‘ನನಗೂ ಪರಚಿದ ಕಲೆ ಇದೆ, ಆದರೆ ಪಿಆರ್ ಟೀಮ್ ಇಲ್ಲ’; ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ

‘ನನಗೂ ಪರಚಿದ ಕಲೆ ಇದೆ, ಆದರೆ ಪಿಆರ್ ಟೀಮ್ ಇಲ್ಲ’; ಅಶ್ವಿನಿಗೆ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ


ಬಿಗ್ ಬಾಸ್ (Bigg Boss) ಆಟದ ನಂತರವೂ ಅದರ ಬಗ್ಗೆ ಚರ್ಚೆಗಳು ಇದ್ದೇ ಇರುತ್ತವೆ. ದೊಡ್ಮನೆ ಒಳಗೆ ನಡೆದ ವಿಷಯ ಹೊರಗೂ ಚರ್ಚೆ ಆಗುತ್ತದೆ. ಈ ಬಾರಿ ಸೀಸನ್ ಅಲ್ಲಿ ಅದು ಕೊಂಚ ಹೆಚ್ಚೇ ಇದೆ ಎನ್ನಬಹುದು. ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗುತ್ತಿದೆ. ಈ ಕಿರಿಕ್ ಹೊರ ಬಂದಮೇಲೂ ಮುಂದುವರಿದಿದೆ. ಪರಸ್ಪರ ಮಾತಿನ ಕಿತ್ತಾಟ ನಡೆದಿದೆ.

ಮಧ್ಯದಮವರ ಬಳಿ ಮಾತನಾಡುವಾಗ ಅಶ್ವಿನಿ ಗೌಡ ಅವರು ಚೈತ್ರಾ ಕುಂದಾಪುರ ಮೇಲೆ ನೇರವಾಗಿ ಆರೋಪ ಮಾಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಗಾಯದ. ಚೈತ್ರಾ ಕುಂದಾಪುರ ಅವರು ನನಗೆ ಪರಚಿದ್ದರು’ ಎಂದು ಅಶ್ವಿನಿ ಗೌಡ ಆರೋಪ ಮಾಡಿದ್ದರು. ಜೊತೆಗೆ ಕೈಗೆ ಆದ ಗಾಯಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರು. ಇದಕ್ಕೆ ಚೈತ್ರಾ ಅವರು ತಡವಾಗಿ ಉತ್ತರ ನೀಡಿದ್ದಾರೆ.

‘ನನಗೂ ಪರಚಿದ ಕಲೆಗಳಿರುತ್ತವೆ. ಆದರೆ ಕ್ಷಮಿಸಿ ನನ್ನ ಬಳಿ ಪಿ.ಆರ್ ಟೀಮ್ ಇಲ್ಲ. ನನಗೂ ನೋವು, ಕಲೆಗಳಿವೆ. ಆದರೆ ನನಗೆ ಸಂತೋಷವಾಗಿಯೇ ನೋಡುವ ಸ್ಥಿತಿಯಲ್ಲಿದೆ’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಬಿಗ್ ಬಾಸ್ ಟಾಸ್ಕ್ ಮುಗಿದ ಬಳಿಕ ಪರಸ್ಪರ ಕ್ಷಮೆ ಕೇಳಿ ಪ್ರಕರಣವನ್ನು ಅಶ್ವಿನಿ-ಚೈತ್ರಾ ಅಲ್ಲಿಯೇ ಮುಗಿಸಿದ್ದರು. ಆದರೆ, ಹೊರ ಬಂದ ಬಳಿಕ ಅಶ್ವಿನಿ ಗೌಡ ಈ ವಿಷಯವನ್ನು ಮತ್ತೆ ತೆಗೆದಿದ್ದಾರೆ.

ಟಾಸ್ಕ್ ವೇಳೆ ಅನೇಕರಿಗೆ ಗಾಯಗಳಾಗುತ್ತವೆ. ಅದನ್ನು ಎಲ್ಲರೂ ಅಲ್ಲಿಗೇ ಬಿಡುತ್ತಾರೆ. ಆದರೆ, ಕೆಲವು ಅದನ್ನು ಹೊರಕ್ಕೂ ತೆಗೆದುಕೊಳ್ಳುತ್ತಾರೆ. ಈಗ ಆ ಕೆಲಸವನ್ನು ಅಶ್ವಿನಿ ಮಾಡಿದ್ದಾರೆ. ಈ ಕಾರಣಕ್ಕೆ ಚೈತ್ರಾ ಕುಂದಾಪುರ ಅವರು ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?

ಗಿಲ್ಲಿ ಬಗ್ಗೆ ಅಶ್ವಿನಿ ಗೌಡ ಅವರು ಗಂಭೀರ ಆರೋಪ ಮಾಡಿದ್ದರು. ‘ಗಿಲ್ಲಿ ಬಡವ ಎಂದು ಬಿಂಬಿಸಿಕೊಂಡಿದ್ದಾನೆ. ಆತ ನಿಜವಾಗಲೂ ಬಡವನಾ’ ಎಂದು ಅವರು ಪ್ರಶ್ನೆ ಮಾಡಿದರು. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *