‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ) ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯಾ ಶೈವ ಜೊತೆ ಕ್ಲೋಸ್ ಆಗಿದ್ದರು. ಶೋ ಮುಗಿದ ನಂತರವೂ ಆ ಸ್ನೇಹ ಮುಂದುವರಿದಿದೆ. ಈಗ ಗಿಲ್ಲಿ ನಟ ಅಭಿನಯದ ‘ಸೂಪರ್ ಹಿಟ್’ ಸಿನಿಮಾದ ಸೋಮವಾರ (ಫೆ.9) ಸುದ್ದಿಗೋಷ್ಠಿ. ಆ ಬಳಿಕ ಅವರಿಗೆ ಕಾವ್ಯ (ಕಾವ್ಯ ಶೈವ) ಬಗ್ಗೆ ಪ್ರಶ್ನೆ ಎದುರಾಯಿತು. ‘ಕಾವ್ಯಾ ಜೊತೆ ಪ್ರತಿ ದಿನ ಫೋನ್ನಲ್ಲಿ ಮಾತಾಡುತ್ತಿದ್ದರಂತೆ ಹೌದಾ?’ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಗಿಲ್ಲಿ ಅವರು ಜಾಣತನದ ಉತ್ತರ. ‘ನಿಮ್ಮ ಜೊತೆಯೂ ಸುಮಾರು ಸಲ ಮಾತಾಡಿದೆ. ನೀವು ಎಷ್ಟೋ ಸಲ ನನಗೆ ಫೋನ್ ಮಾಡಿದ್ದೀರಿ. ನಾನು ಕೂಡ ಮಾಡಿದ್ದೇನೆ’ ಎಂದು ಗಿಲ್ಲಿ ನಟ (ಗಿಲ್ಲಿ ನಾಟಾ) ಹೇಳಿದರು. ಆ ಮೂಲಕ ಕಾವ್ಯಾ ಜೊತೆಗಿನ ತಮ್ಮ ಮಾತಕಥೆ ತುಂಬ ಸಹಜವಾದದ್ದು ಎಂಬರ್ಥದಲ್ಲಿ ಅವರ ಪ್ರತಿಕ್ರಿಯೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.