Headlines

ಅಮಿತಾಭ್‌ಗೆ ಜಯಾ ಬಿಟ್ಟು ರೇಖಾನ ಮದ್ವೆಯಾಗಿ ಅಂದ ರಾಖಿ, ನಿಮಗ್ಯಾಕೀ ಉಸಾಬರಿ ಎಂದ ನೆಟ್ಟಿಗರು

ಅಮಿತಾಭ್‌ಗೆ ಜಯಾ ಬಿಟ್ಟು ರೇಖಾನ ಮದ್ವೆಯಾಗಿ ಅಂದ ರಾಖಿ, ನಿಮಗ್ಯಾಕೀ ಉಸಾಬರಿ ಎಂದ ನೆಟ್ಟಿಗರು

ಅಮಿತಾಭ್‌ಗೆ ಜಯಾ ಬಿಟ್ಟು ರೇಖಾನ ಮದ್ವೆಯಾಗಿ ಅಂದ ರಾಖಿ, ನಿಮಗ್ಯಾಕೀ ಉಸಾಬರಿ ಎಂದ ನೆಟ್ಟಿಗರು

Rakhi Sawant : ಅಮಿತಾಬ್ ಬಚ್ಚನ್ ಗೆ ರಾಖಿ ಸಾವಂತ್ ಪುಕ್ಕಟ್ಟೆ ಸಲಹೆ ನೀಡಿದ್ದಾರೆ. ಈಗ ಎರಡು ಹೆಂಡ್ತಿ ಟ್ರೆಂಡ್ ನಡೆಯುತ್ತಿದೆ, ಜಯಾ ಬಿಟ್ಟು ರೇಖಾ ಹಿಂದೆ ಹೋಗಿ ಎಂದಿದ್ದಾರೆ ರಾಖಿ ಸಾವಂತ್.

ಬಾಲಿವುಡ್ ಮಾಜಿ ಜೋಡಿಗಳ ಬಗ್ಗೆ ಜನ ಈಗ್ಲೂ ಮಾತನಾಡ್ತಾರೆ. ಅದ್ರಲ್ಲಿ ಅಮಿತಾಬ್ ಬಚ್ಚನ್ ಹಾಗೂ ರೇಖಾ ಮೊದಲ ಸ್ಥಾನದಲ್ಲಿದ್ದಾರೆ. ರೇಖಾ ಹಾಗೂ ಅಮಿತಾಬ್ ಬಚ್ಚನ್ ಪ್ರೀತಿಯಲ್ಲಿ ಜಯಾ ಬಚ್ಚನ್ ವಿಲನ್ ಆಗಿದ್ದು ಹೇಗೆ ಎನ್ನುವ ನಾನಾ ಕಥೆಗಳು ಹರಿದಾಡ್ತಾನೆ ಇರುತ್ವೆ. ಅನೇಕ ಸೆಲೆಬ್ರಿಟಿಗಳು, ರೇಖಾ – ಅಮಿತಾಬ್ ಗೆ ಹತ್ತಿರವಾಗಿದ್ದವರು ಹೇಳಿಕೆ, ಪುಸ್ತಕದ ಮೂಲಕ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾಗಿದೆ. ಈಗ ಡ್ರಾಮಾ ಕ್ವೀನ್ ರಾಖಿ ಸಾವಂತ್ ಎಂಟ್ರಿಯಾಗಿದೆ.

ಕಾಂಟ್ರವರ್ಸಿ ಕ್ವೀನ್ ಎಂದೇ ರಾಖಿ ಪ್ರಸಿದ್ಧಿ ಪಡೆದಿದ್ದಾರೆ. ಎರಡು ಮದುವೆಯಾಗಿ ಮೂರನೇ ಮದುವೆಗೆ ಸಿದ್ಧ ಅಂತ ಹೇಳಿಕೆ ನೀಡಿ ಸುದ್ದಿ ಮಾಡಿದ್ದ ರಾಖಿ, ಮರಾಠಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದಾರೆ. ಅದಕ್ಕೂ ಮುನ್ನ ನಾನಾ ಅವತಾರದಲ್ಲಿ ಕಾಣಿಸಿಕೊಂಡ ರಾಖಿ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಸಲಹೆ ನೀಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗೋ ಸಾಧ್ಯತೆ ಇದೆ.

ರಾಖಿ ಸಾವಂತ್, ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರಿಗೆ ಎರಡನೇ ಮದುವೆಯಾಗಲು ಸಲಹೆ ನೀಡಿದ್ದಾರೆ. ಈಗ ಎರಡು ಮದುವೆ ಟ್ರೆಂಡ್ ನಡೆಯುತ್ತಿದೆ. ನೀವು ಜಯಾ ಬಚ್ಚನ್ ಬಿಟ್ಟು, ರೇಖಾ ಅವರನ್ನು ಮದುವೆಯಾಗಿ. ಜೀವನದ ಮುಂದಿನ ದಿನಗಳಲ್ಲಿ ರೇಖಾ ಜೊತೆ ಆರಾಮಾಗಿ ಕಳೆಯಿರಿ ಅಂತ ರಾಖಿ ಸಾವಂತ್ ಸಲಹೆ ನೀಡಿದ್ದಾರೆ.

ರಾಖಿ ಸಾವಂತ್ ಗೆ ಜಯಾ ಬಚ್ಚನ್ ಕಂಡ್ರೆ ಅಷ್ಟಕಷ್ಟೆ. ತಮ್ಮ ಮಾತನ್ನು ಯಾವುದೇ ಭಯ, ಮುಜುಗರವಿಲ್ಲದೆ ಹೇಳುವ ರಾಖಿ, ಡ್ರಾಮಾ ಮಾಡೋದ್ರಲ್ಲಿ ಮುಂದು. ಜಯಾ ಬಚ್ಚನ್ ಸ್ವಭಾವ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ, ರೇಖಾ ಮದುವೆಯಾಗುವಂತೆ ಅಮಿತಾಬ್ ಬಚ್ಚನ್ ಗೆ ರಾಖಿ ಹೇಳಿದ್ದಾರೆ.

ರಾಖಿ ಸಾವಂತ್ ಪ್ರಕಾರ, ರೇಖಾ ಹಾಗೂ ಅಮಿತಾಬ್ ಬಚ್ಚನ್ ರಾಜ ಮತ್ತು ರಾಣಿಯಂತೆ ಕಾಣ್ತಾರಂತೆ. ಜಯಾ ಬಚ್ಚನ್ ಅವರ ಮನೆ ಸೇವಕಿಯಂತೆ ಕಾಣ್ತಾರಂತೆ. ಅಮಿತಾಬ್ ಬಚ್ಚನ್, ಜಯಾ ಅವರನ್ನು ಏಕೆ ಮದುವೆಯಾದ್ರೂ ತಿಳಿತಿಲ್ಲ. ಈಗ ಎರಡನೇ ಮದುವೆ ಆಗೋ ಅವಕಾಶ ಇದೆ. ಜಯಾ ಬಿಟ್ಟು ರೇಖಾ ಮದುವೆಯಾದ್ರೆ ಅಮಿತಾಬ್ ಖುಷಿಯಾಗಿರ್ತಾರೆ ಅಂತ ರಾಖಿ ಹೇಳಿದ್ದಾರೆ. ಇದನ್ನು ಕೇಳಿದ ಬಳಕೆದಾರರು, ಸಾಕು, ಸುಮ್ಮನಿರಿ, ನಿಮಗ್ಯಾಕೆ ಅವರ ವಿಷ್ಯ ಅಂತ ಕೇಳಿದ್ದಾರೆ.

ರಾಖಿ ಸಾವಂತ್ ಗೆ ಜಯಾ ಬಚ್ಚನ್ ಸ್ವಭಾವ ಮಾತ್ರವಲ್ಲ ಅವರ ಡ್ರೆಸ್ ಮೇಲೂ ಅಸಮಾಧಾನವಿದೆ. ಜಯಾ ಹಳೆ ಸೀರೆ ಉಡ್ತಾರೆ ಅನ್ನೋದೇ ರಾಖಿ ಆರೋಪ. ಜಯಾ ಬರ್ತ್ ಡೇಗೆ ನನ್ನನ್ನು ಆಹ್ವಾನಿಸಿ. ನಾನು ಅವರಿಗೆ ಹೊಸ ಸೂಟ್ ಗಿಫ್ಟ್ ನೀಡ್ತೇನೆ ಅಂತ ರಾಖಿ ಸಾವಂತ್ ಹೇಳಿದ್ದಾರೆ.

ಅವಕಾಶ ಸಿಕ್ಕಿದ್ರೆ ತನ್ನನ್ನು ಎಲ್ಲೂ ಬಿಟ್ಕೊಡೋದಿಲ್ಲ ರಾಖಿ. ಅವರು ಹೇಳೋ ಮಾತನ್ನು ಸುಲಭವಾಗಿ ಯಾರೂ ನಂಬೋದಿಲ್ಲ. ರಾಖಿ ಪ್ರಕಾರ, ಬಾಲಿವುಡ್ ಹೀರೋಯಿನ್ ದುಡುಕ್ತಿದ್ದಾರಂತೆ. ಅವಕಾಶಕ್ಕಾಗಿ ರಾತ್ರಿ ಕಳೆಯುವ ಅವರು ಮೋಸ ಹೋಗ್ತಿದ್ದಾರಂತೆ. ನಾನು ಈವರೆಗೂ ಆ ತಪ್ಪು ಮಾಡಿಲ್ಲ. ನಾಳೆ, ನಾಡಿದ್ದು ಅಂತ ಸುಳ್ಳು ಹೇಳಿ, ಆಕ್ಟಿಂಗ್ ಮಾಡಿ ಬರ್ತಿದ್ದೇನೆ ಅಂತ ರಾಖಿ ಸಾವಂತ್ ಹೇಳ್ಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *