ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಪ್ರಯಾಣದಲ್ಲಿ ಇರುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ಲಕ್ಷ್ಯ ನೀಡಿ. ಮನೆಯಲ್ಲಿ ಇರುವಂತಹ ಪ್ರಮುಖ ಕಾಗದ- ಪತ್ರಗಳನ್ನು ಪರಿಶೀಲಿಸಿಕೊಳ್ಳಿ. ಅದರ ನಕಲು ತೆಗೆಸುವುದಕ್ಕೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತೀರಿ ಎಂದಾದರೆ ಜೋಪಾನವಾಗಿ ವಾಪಸ್ ತಂದು, ಮನೆಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದು ಬಗೆಯಲ್ಲಿ ಈ ದಿನ ಸಂತೋಷವಾಗಿ ಕಳೆಯಲಿದೆ. ಅದರಲ್ಲೂ ನೀವು ಬಹಳ ಇಷ್ಟ ಪಡುವಂಥ ವ್ಯಕ್ತಿಗಳನ್ನು ಭೇಟಿಯಾಗಿದ್ದೀರಿ. ಅವರು ಸ್ನೇಹಿತರಾಗಿರಬಹುದು ಅಥವಾ ಸಂಬಂಧಿಗಳಾಗಿರಬಹುದು, ಆದರೆ ಅವರೊಂದಿಗೆ ನೀವು ಕಳೆಯುವ ಸಮಯ ಸಂತೋಷವನ್ನು ನೀಡುತ್ತದೆ. ತುಂಬಾ ಖುಷಿಯಾದ ಖುಷಿಯಲ್ಲಿ ಇರುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ಹಿಂದಿನ ಕೆಲವು ಘಟನೆಗಳು ನಿಮ್ಮಲ್ಲಿ ಬದಲಾವಣೆ ತರಲಿದೆ. ನಿಮ್ಮ ಸಿದ್ಧತೆ ಬಹಳ ಚೆನ್ನಾಗಿರಲಿದೆ. ಎಲ್ಲಾ ಸಹ ಇದೆ ವಿಚಾರಕ್ಕೆ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಒಂದು ವೇಳೆ ನೀವೇನಾದರೂ ವಿವಾಹವಾದರು ಮದುವೆಗೆ ಪ್ರಯತ್ನ ಪಡುತ್ತಿದ್ದಾರೆ ಮ್ಯಾಟ್ರಿಮೋನಿ ವೆಬ್ಸೈಟ್ಗಳು ಅಥವಾ ವಧು-ವರರ ಸಮಾವೇಶಗಳಲ್ಲಿ ಸೂಕ್ತ ಸಂಬಂಧ ದೊರೆಯುವಂಥ ಯೋಗವಿದೆ.
ಲೇಖನ- ಸ್ವಾತಿ ಎನ್.ಕೆ.