Headlines

Tumakuru: ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್​​ ಶಾಕ್​

Tumakuru: ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್​​ ಶಾಕ್​


Tumakuru: ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್​​ ಶಾಕ್​

ತುಮಕೂರು, ಫೆಬ್ರವರಿ 09: ಪತ್ನಿಗೆ ವಿಚ್ಛೇದನ ನೀಡದೆ ಮತ್ತೊಬ್ಬಳ ಜೊತೆ ವಿವಾಹವಾಗಲು ಹೊರಟಿದ್ದ ವೇಳೆ ಕಲ್ಯಾಣಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತಿಗೆ ಮಹಿಳೆ ಶಾಕ್ ಕೊಟ್ಟ ಘಟನೆ ನಿನ್ನೆ ತುಮಕೂರಿನ ಎಡೆಯೂರಿನಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಅರೋಪಿ ಹರಿಪ್ರಸಾದ್ ಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ. ಈತ ಎರಡನೇ ವಿವಾಹವಾಗಲು ಹೊರಟಿದ್ದ ಮಂಡ್ಯ ಮೂಲದ ಯುವತಿಯೂ ಈಗ ದೂರು ನೀಡಿದ್ದಾಳೆ. ಮೊದಲ ಮದುವೆ 2ನೇ ಮದುವೆಯಾಗ್ತಿದ್ದ ಹರಿಪ್ರಸಾದ್, ವಿವಾಹ ಮುಚ್ಚಿಟ್ಟು ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಜೊತೆಗೆ ಯುವತಿಯ ಕೆಲ ಫೋಟೋ ಇಟ್ಟುಕೊಂಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಎನ್‌ಸಿಆರ್ ದಾಖಲಿಸಿದ ಅಮೃತೂರು ಪೊಲೀಸರು, ವಂಚನೆ ಸಂಬಂಧ ಮಂಡ್ಯದಲ್ಲಿ ದೂರು ನೀಡುವಂತೆ ಸೂಚನೆ ನೀಡಿದ್ದಾರೆ. ಮೊದಲ ಹೆಂಡತಿ ಡೈವರ್ಸ್ ವಿಚಾರ ಇನ್ನೂ ಕೋರ್ಟ್ ನಲ್ಲಿ ಇರುವಾಗಲೇ ಈತ ಮತ್ತೊಂದು ಮದುವೆಗೆ ಮುಂದಾಗಿದ್ದ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕರಾಗಿರುವ ಹರಿಪ್ರಸಾದ್‌ಗೆ ಮಂಡ್ಯದ ಯುವತಿ ಕಳೆದ 3 ವರ್ಷಗಳ ಹಿಂದೆ ಪರಿಚಯವಾಗಿದ್ದರು. ಆದರೆ ಮೊದಲನೇ ಮದುವೆ ವಿಚಾರ ಯುವತಿ ಹಾಗೂ ಆಕೆಯ ತಾಯಿಗೆ ಗೊತ್ತಿತ್ತು ಎಂದು ಹರಿಪ್ರಸಾದ್ ಹೇಳಿದ್ದಾನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *