ಬೆಂಗಳೂರು, ಫೆ.10: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವಿನ ಸಂಘರ್ಷವನ್ನು ತಪ್ಪಿಸಲು ಹಾಗೂ ತಡೆಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. GBA ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ.
ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು GBA ಎಂದು ಹೇಳಿದ್ದಾರೆ. ಆಹಾರ ನೀಡುವವರು ಆ ಜಾಗವನ್ನು ಹೊಂದಿರಬೇಕು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ಎಂಬ ಸೂಚನೆ ಇದೆ.
ಇದನ್ನೂ ಓದಿ: ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಸಮಯದಿಂದ ಉಳಿಯಿತು ಕುಟುಂಬದ ಪ್ರಾಣ
ಪಾಲಿಕೆಯವರು ಗುರುತಿಸಲಾದ ಆಹಾರ ಕೇಂದ್ರಗಳು:
| ಪಾಲಿಕೆ ವ್ಯಾಪ್ತಿ | ಆಹಾರ ಕೇಂದ್ರಗಳ ಸಂಖ್ಯೆ |
| ಬೆಂಗಳೂರು ಪೂರ್ವ (ಪೂರ್ವ) | 150 |
| ಬೆಂಗಳೂರು ಕೇಂದ್ರ (ಕೇಂದ್ರ) | 90 |
| ಬೆಂಗಳೂರು ಪಶ್ಚಿಮ (ಪಶ್ಚಿಮ) | 85 |
| ಬೆಂಗಳೂರು ಉತ್ತರ (ಉತ್ತರ) | 70 |
| ಬೆಂಗಳೂರು ದಕ್ಷಿಣ (ದಕ್ಷಿಣ) | 68 |
ಈ ನಿರ್ಧಾರಕ್ಕೆ ಶ್ವಾನಪ್ರಿಯರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರಿಂದ ಅಸಮಾಧಾನ ವ್ಯಕ್ತವಾಗಿದೆ. ನಾಯಿಗಳು ‘ಟೆರಿಟೋರಿಯಲ್’ ಪ್ರವೃತ್ತಿ ಹೊಂದಿದ್ದು, ಒಂದು ಏರಿಯಾದ ನಾಯಿಗಳು ಮತ್ತೊಂದು ಏರಿಯಾಕ್ಕೆ ಹೋಗಿ ಆಹಾರ ಸೇವಿಸುವುದಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಗುರುತಿಸುವುದು ನಾಯಿಗಳ ನಡುವೆ ಕಾದಾಟಕ್ಕೆ ಮತ್ತು ಹಸಿವಿನಿಂದ ಅವರ ಆಕ್ರೋಶಕ್ಕೆ ಕಾರಣ ಎಂದು ಹೇಳಿದರು.
ವರದಿ: ಲಕ್ಷ್ಮೀ ನರಸಿಂಹ
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