ಖ್ಯಾತ ಬಾಲಿವುಡ್ ನಟಿ ಸಂದರ್ಶನವೊಂದರಲ್ಲಿ, ತಮ್ಮ ಪತಿಯ ಫ್ಯಾಷನ್ ಪ್ರಜ್ಞೆಯ ಬಗ್ಗೆ ಮಾತನಾಡಿದ್ದು, ಅವರು ಧರಿಸುವ ಬಟ್ಟೆಯ ಬಣ್ಣಕ್ಕೆ ಹೊಂದುವಂತಹ ಒಳಉಡುಪನ್ನೇ ಧರಿಸುತ್ತಾರೆ ಎಂಬ ತಮಾಷೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಕೇಳಿ ಎಲ್ಲರರೂ

ಬಾಲಿವುಡ್ ನಟಿಯೊಬ್ಬರು ತಮ್ಮ ಪತಿಯ ಒಳಉಡುಪಿನ ಬಗ್ಗೆ ಮಾತನಾಡಿದ್ದಾರೆ. 23ನೇ ಜೂನ್ 2024ರಲ್ಲಿ ನಟಿಯ ಮದುವೆ ಹಲವು ವಿವಾದಗಳ ನಡುವೆ ನಡೆದಿತ್ತು. ಇಬ್ಬರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತವೆ. ಅಪ್ಪನ ಅನಾರೋಗ್ಯದ ನಡುವೆಯೂ ನಟಿ ಹನಿಮೂನ್‌ಗೆ ತೆರಳಿದ್ದರು.

ಹೌದು, ನಾವು ಹೇಳುತ್ತಿರೋದು ದಬಂಗ್ ಚೆಲುವೆ, ಮೂಗುತಿ ಸುಂದರಿ ಸೋನಾಕ್ಷಿ ಸಿನ್ಹಾ ಬಗ್ಗೆ. ಮೊದಲ ಸಿನಿಮಾದಲ್ಲಿ ಮೋಡಿ ಮಾಡಿದ ನಟಿ ಸೋನಾಕ್ಷಿ ಸಿನ್ಹಾ, ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆ ವೆಬ್ ಸಿರೀಸ್‌ಗಳಲ್ಲಿ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ.

2024ರಲ್ಲಿ ನಟ ಜಹೀರ್ ಇಕ್ಭಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ ನಡೆದಿತ್ತು. ಹಿಂದೂ ನಟಿಯರು ಮುಸ್ಲಿಂ ನಟರನ್ನು ಮದುವೆ ಆಗೋದ್ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಟಿ, ಅದ್ಧೂರಯಾಗಿ ಮದುವೆ ಮಾಡಿಕೊಂಡಿದ್ದರು.

ಸಂದರ್ಶನದಲ್ಲಿ ಪತಿ ಜಹೀರ್ ಇಕ್ಬಾಲ್ ಕುರಿತು ಸೋನಾಕ್ಷಿ ಸಿನ್ಹಾ ಮಾತನಾಡಿದ್ದರು. ಜಹೀರ್ ತುಂಬಾ ತಮಾಷೆ ವ್ಯಕ್ತಿಯಾಗಿದ್ದು, ಸದಾ ನಗಿಸುತ್ತಲೇ ಇರುತ್ತಾರೆ. ಫ್ಯಾಶನ್ ಬಗ್ಗೆ ಜ್ಞಾನವಿರೋ ಜಹೀರ್ ತಾವು ಧರಿಸುವ ಬಟ್ಟೆಗಳ ಬಗ್ಗೆ ಹೆಚ್ಚು ಆಸಕ್ತರಾಗಿರುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನ ಜನತೆಗೆ ಮುದ್ದಾದ ಪ್ರಶ್ನೆ ಕೇಳಿದ ರಕ್ಷಿತಾ ಶೆಟ್ಟಿ: ಬೆಂಗಳೂರಿಗರೇ ನಿಮ್ಮ ಉತ್ತರ ಏನು?

ಸಂದರ್ಶನದಲ್ಲಿ ಮುಂದುವರಿದು ಮಾತನಾಡಿದ ನಟಿ ಸೋನಾಕ್ಷಿ ಸಿನ್ಹಾ, ತಾವು ಧರಿಸುವ ಬಟ್ಟೆಯ ಬಣ್ಣದ ಒಳಉಡುಪ ಧರಿಸುತ್ತಾರೆ. ಮನೆಯ ತಿಜೋರಿಯಲ್ಲಿ ಪ್ರತಿಯೊಂದು ಡ್ರೆಸ್‌ಗೂ ಅದೇ ಬಣ್ಣದ ಚಡ್ಡಿಯನ್ನು ಇಟ್ಟುಕೊಂಡಿರುತ್ತಾರೆ ಎಂದರು. ಸೋನಾಕ್ಷಿ ಮಾತು ಕೇಳಿದಂತೆ ಎಲ್ಲರೂ ಜೋರಾಗಿ ನಕ್ಕಿದ್ದರು. ಸೋನಾಕ್ಷಿ ಸಿನ್ಹಾ ಸೋಶಿಯಲ್ ಮೀಡಿಯಾದಲ್ಲಿ 38 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಇದನ್ನೂ ಓದಿ: ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳು: OTTಯಲ್ಲಿ ಬಹುಪರಾಕ್

Source link
ಗಂಡನ ಚಡ್ಡಿ ರಹಸ್ಯ ಬಿಚ್ಚಿಟ್ಟ ಖ್ಯಾತ ಬಾಲಿವುಡ್ ನಟಿ; ಮದುವೆಯಾಗಿ 9 ತಿಂಗಳು ಆಯ್ತು!