ವಶಕ್ಕೆ ಪಡೆದಿರುವ ಗಾಂಜಾಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ದೇವನಹಳ್ಳಿ, ಫೆಬ್ರವರಿ 09: ವಿದೇಶದಿಂದ ತಂದ 8 ಕೋಟಿ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು (ಹೈಡ್ರೋಪೋನಿಕ್ ಗಾಂಜಾ)ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ, ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಯಾಣಿಕರಿಬ್ಬರು ವಿದೇಶದಿಂದ ಹೈಡ್ರೋಪೋನಿಕ್ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದರು. ಈ ವೇಳೆ ಲಗೇಜ್ ಬ್ಯಾಗ್‌ನ ತಳಭಾಗದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಬೆಂಗಳೂರು ಕಸ್ಟಮ್ಸ್ ಟ್ವೀಟ್
🚨 ವಿಮಾನ ನಿಲ್ದಾಣದಲ್ಲಿ ಪ್ರಮುಖ NDPS ವಶ | 09.02.2026 ಬೆಂಗಳೂರು ಕಸ್ಟಮ್ಸ್ ಬ್ಯಾಂಕಾಕ್ನಿಂದ ಆಗಮಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ತಡೆದು, ಚೆಕ್ ಇನ್ ಬ್ಯಾಗೇಜ್ನಲ್ಲಿ ಬಚ್ಚಿಟ್ಟಿದ್ದ ₹8.31 ಕೋಟಿ ಮೌಲ್ಯದ 23.76 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇಬ್ಬರೂ ಆರೋಪಿಗಳನ್ನು ಎನ್ಡಿಪಿಎಸ್ ಕಾಯ್ದೆ, 1985 ರ ಅಡಿಯಲ್ಲಿ ಬಂಧಿಸಲಾಗಿದೆ.#ಸಿಬಿಐಸಿ
– ಬೆಂಗಳೂರು ಕಸ್ಟಮ್ಸ್ (@blrcustoms) ಫೆಬ್ರವರಿ 9, 2026
2 ಕೋಟಿ ರೂ. ಮೌಲ್ಯದ ವಜ್ರ ಸೇರಿ ವಿದೇಶಿ ಹಣ ಜಪ್ತಿ
ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ವಿದೇಶಕ್ಕೆ ಸಾಗಿಸುತ್ತಿದ್ದ 2 ಕೋಟಿ ರೂ. ಮೌಲ್ಯದ ವಜ್ರ ಸೇರಿದಂತೆ ವಿದೇಶಿ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 38.60 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ
ಮನೆಯಲ್ಲಿ ಪ್ರಯಾಣಿಕ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲು ಮುಂದಾಗಿದ್ದ. ಇಮಿಗ್ರೇಷನ್ ಆಗಿದ್ದಾರೆ ಚೆಕಿಂಗ್ ವೇಳೆ ವಜ್ರ, ವಿದೇಶಿ ಕರೆನ್ಸಿ ಪತ್ತೆ. ಕಸ್ಟಮ್ಸ್ ಕಾಯ್ದೆಯಡಿ ಪ್ರಯಾಣಿಕರನ್ನು ಬಂಧಿಸಿ ವಿಚಾರಣೆ.
2 ಕೋಟಿ 97 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶಕ್ಕೆ
ನಿಷೇಧದ ನಡುವೆಯೂ ವಿದೇಶದಿಂದ ತಂದಿದ್ದ 2 ಕೋಟಿ 97 ಲಕ್ಷ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣಕ್ಕೆ ನಿನ್ನೆ ಪುಕೆಟ್ ಮತ್ತು ಮಲೇಶಿಯಾದಿಂದ ಮೂವರು ಪ್ರಯಾಣಿಕರು ಆಗಮಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ಬಂದವನ ಬ್ಯಾಗ್‌ನಲ್ಲಿದ್ದವು ಹಾವುಗಳು, ಸರಿಸೃಪಗಳು!
ಎಲ್ಲಾ ಪ್ರಯಾಣಿಕರಂತೆ 2 ಪ್ರತ್ಯೇಕ ವಿಮಾನಗಳಲ್ಲಿ ಬಂದಿದ್ದ ಮೂವರ ಲಗೇಜ್ ಪರಿಶೀಲನೆ ನಡೆಸಿದಾಗ ಲಗೇಜ್‌ನಲ್ಲಿ 8.5 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇನ್ನು ಗಾಂಜಾ ಸಿಗದ ಮೂವರು ಪ್ರಯಾಣಿಕರನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 8.5 ಕೆಜಿ ಗಾಂಜಾದ ಮಾರುಕಟ್ಟೆ ಮೌಲ್ಯ 2 ಕೋಟಿ 97 ಲಕ್ಷ ಅಂತ ಅಂದಾಜಿಸಿದ್ದಾರೆ. ಈ ಕುರಿತು ಕಸ್ಟಮ್ಸ್ ಅಧಿಕಾರಿಗಳು ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ತನಿಖೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.