ಗಿಲ್ಲಿಗೆ ಕಿವಿಮಾತು ಹೇಳಿದ ಕನ್ನಡ ಚಿತ್ರರಂಗದ ಹಿರಿಯ ವ್ಯಕ್ತಿ; ನಟನ ಪ್ರತಿಕ್ರಿಯೆ ಏನು?

ಗಿಲ್ಲಿಗೆ ಕಿವಿಮಾತು ಹೇಳಿದ ಕನ್ನಡ ಚಿತ್ರರಂಗದ ಹಿರಿಯ ವ್ಯಕ್ತಿ; ನಟನ ಪ್ರತಿಕ್ರಿಯೆ ಏನು?


ಬಿಗ್ ಬಾಸ್ ಕನ್ನಡ ಸೀಸನ್ 12ರ (ಬಿಬಿಕೆ 12) ಖ್ಯಾತಿಯ ಗಿಲ್ಲಿ ನಟನ ವಿರುದ್ಧ ಒಂದು ಗಂಭೀರ ಆರೋಪ ಕೇಳಿ ಬಂದಿತ್ತು. ‘ಸರ್ಕಾರಿ ಶಾಲೆ H8’ ಚಿತ್ರದ ಪ್ರಚಾರಕ್ಕೆ ಅವರು ಬಂದಿಲ್ಲ ಎಂದು ಸಿನಿಮಾ ತಂಡ ಫಿಲ್ಮ್ ಚೇಂಬರ್‌ಗೆ ದೂರು ನೀಡಿತ್ತು. ಈ ವಿಷಯ ಚರ್ಚೆಯಲ್ಲಿ ಇರುವಾಗಲೇ ಬೇರೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಗಿಲ್ಲಿಗೆ ಕನ್ನಡ ಚಿತ್ರರಂಗದ ಹಿರಿಯ ಕಿವಿಮಾತು ಹೇಳಿದ್ದಾರೆ. ಆ ಪ್ರಕರಣದ ಬಗ್ಗೆ ಗಿಲ್ಲಿ ಪ್ರತಿಕ್ರಿಯೆ ತಿಳಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಸೂಪರ್ ಹಿಟ್’ ಹೆಸರಿನ ಚಿತ್ರದಲ್ಲಿ ಗೌರವ್ ಶೆಟ್ಟಿ ಜೊತೆ ಗಿಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಸುದ್ದಿಗೋಷ್ಠಿಯಲ್ಲಿ ಆಯೋಜನೆ ಮಾಡಲಾಗಿದೆ. ಈ ವೇದಿಕೆ ಮೇಲೆಯೇ ಇದ್ದ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಕಿವಿಮಾತು ಹೇಳಿದ್ದಾರೆ. ‘ನಿಂಗೆ ಚಾನ್ಸ್ ಕೊಟ್ಟವರನ್ನು ಯಾವಾಗಲೂ ಮರೆಯಬೇಡ’ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಗಿಲ್ಲಿ ನಟ ಅವರು ಚಾನ್ಸ್ ಕೊಟ್ಟವರನ್ನೇ ಮರೆತಿದ್ದಾರೆ, ಬಿಗ್ ಬಾಸ್ ಗೆದ್ದ ಮೇಲೆ ಅವರು ಬೇರೆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದೆಲ್ಲ ಚರ್ಚೆ ಆಗುತ್ತಿದೆ. ಈ ಕಾರಣದಿಂದ ನಾಗೇಂದ್ರ ಪ್ರಸಾದ್ ಅವರು ಹೀಗೆ ಹೇಳಿದರೇ ಎಂಬ ಪ್ರಶ್ನೆ ಮೂಡಿದೆ.

ಆ ಬಳಿಕ ಗಿಲ್ಲಿ ನಟ ಕೂಡ ಮಾತನಾಡಿದ್ದಾರೆ. ಅವರು ಈ ಘಟನೆಯನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ. ‘ನನಗೆ ಇತರ ಸಿನಿಮಾ ಕೆಲಸಗಳ ಒತ್ತಡ ಇದ್ದುದರಿಂದ ನನಗೆ ಪ್ರಚಾರಕ್ಕೆ ಹೋಗೋಕೆ ಆಗಿಲ್ಲ. ನಾನು ಅವರಿಗೆ ಬೈಟ್ ಕೊಟ್ಟಿದ್ದೇನೆ. ಅದು ಅವರ ಕೈ ಸೇರಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಫಿಲ್ಮ್ ಚೇಂಬರ್‌ಗೆ ನಾನು ಹೇಳೋದು ಹೇಳಿದ್ದೇನೆ’ ಎಂದು ಗಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಶೋಗಾಗಿ ಮತ್ತೆ ಒಂದಾದ ಗಿಲ್ಲಿ ನಟ ಹಾಗೂ ಕಾವ್ಯ ಶೈವ

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ದರ್ಶನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ಗಿಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಬಿಗ್ ಬಾಸ್ ನಿಂದಾಗಿ ಗಿಲ್ಲಿ ನಟ ಅವರ ಅಭಿಮಾನಿ ಬಳಗ ತುಂಬಾ ಹಿರಿದಾಗಿದೆ. ಗಿಲ್ಲಿಗೋಸ್ಕರ ‘ಡೆವಿಲ್’ ಸಿನಿಮಾ ನೋಡಿದವರೂ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *