ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ ಸಂಚರಿಸುವ 7 ರೈಲುಗಳನ್ನು ಸಂಪೂರ್ಣ ರದ್ದು ಮಾಡಲಾಗುತ್ತಿದೆ. ಫೆಬ್ರವರಿ 16 ಮತ್ತು 17 ರಂದು ವಂದೇ ಭಾರತ್ ಮತ್ತು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು/ಹುಬ್ಬಳ್ಳಿ : ವಂದೇ ಭಾರತ್ ರೈಲು ಆರಂಭವಾದ ನಂತರ ಬೆಂಗಳೂರಿನಿಂದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಗೆ ವೇಗವಾಗಿ ಹಾಗೂ ಆರಾಮವಾಗಿ ಪ್ರಯಾಣಿಸುವ ಅವಕಾಶ ಲಭ್ಯವಾಗಿದೆ. ಆದರೆ ಇದೀಗ ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ವಂದೇ ಭಾರತ್, ಜನಶತಾಬ್ದಿ ಸೇರಿದಂತೆ ಒಟ್ಟು 7 ರೈಲುಗಳ ಸಂಚಾರವನ್ನು ಒಂದು ದಿನ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಜೊತೆಗೆ 11ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್ಸಿ ಸಂಖ್ಯೆ 222ರಲ್ಲಿ ತಾತ್ಕಾಲಿಕ ಗರ್ಡರ್ಗಳನ್ನು ಅಳವಡಿಸಿ ತೆಗೆದುಹಾಕುವ ಕಾಮಗಾರಿಯ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಘೋಷಿಸಿದೆ. ಇದರ ಪರಿಣಾಮವಾಗಿ ಫೆಬ್ರವರಿ 16 ಮತ್ತು 17ರಂದು ಹಲವು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಕುರಿತು ಭಾರತೀಯ ರೈಲ್ವೆ (#IndianRailway) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕಾಮಗಾರಿಯ ಕಾರಣದಿಂದ ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಲಿದ್ದು, ಇನ್ನೂ ಕೆಲವು ರೈಲುಗಳು ಭಾಗಶಃ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಹಾಗೂ ಮರುನಿಗದಿಗೆ ಒಳಪಡಲಿವೆ ಎಂದು ತಿಳಿಸಿದೆ.

16214 ಎಸ್ಎಸ್ಎಸ್ ಹುಬ್ಬಳ್ಳಿ – ಅರಸೀಕೆರೆ ಎಕ್ಸ್ಪ್ರೆಸ್

ಭಾಗಶಃ ರದ್ದಾಗುವ ರೈಲುಗಳು

17310 ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್

ಎಸ್ಎಸ್ಎಸ್ ಹುಬ್ಬಳ್ಳಿ – ಯಶವಂತಪುರ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಲ್ಲೇ ಪ್ರಯಾಣ ಕೊನೆಗೊಳಿಸಲಿದೆ

17309 ಯಶವಂತಪುರ – ವಾಸ್ಕೊ ಡ ಗಾಮಾ ಎಕ್ಸ್ಪ್ರೆಸ್

16213 ಅರಸೀಕೆರೆ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್

12079 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್ಪ್ರೆಸ್

12080 ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್

26751 ಬೆಳಗಾವಿ – ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್

26752 ಕೆಎಸ್ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್

17347 ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್ಪ್ರೆಸ್

17348 ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್

ಯಶವಂತಪುರ – ಎಸ್ಎಸ್ಎಸ್ ಹುಬ್ಬಳ್ಳಿ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ

12726 ಧಾರವಾಡ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್

ಧಾರವಾಡ – ಹರಿಹರ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಹರಿಹರದಿಂದ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ

16588 ಬಿಕಾನೆರ್ – ಯಶವಂತಪುರ ಎಕ್ಸ್ಪ್ರೆಸ್ (ಫೆಬ್ರವರಿ 15 ರಂದು)

ಗದಗ – ಹೊಸಪೇಟೆ – ಕೊಟ್ಟೂರು – ಅಮರಾವತಿ – ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಸ್ಎಸ್ಎಸ್ ಹುಬ್ಬಳ್ಳಿ ಹಾಗೂ ರಾಣೆಬೆನ್ನೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ

17391 ಕೆಎಸ್ಆರ್ ಬೆಂಗಳೂರು – ಸಿಂಧನೂರು ಎಕ್ಸ್ಪ್ರೆಸ್ (ಫೆಬ್ರವರಿ 17 ರಂದು)

ದಾವಣಗೆರೆ – ಅಮರಾವತಿ – ಕೊಟ್ಟೂರು – ಹೊಸಪೇಟೆ – ಗಿಣಿಗೇರಾ – ಸಿಂಧನೂರು ಮಾರ್ಗವಾಗಿ ಸಂಚಾರ ಇರಲಿದೆ.ಹರಿಹರ, ರಾಣೆಬೆನ್ನೂರು, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಗದಗ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ

17325 ಬೆಳಗಾವಿ – ಮೈಸೂರು ಎಕ್ಸ್ಪ್ರೆಸ್

ದಿನಾಂಕ: 17-02-2026

ಬೆಳಗಾವಿಯಿಂದ 120 ನಿಮಿಷ ತಡವಾಗಿ ಹೊರಡಲಿದೆ

ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ಹೆಚ್ಚುವರಿ ನಿಲುಗಡೆ ಇರಲಿದೆ

ಮಾರ್ಗ ಮಧ್ಯೆ ಈ ರೈಲುಗಳನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಿ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಅವುಗಳೆಂದರೆ

17310 ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್ಪ್ರೆಸ್ (08-02-2026) – 30 ನಿಮಿಷ

16589 ಕೆಎಸ್ಆರ್ ಬೆಂಗಳೂರು – ಸಾಂಗ್ಲಿ ಎಕ್ಸ್ಪ್ರೆಸ್ (08-02-2026) – 40 ನಿಮಿಷ

12650 ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್ಪ್ರೆಸ್ (09-02-2026) – 55 ನಿಮಿಷ

16535 ಮೈಸೂರು – ಪಂಡರಾಪುರ ಎಕ್ಸ್ಪ್ರೆಸ್ (10-02-2026) – 50 ನಿಮಿಷ

11022 ತಿರುನೇಲ್ವೇಲಿ – ದಾದರ್ ಎಕ್ಸ್ಪ್ರೆಸ್ (16-02-2026) – 110 ನಿಮಿಷ

Source link
ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?