರುವುದು ಬಹಳ ಒಳ್ಳೆಯದು. ನಿಮ್ಮ ಮಾಸಿಕ ಖರ್ಚಿನ ಆರು ಪಟ್ಟು ಹಣ ಇದಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *