10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ! ವೈದ್ಯಲೋಕಕ್ಕೂ ಸವಾಲಾದ ಯುವಕ

10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ! ವೈದ್ಯಲೋಕಕ್ಕೂ ಸವಾಲಾದ ಯುವಕ


ಬೆಳಗಾವಿ, ಫೆಬ್ರವರಿ 9: ಬೆಳಗಾವಿ (ಬೆಳಗಾವಿ) ಸವದತ್ತಿ ತಾಲ್ಲೂಕಿನ ಉಗರಗೊಳ್ಳ ಗ್ರಾಮದ ಹೆಗ್ಗೊಳ್ಳ ಗುಡ್ಡದಲ್ಲಿ ವಾಸಿಸುತ್ತಿರುವ ಬುಡನ್ ಖಾನ್ ಹೊಸಮನಿ (34) (ಬುಡನ್ ಖಾನ್ ಹೊಸಮನಿ) ಎಂಬಾತ ಕಳೆದ 10 ವರ್ಷಗಳಿಂದ ಕೇವಲ ಎಲೆಗಳು, ಸೊಪ್ಪುಗಳನ್ನು ತಿಂದು ಬದುಕುತ್ತಿದ್ದ, ವೈದ್ಯಲೋಕಕ್ಕೂ ಸವಾಲಾಗಿದ್ದಾನೆ. ಬುಡನ್ ಖಾನ್ ಹೊಸಮನಿಯ ಈ ವಿಚಿತ್ರ ಆಹಾರ ಪದ್ಧತಿ ವೈದ್ಯಕೀಯ ಜಗತ್ತು ಮತ್ತು ಜನಸಾಮಾನ್ಯರ ಗಮನ ಸೆಳೆದಿದ್ದು, ಅಚ್ಚರಿ ಮೂಡಿಸಿದೆ. ಮೇಕೆಯಂತೆ ದಿನವಿಡೀ ಹಸಿ ಸೊಪ್ಪುಗಳನ್ನೇ ಆಹಾರವಾಗಿ ಸೇವಿಸುವ ಬುಡನ್ ಖಾನ್, ಕಾಡಿನಲ್ಲಿ ವಾಸಿಸುವ ಮಂಗಗಳು ಎಲೆಗಳನ್ನು ತಿನ್ನುವುದನ್ನು ನೋಡಿ ತಾನೂ ಅದೇ ರೀತಿ ಎಲೆ ತಿನ್ನಲು ಶುರು ಮಾಡಿದ್ದಾಗಿ ಹೇಳಿದ್ದಾನೆ.

ಈ ಅಭ್ಯಾಸವನ್ನು ಕ್ರಮೇಣವಾಗಿ, ಊಟವನ್ನೇ ಬಿಟ್ಟು ಸಂಪೂರ್ಣವಾಗಿ ಎಲೆಗಳ ಮೇಲೆ ಅವಲಂಬಿತನಾಗಿದ್ದೇನೆ ಎಂದಿದ್ದಾನೆ. ಹತ್ತು ವರ್ಷಗಳಿಂದ ಅನ್ನ, ರೊಟ್ಟಿ ಮುಂತಾದ ಸಾಂಪ್ರದಾಯಿಕ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಬರೀ ಸೊಪ್ಪು ತಿಂದು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಆದಾಗ್ಯೂ, ಆಗೊಮ್ಮೆ ಈಗೊಮ್ಮೆ ಗ್ರಾಮಕ್ಕೆ ಭೇಟಿ ನೀಡಿದಾಗ ಸಾರು ಮತ್ತು ಟೀ ಸೇವಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಳಗಾವಿ ಎಲೆ ತಿನ್ನುವ ಯುವಕ ಬುಡನ್ ಖಾನ್ ಹೊಸಮನಿ

