Headlines

ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು


ಬೆಂಗಳೂರು, ಫೆಬ್ರುವರಿ 9: ಷೇರು ಮಾರುಕಟ್ಟೆ (ಸ್ಟಾಕ್ ಮಾರುಕಟ್ಟೆ) ಐಟಿ ಸೆಕ್ಟರ್‌ನ ವಿವಿಧ ಷೇರುಗಳು ಕಳೆದ ಕೆಲವು ದಿನಗಳಿಂದ ಬಹಳ ಹಿಂದೆ ಕಾಣುತ್ತಿವೆ. ನಿಫ್ಟಿ ಐಟಿ ಇಂಡೆಕ್ಸ್ ಇವತ್ತು ಸೋಮವಾರ ಪಾಸಿಟಿವ್ ಆಗಿದ್ದರೂ ಕಳೆದ ವಾರದಿಂದ ಶೇ. 7 ಹೆಚ್ಚಿನ ಕುಸಿತ ಕಂಡುಬಂದಿದೆ. ಐಟಿ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಿರುವವರಿಗೆ ಬರೋಬ್ಬರಿ ಎರಡೂವರೆ ಟ್ರಿಲಿಯನ್ ರುಪಾಯಿ ನಷ್ಟವಾಗಿದೆ.

ಐಟಿ ಷೇರುಗಳು ನಿರ್ದಿಷ್ಟವಾಗಿ ಕುಸಿಯಲು ಕಾರಣಗಳಿಲ್ಲ. ಎಐ ಟೆಕ್ನಾಲಜಿಯೇ ಈಗ ಭಾರತದ ಐಟಿ ಸೇವೆಗಳಿಗೆ ಮುಳುವಾಗಿದೆ. ಇತ್ತೀಚೆಗೆ ಆದ ಎರಡು ಬೆಳವಣಿಗೆಗಳು ಐಟಿ ಸೆಕ್ಟರ್ ಬಗ್ಗೆ ಹೂಡಿಕೆದಾರರು ತಲೆ ಕೆರೆದುಕೊಳ್ಳುವಂತೆ ಮಾಡಿವೆ. ಒಂದು, ಆಂಥ್ರೋಪಿಕ್ ಎನ್ನುವ ಕಂಪನಿಯು ಹೊಸ ಆಟೋಮೇಶನ್ ಟೂಲ್‌ಗಳನ್ನು ರೂಪಿಸಿದೆ. ಮತ್ತೊಂದು, ಪಲಂಟಿರ್ ಕಂಪನಿಯು ಎಸ್‌ಎಪಿ ಅಳವಡಿಕೆಯನ್ನು ಬಹಳ ತ್ವರಿತವಾಗಿ ಮಾಡಬಲ್ಲ ಎಐ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಿದೆ.

ಈ ಎರಡು ಬೆಳವಣಿಗೆಗಳು ಐಟಿ ಸರ್ವಿಸ್ ಉದ್ಯಮವನ್ನೇ ತಲ್ಲಣಗೊಳಿಸಿವೆ. ಹೆಚ್ಚಿನ ಐಟಿ ಯೋಜನೆಗಳಿಗೆ ಸಂಬಂಧ ಪಟ್ಟ ಬೆಳವಣಿಗೆಯೇ ಇದು. ಹೀಗಾಗಿ, ಐಟಿ ಸೆಕ್ಟರ್‌ಗೆ ಲಾಭದಾಯಕ ಹಿನ್ನಡೆಯಾಗತೊಡಗಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಿಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಆಂಥ್ರೋಪಿಕ್ ಹಿಂದಿನ ರೂವಾರಿ ಬೆಂಗಳೂರು ವ್ಯಕ್ತಿ ರಾಹುಲ್ ಪಾಟೀಲ್

