Headlines

Bengaluru property tax evasion ಬೆಂಗಳೂರು: ತೆರಿಗೆ ವಂಚಿಸಿದ 10 ಸಾವಿರ ಆಸ್ತಿ ಡ್ರೋನ್‌ ಮೂಲಕ ಪತ್ತೆ! | Bengaluru 10000 Taxevading Properties Identified Via Drone Survey

Bengaluru property tax evasion ಬೆಂಗಳೂರು: ತೆರಿಗೆ ವಂಚಿಸಿದ 10 ಸಾವಿರ ಆಸ್ತಿ ಡ್ರೋನ್‌ ಮೂಲಕ ಪತ್ತೆ! | Bengaluru 10000 Taxevading Properties Identified Via Drone Survey



Bengaluru property tax evasion ಬೆಂಗಳೂರು: ತೆರಿಗೆ ವಂಚಿಸಿದ 10 ಸಾವಿರ ಆಸ್ತಿ ಡ್ರೋನ್‌ ಮೂಲಕ ಪತ್ತೆ! | Bengaluru 10000 Taxevading Properties Identified Via Drone Survey

ಬೆಂಗಳೂರಿನಲ್ಲಿ ಜಿಪಿಎಸ್‌ ಮತ್ತು ಡ್ರೋನ್‌ ತಂತ್ರಜ್ಞಾನ ಬಳಸಿ ಸುಮಾರು 10 ಸಾವಿರ ಆಸ್ತಿ ತೆರಿಗೆ ವಂಚನೆ ಪ್ರಕರಣಗಳನ್ನು ಬಿಬಿಎಂಪಿ ಪತ್ತೆಹಚ್ಚಿದೆ. ಈ ಆಸ್ತಿ ಮಾಲೀಕರು ಕಡಿಮೆ ತೆರಿಗೆ ಘೋಷಿಸಿ ವಂಚಿಸುತ್ತಿದ್ದು, ಅವರಿಂದ 370 ಕೋಟಿ ರೂ. ಹೆಚ್ಚುವರಿ ತೆರಿಗೆ ವಸೂಲಿ ಮಾಡಲು ನೋಟಿಸ್ ಜಾರಿಗೊಳಿಸಲಾಗಿದೆ.

ಬೆಂಗಳೂರು (ಫೆ.10): ರಾಜಧಾನಿ ಬೆಂಗಳೂರಿನಲ್ಲಿ ಜಿಪಿಎಸ್‌ ಹಾಗೂ ಡ್ರೋನ್‌ ಚಿತ್ರ ಬಳಸಿ ಆಸ್ತಿ ತೆರಿಗೆ ವಂಚಿಸುತ್ತಿದ್ದ ಸುಮಾರು 10 ಸಾವಿರ ಆಸ್ತಿಗಳನ್ನು ಪತ್ತೆ ಮಾಡಿರುವ ಜಿಬಿಎ ಕಂದಾಯ ಅಧಿಕಾರಿಗಳು ಈ ಆಸ್ತಿಗಳ ತೆರಿಗೆ ಪರಿಷ್ಕರಿಸಿ, ವಸೂಲಿಗೆ ನೋಟಿಸ್‌ ನೀಡಿದ್ದಾರೆ.

ವಂಚನೆ ಪತ್ತೆ ಹಚ್ಚಿ ತೆರಿಗೆ ಪರಿಷ್ಕರಣೆ ಮಾಡಿ 370 ಕೋಟಿ ರು. ಹೆಚ್ಚುವರಿ ಆಸ್ತಿ ತೆರಿಗೆ ವಸೂಲಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಬಿಎ ಕಂದಾಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಜಿಬಿಎ ಐಟಿ ವಿಭಾಗವು ಎನ್‌ಐಸಿ ಸಹಯೋಗದಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಜಿಪಿಎಸ್ ತಂಡಗಳು ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಜೊತೆಗೆ ಜಿಪಿಎಸ್ ಮಾಹಿತಿ ಹಾಗೂ ಡ್ರೋನ್ ಚಿತ್ರಗಳನ್ನು ಬಳಸಿಕೊಂಡು, ಸುಮಾರು 10 ಸಾವಿರ ಆಸ್ತಿಗಳ ಮಾಲೀಕರು ತಮ್ಮ ಆಸ್ತಿಗಳಿಗೆ ಕಡಿಮೆ ತೆರಿಗೆ ಘೋಷಣೆಗಳ ಮೂಲಕ ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಸ್ತಿ ತೆರಿಗೆ ಪರಿಷ್ಕರಣೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 10 ಸಾವಿರ ಆಸ್ತಿ ಮಾಲೀಕರು ಸರಾಸರಿ ಐದು ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ. ಇದರಿಂದ ಸುಮಾರು 370 ಕೋಟಿ ರು. ಮೊತ್ತದ ತೆರಿಗೆ ವಂಚನೆ ಕಂಡುಬಂದಿದೆ. ಇದನ್ನು ವಸೂಲಿ ಮಾಡಲು ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಮುಖಾಂತರವೂ ಸಂದೇಶ ಕಳುಹಿಸಲಾಗುತ್ತಿದೆ. ನೋಟಿಸ್ ನೀಡಿದ 15 ದಿನಗಳ ಒಳಗೆ ಆನ್‌ಲೈನ್ ಮೂಲಕ ಉತ್ತರಿಸಬೇಕು ಅಥವಾ ಮೇಲ್ಮನವಿ ಸಲ್ಲಿಸಬಹುದು ಎಂದು ಮೌದ್ಗಿಲ್ ತಿಳಿಸಿದ್ದಾರೆ.

