ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ (ಸಲ್ಮಾನ್ ಖಾನ್) ಅವರು ಭಾಗಿ ಆಗಿದ್ದರು. ಮುಂಬೈನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ. ಈ ವೇಳೆ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗುತ್ತಿದೆ.
ಆರ್ಎಸ್ಎಸ್ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ರೀತಿ ಭಾಗಿ ಆದವರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ವೇದಿಕೆ ಏರಿದ ಮೋಹನ್ ಭಾಗ್ವತ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸಲ್ಮಾನ್ ಖಾನ್ ಕಾಲೇಜು ವಿದ್ಯಾರ್ಥಿಗಳು ಹಾಗೆ ಬಟ್ಟೆ ಧರಿಸುತ್ತಾರೆ. ಅವರು ಅದನ್ನು ಏಕೆ ಧರಿಸುತ್ತಾರೆ ಗೊತ್ತಾ? ಅವರು ಅದನ್ನು ಧರಿಸಲೇಬೇಕು. ಸಲ್ಮಾನ್ ಇದನ್ನು ಏಕೆ ಧರಿಸುತ್ತಾರೆ? ಅದು ನನಗೆ ಗೊತ್ತಿಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
‘ಒಳ್ಳೆಯದಿರಲಿ ಅಥವಾ ಕೆಟ್ಟದ್ದಾಗಿರಲಿ, ಅದನ್ನು ಮುನ್ನಡೆಸುವುದು ಫ್ಯಾಷನ್. ಫ್ಯಾಷನ್ ಅನ್ನು ಸೃಷ್ಟಿಸುವವರು ವಿಶ್ವಾಸಾರ್ಹರು, ಶ್ರೇಷ್ಠರು ಮತ್ತು ಗೌರವಕ್ಕೆ ಅರ್ಹರು ಎಂದು ಅವರು ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ಈ ಮಾತನ್ನು ಆಲಿಸುತ್ತಾ ಇಬ್ಬರು. ಅವರಿಗೆ ಪ್ರೀತಿಯಿಂದ ಮುಗುಳುನಗೆ ಬೀರಿದ್ದಾರೆ.
ಇತ್ತೀಚಿನದು: ಸಲ್ಮಾನ್ ಖಾನ್ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್!
“ಕಾಲೇಜು ವಿದ್ಯಾರ್ಥಿಗಳು ಸಲ್ಮಾನ್ ಖಾನ್ ಜಿ ಫ್ಯಾಶನ್ ಅನ್ನು ನಕಲಿಸುತ್ತಾರೆ. ಏಕೆ ಎಂದು ಕೇಳಿದಾಗ, ಅವರು ಗೊತ್ತಿಲ್ಲ ಎಂದು ಹೇಳುತ್ತಾರೆ. ಸಲ್ಮಾನ್ ಅದನ್ನು ಮಾಡುತ್ತಿದ್ದಾರೆ. ಐಸೆ ಲೋಗೋ ಕಿ ಸಮಾಜ್ ಮೆ ಬಹುತ್ ಇಜ್ಜತ್ ಹೋತೀ ಹೈ” #ಸಲ್ಮಾನ್ ಖಾನ್ #ಗ್ಯಾಲ್ವಾನ್ ಯುದ್ಧ pic.twitter.com/JobqXfltf0
— ADARSH ಆಗಿರುವುದು⚡ (@IBeingAdarsh_) ಫೆಬ್ರವರಿ 8, 2026
ಸಲ್ಮಾನ್ ಖಾನ್ ಅವರ ಬಗ್ಗೆ ಮೋಹನ್ ಭಾಗವತ್ ಹೇಳಿದ ಮಾತು ಅನೇಕರಿಗೆ ಖುಷಿ ನೀಡಿದೆ. ಈ ಬಗ್ಗೆ ಎಲ್ಲರೂ ತಮ್ಮ ಪ್ರತಿಕ್ರಿಯೆ. ‘ಸಲ್ಮಾನ್ ಖಾನ್ ಅವರ ರೀತಿ ಯಾರೂ ಇಲ್ಲ. ಅವರು ಸರಳ ವ್ಯಕ್ತಿತ್ವದ ಜೀವಿ’ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡ್ ವಿಚ್ ಆಗೋದನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದ ಸಲ್ಮಾನ್ ಖಾನ್
ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಇಡೀ ಬಾಲಿವುಡ್ ಹಾಜರಿ ಹಾಕಿತ್ತು ಎಂದರೂ ತಪ್ಪಾಗಲಾರದು. ಸಲ್ಮಾನ್ ಖಾನ್ ಜೊತೆ, ಅಕ್ಷಯ್ ಕುಮಾರ್, ಕರಣ್ ಜೋಹರ್, ರವೀನಾ ಟಂಡನ್, ಅನನ್ಯ ಪಾಂಡೆ ಸೇರಿದಂತೆ ಅನೇಕರು ಪ್ರದರ್ಶನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.