ಬುಡನ್ ಖಾನ್ ಹೊಸಮನಿ

ಬುಡನ್ ಖಾನ್ ಪ್ರಕಾರ, ಈ ಗುಡ್ಡದಲ್ಲಿ ಸುಮಾರು 150 ರಿಂದ 200 ವಿಧದ ಎಲೆಗಳು ಲಭ್ಯವಿದ್ದು, ಕೆಲವನ್ನು ದಿನಕ್ಕೆ ಆರು ಬಾರಿ ಸೇವಿಸುತ್ತೇನೆ ಎಂದು ತಿಳಿಸಿದ್ದಾನೆ. ಎಲೆಗಳು ಸಿಹಿಯಾಗಿರುತ್ತವೆ ಮತ್ತು ಅವುಗಳನ್ನು ತಿಂದರೆ ಹೊಟ್ಟೆ ಹಸಿವಾಗುವುದಿಲ್ಲ ಎಂದಿದ್ದಾನೆ.

ಎಲೆ ತಿನ್ನಲು ಆರಂಭಿಸಿದಾಗಿನಿಂದ ಈವರೆಗೂ ಕಾಯಿಲೆಯೇ ಬಂದಿಲ್ಲ!

ವಿಚಿತ್ರ ಆಹಾರ ಪದ್ಧತಿಯ ಬಗ್ಗೆ ‘ಟಿವಿ9’ ಮಾತನಾಡಿರುವ ಬುಡನ್ ಖಾನ್, ಎಲೆಗಳನ್ನು ತಿನ್ನಲು ಶುರು ಮಾಡಿದ ಮೇಲೆ ಇಲ್ಲಿಯವರೆಗೂ ಯಾವುದೇ ಕಾಯಿಲೆ ಬಂದಿಲ್ಲ ಎಂದು ‘ಟಿವಿ9’ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಯಾವುದೇ ಆಸ್ಪತ್ರೆಗೆ ಹೋಗಿಲ್ಲ ಎಂದು ದೃಢಪಡಿಸಿದ್ದಾರೆ.

ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗುವ ಸೊಪ್ಪುಗಳನ್ನು ಕೂಡ ತಿಂದು ಆತ ಜೀರ್ಣಿಸಿಕೊಳ್ಳುತ್ತಾನೆ. ಇದು ಹೇಗೆ ಸಾಧ್ಯ? ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೇಗೆ ಪಡೆಯುತ್ತಾನೆ ಮತ್ತು ಆರೋಗ್ಯವಾಗಿರುತ್ತಾನೆ ಎಂಬುದು ವೈದ್ಯಕೀಯ ಲೋಕಕ್ಕೆ ಒಂದು ದೊಡ್ಡ ಸವಾಲಾಗಿದೆ.

ಗುಡ್ಡದಲ್ಲಿ ಮನೆ, ಒಬ್ಬಂಟಿ ವಾಸ!

ಬುಡನ್ ಖಾನ್ ಗುಡ್ಡದಲ್ಲಿ ತಾನೇ ಒಂದು ಸಣ್ಣ ಮನೆ ಕಟ್ಟಿಕೊಂಡು ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆ. ನಗರದ ಜಂಜಾಟದಿಂದ ದೂರವಾಗಿ, ಕಾಡಿನಲ್ಲಿ ಒಬ್ಬಂಟಿಯಾಗಿರುವುದು ಮತ್ತು ಪ್ರಕೃತಿಯ ನಡುವೆ ಬದುಕುವುದು ತನಗೆ ಇಷ್ಟ. ಮದುವೆಯಾಗುವ ಬದಲು, ಇದೇ ರೀತಿ ಕಾಡಿನಲ್ಲಿರುವುದಕ್ಕೆ ಇಷ್ಟಪಡುತ್ತೇನೆ ಎಂದಿದ್ದಾನೆ.

ಇದನ್ನೂ ಓದಿ:ನನಗೆಲ್ಲ ಊಟ ಹಾಕಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ

ಎಲೆಗಳನ್ನು ತಿಂದಾಗ ಬೇಗನೆ ನೀರು ಕರಗುತ್ತವೆ. ಜೀರ್ಣಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬುಡನ್ ಖಾನ್ ಹೇಳಿದ್ದಾನೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:39 pm, ಸೋಮ, 9 ಫೆಬ್ರವರಿ 26



Source link

Leave a Reply

Your email address will not be published. Required fields are marked *