ಜಿಪಿಎಸ್,ಡ್ರೋನ್ ತಂಡದ ಕಾರ್ಯವೈಖರಿ

ಮನೆ–ಮನೆ ಸಮೀಕ್ಷೆ ನಡೆಸುವ ಜಿಪಿಎಸ್‌ ತಂಡ, ಮೊಬೈಲ್ ತಂತ್ರಾಂಶದಲ್ಲಿ ಆಸ್ತಿ ತೆರಿಗೆ ವಿವರಗಳನ್ನು ಹೊಂದಿರುತ್ತದೆ. ಭೇಟಿ ನೀಡುವ ತಂಡದ ಸದಸ್ಯರು ಪ್ರತಿ ಆಸ್ತಿಯ ಜಿಪಿಎಸ್ ಮಾಹಿತಿ ದಾಖಲಿಸಿ, ವಸತಿ, ವಾಣಿಜ್ಯ, ಮಿಶ್ರ ಇತ್ಯಾದಿ ವಿವರಗಳು ಹಾಗೂ ಆ ಬಳಕೆಗೆ ಒಳಪಟ್ಟಿರುವ ವಿಸ್ತೀರ್ಣವನ್ನು ದಾಖಲಿಸುತ್ತಾರೆ. ಆಸ್ತಿಯ ಜಿಪಿಎಸ್, ನೆಲ ಹಾಗೂ ಮೇಲಿನ ಮಹಡಿಗಳ ಬಳಕೆ ಮಾಹಿತಿ, ಮಹಡಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಮೊಬೈಲ್ ತಂತ್ರಾಂಶದಿಂದ ಬ್ಯಾಕ್‌ ಎಂಡ್‌ಗೆ ಕಳುಹಿಸಲಾಗುತ್ತದೆ.

ಬಳಿಕ ಗುಣಮಟ್ಟ ಪರಿಶೀಲನಾ (ಕ್ಯುಸಿ) ತಂಡ ಜಿಪಿಎಸ್ ತಂಡದಿಂದ ಬಂದ ಎಲ್ಲ ಆಸ್ತಿ ಮಾಹಿತಿಯನ್ನು ಪರಿಶೀಲಿಸುತ್ತದೆ. ತಿರಸ್ಕೃತ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ. ಅನುಮೋದನೆ ಪಡೆದ ಪ್ರಕರಣಗಳನ್ನು ಡ್ರೋನ್ ಡೇಟಾ ಹಾಗೂ ಡಿಜಿಟೈಸ್ ಮಾಡಲಾದ ನಿರ್ಮಿತ ವಿಸ್ತೀರ್ಣದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ನಿರ್ಮಿತ ವಿಸ್ತೀರ್ಣ ಹೆಚ್ಚು ಇದ್ದು, ಮಾಲೀಕರು ಕಡಿಮೆ ಘೋಷಿಸಿದ್ದರೆ ಅಥವಾ ಭಾಗಶಃ ಅಥ‍ವಾ ಪೂರ್ಣವಾಗಿ ವಾಣಿಜ್ಯ ಬಳಕೆಯಲ್ಲಿದ್ದರೂ ಘೋಷಿಸದೇ ಇದ್ದರೆ, ತಂತ್ರಾಂಶದ ಮೂಲಕ ಬಾಕಿ ತೆರಿಗೆ, ಬಡ್ಡಿ ಮತ್ತು ದಂಡ ಸಹಿತ ಶೋಕಾಸ್ ನೋಟಿಸ್‌ಗಳನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ ಎಂದು ಮೌದ್ಗಿಲ್ ವಿವರಿಸಿದ್ದಾರೆ.

ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಲು : https://BBMPtax.karnataka.gov.in

ಆನ್‌ಲೈನ್‌ ಮೂಲಕ ಉತ್ತರಿಸಲು: https://BBMPenyaya.karnataka.gov.in

ಜಿಪಿಎಸ್‌ ತಂಡವು ಪ್ರತಿದಿನ ಸುಮಾರು 10 ಸಾವಿರ ಆಸ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಆಸ್ತಿ ವಿಸ್ತೀರ್ಣದ ಆಧಾರದಲ್ಲಿ ತೆರಿಗೆ ಪಾವತಿಸದೆ ಕಡಿಮೆ ಪಾವತಿ ಮಾಡುತ್ತಿರುವ ಎಲ್ಲರೂ ಬಾಕಿ ತೆರಿಗೆ ಪಾವತಿಸಬೇಕಾಗುತ್ತದೆ.

– ಮನೀಶ್ ಮೌದ್ಗಿಲ್, ವಿಶೇಷ ಆಯುಕ್ತ, ಐಟಿ ಮತ್ತು ಕಂದಾಯ, ಜಿಬಿಎ



Source link

Leave a Reply

Your email address will not be published. Required fields are marked *