ಎಐ ಸ್ಟಾರ್ಟಪ್ ಆದ ಆಂಥ್ರೋಪಿಕ್ ಇದೀಗ ಹೊಸ ಕ್ಲಾಡ್ ಎಐ ಆವೃತ್ತಿ ಬಿಡುಗಡೆಯಾಗಿದೆ. ಎಐ ಏಜೆಮಂಟ್ ಆದ ಇದು ಬೆಕ್ಕಸ ಬೆರಗಾಗುವಂತಹ ಕೆಲಸಗಳನ್ನು ನಿರ್ವಹಿಸಬಲ್ಲದು. ಯಾವುದೇ ಉದ್ಯಮವಾದರೂ, ಲೀಗಲ್ ಕಾಂಟ್ರಾಕ್ಟ್ ಅನ್ನು ಪರಾಮರ್ಶಿಸುವುದರಿಂದ ಹಿಡಿದು ಕೋಡ್ ಮ್ಯಾನೇಜ್ ಮಾಡುವುದು, ಡಾಕ್ಯುಮೆಂಟ್ ನಿರ್ವಹಿಸುವವರೆಗೂ ಮನುಷ್ಯರ ನೆರವಿಲ್ಲದೇ ಪೂರ್ಣ ವರ್ಕ್ಫ್ಲೋಗಳನ್ನು ನಿರ್ವಹಿಸುತ್ತದೆ.

ಆಂಥ್ರೋಪಿಕ್ನ ಈ ಅದ್ಬುತ ಐ ಕೋವರ್ಕರ್ ಅಥವಾ ಎಐ ಏಜೆಂಟ್‌ನ ಅಭಿವೃದ್ಧಿಯ ಹಿಂದೆ ರಾಹುಲ್ ಪಾಟೀಲ್ ಇದ್ದಾರೆ. 2025ರ ಅಕ್ಟೋಬರ್ ತಿಂಗಳಲ್ಲಷ್ಟೇ ರಾಹುಲ್ ಪಾಟೀಲ್ ಅವರು ಆಂಥ್ರೋಪಿಗೆ ಸಿಟಿಓ ಆಗಿ ನೇಮಕವಾಗಿದ್ದರು. ಬೆಂಗಳೂರಿನ ಪಿಐಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಪಾಟಲ್ ಅವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಮೈಕ್ರೋಸಾಫ್ಟ್, ಓರೇಕಲ್, ಅಮೇಜಾನ್ ಕೈನೆಸಿಸ್, ಸ್ಟ್ರೈಪ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಂತರ ಆಂಥ್ರೊಪಿಕ್‌ಗೆ ಸಿಟಿಯೊ ಆಗಿ ಸೇರಿದ್ದಾರೆ. ಬಹಳ ಕ್ಷಿಪ್ರಗತಿಯಲ್ಲಿ ಕ್ಲಾಡ್ ಎಐನ ಹೊಸ ಆವೃತ್ತಿಯನ್ನು ಅಳವಡಿಸಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಅನೇಕ ಐಟಿ ಸರ್ವಿಸ್ ಕಂಪನಿಗಳ ಬ್ಯುಸಿನೆಸ್‌ಗೆ ಖೋತಾ ಆಗುವಂತೆ ಮಾಡಿದೆ.

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಾದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಪಲಂಟಿರ್ನ ಐ ಪ್ರಾಡಕ್ಟ್ ಬಲು ಉಪಯುಕ್ತ

ಪಲಂಟಿರ್ ಸಂಸ್ಥೆಯು ಸ್ಥಾಪಿಸಿರುವ ಐ ಟೂಲ್ ಉದ್ಯಮ ವಲಯದ ಗಮನ ಸೆಳೆದಿದೆ. ಕಂಪನಿಗಳಿಗೆ ಎಸ್ಎಪಿ ಮೈಗ್ರೇಶನ್ ಮಾಡಲು ಸಾಮಾನ್ಯವಾಗಿ ಕೆಲವು ವರ್ಷಗಳೇ ಆಗುತ್ತವೆ. ಆದರೆ, ಪಲಂಟಿರ್ನ ಎಐ ಟೂಲ್ನಿಂದ ಎಸ್ಎಪಿ ಮೈಗ್ರೇಶನ್ ಅನ್ನು ಕೆಲವೇ ವಾರಗಳಲ್ಲಿ ಮಾಡಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *