ಕಾರವಾರ, (ಫೆಬ್ರವರಿ 10): ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣ (ಸಿದ್ದಾಪುರ ವಸಂತ ನಾಯ್ಕ ಕೊಲೆ ಪ್ರಕರಣ) ತನಿಖೆ ಆಳಕ್ಕಿಳಿಯದ, ಆರೋಪಿಗಳಾದ ಕಮಲಾಕರ ಭಟ್ (ಜ್ಯೋತಿಷಿ ಕಮಲಾಕರ ಭಟ್) ಮತ್ತು ಪ್ರೇಯಸಿ ಸುಚಿತ್ರಾಳ (ಸುಚಿತ್ರಾ) ಅಕ್ರಮ ಸಂಬಂಧದ ಬಗ್ಗೆ ರೋಚಕ ಹಾಗೂ ಅಷ್ಟೇ ಸಂಗತಿಕಾರಿ ಸಂಗತಿಗಳು ಒಂದೊಂದೇ ಹೊರಬರುತ್ತಿವೆ. ಈ ಜೋಡಿಯ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡದೊಂದು ‘ಬ್ಲ್ಯಾಕ್‌ಮೇಲ್’ (ಬ್ಲ್ಯಾಕ್‌ಮೇಲ್) ಮತ್ತು ‘ಹನಿಟ್ರ್ಯಾಪ್’ (ಹನಿಟ್ರಾಪ್) ಜಾಲವಿತ್ತು ಎಂಬ ಸ್ಫೋಟಕ ಮಾಹಿತಿ ಬಟಾಬಯಲಾಗಿದೆ. ಇನ್ನು ಮೊದಲ ಭೇಟಿಯಲ್ಲೇ ಸುಚಿತ್ರಾ, ಕಮಲಾಕರನನ್ನ ತನ್ನ ಖೆಡ್ಡಾಗೆ ಬೀಳಿಸಿಕೊಂಡಿದ್ದು, ಫಸ್ಟ್ ಭೇಟಿಯಲ್ಲೇ ನಿರೀಕ್ಷೆ ಮೀರಿ ಹಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.
ಮೊದಲ ಭೇಟಿಯಲ್ಲಿ 35 ಸಾವಿರ ರೂ. ಕಮಾಯಿ
ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ. ಇದರಿಂದ ಫುಲ್ ಖುಷ್ ಆದ ಸುಚಿತ್ರಾ, ಅಂದಿನಿಂದ ಕಮಲಕರ್ ಭಟ್ ನ ಹಿಂದೆಯೇ ಬಿದ್ದಿದ್ದಳು. ಹೌದು.. ಮೊದಲ ಭೇಟಿಯಲ್ಲೇ ಕಮಲಾಕರನನ್ನ ತನ್ನ ಖೆಡ್ಡಾಗೆ ಬೀಳಿಸಿಕೊಂಡಿದ್ದ ಸುಚಿತ್ರಾ, ಮೊದಲ ಸಲ ಕಮಲಾಕರ ಜೊತೆಗೆ ಹೋದಾಗ 10 ಸಾವಿರ ಸಿಗುವ ನಿರೀಕ್ಷೆಯಲ್ಲಿದ್ದಳು. ಆದರೆ ಸುಚಿತ್ರಾಳ ಸೌಂದರ್ಯಕ್ಕೆ ಮನಸೋತ ಕಮಲಾಕರ, 35 ಸಾವಿರ ರೂಪಾಯಿ ಕೊಟ್ಟಿದ್ದ. ಮೊದಲ ಭೇಟಿಯಲ್ಲಿ ಕಲಮಕರ್ ಭಟ್, 25 ಸಾವಿರ ರೂ. ಸುಚಿತ್ರಾಳ ಸಂಭಾವನೆ ಮತ್ತು ಶಾಪಿಂಗ್ ಅಂತ 10 ಸಾವಿರ ರೂ. ನೀಡಿದ್ದ. ಇದರಿಂದ ಫುಲ್ ಖುಷ್ ಆಗಿದ್ದ ಸುಚಿತ್ರಾ, ಮೊದಲ ಭೇಟಿಯಲ್ಲಿ ಭಟ್ ನ ಬಗ್ಗೆ ತಿಳಿದುಕೊಂಡಿದ್ದು, ಮೂರೇ ತಿಂಗಳಲ್ಲಿ ಕಮಲಕರ್ ಭಟ್ಟನನ್ನು ಸಂಪೂರ್ಣ ತನ್ನ ತೆಕ್ಕೆಗೆ ಹಾಕಿಕೊಂಡಳು. ಸುಚಿತ್ರಾಳ ಗಂಡನ ಹೇಳಿಕೆಯಂತೆ ಆರು ತಿಂಗಳ ಹಿಂದೆ ಭಟ್ ಜೊತೆಗೆ ಉಳಿದಿದ್ದಳು.
ಇದನ್ನೂ ಓದಿ: ಕಮಲಾಕರ ಭಟ್ ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಾಮದಾಟ, ಕಳ್ಳಾಟ ಬಯಲಿಗೆ
ಮಹೇಶ್ ನಾಯ್ಕ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವಿನ ಸಂಬಂಧ ಆಕಸ್ಮಿಕವಾಗಿ ನಡೆದಿಲ್ಲ. ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ನಂತರ, ಆತನ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸುಚಿತ್ರ ಸುಮಾರು ಒಂದು ವಾರ ಕಾಲ ಕೂಲಂಕಷವಾಗಿ ‘ಸ್ಟಡಿ’ ಮಾಡಿದ್ದಳು. ಆರಂಭದಲ್ಲಿ ಕೇವಲ 1 ರಿಂದ 2 ಲಕ್ಷ ರೂಪಾಯಿ ಹಣದ ಆಸೆಗಾಗಿ ಆಕೆ ಕಮಲಾಕರ ಭಟ್ ಜೊತೆ ದೈಹಿಕ ಸಂಬಂಧ ಬೆಳೆಸಲು ಮುಂದಾಗಿದ್ದಳು. ಆದರೆ, ಅಸಲಿ ಆಟ ಶುರುವಾಗಿದ್ದೇ ಅಲ್ಲಿಂದ. ಕಮಲಾಕರ ಭಟ್ ಜೊತೆ ಏಕಾಂತದಲ್ಲಿದ್ದಾಗ, ಆತನಿಗೆ ತಿಳಿಯದಂತೆ ಸುಚಿತ್ರ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ಮಾಡಿಕೊಂಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುಚಿತ್ರಾಳ ಬ್ಲ್ಯಾಕ್‌ಮೇಲ್‌ಗೆ ಹೆದರಿದ್ದ ಭಟ್
ಕಮಲಾಕರ ಭಟ್ ಟಿವಿ ಚಾನೆಲ್‌ಗಳ ಮೂಲಕ ರಾಜ್ಯದ ಜನತೆಗೆ ಜ್ಯೋತಿಷ್ಯ ಹೇಳುತ್ತಾ ಸಾಕಷ್ಟು ಹೆಸರು ಮತ್ತು ಖ್ಯಾತಿ ಗಳಿಸಿದ್ದ ವ್ಯಕ್ತಿ. ಆತ ನಡೆಸುತ್ತಿದ್ದ ಐಷಾರಾಮಿ ಜೀವನವನ್ನು ಕಂಡ ಸುಚಿತ್ರಾ, ತನ್ನ ಬಳಿ ಇದ್ದ ಅಶ್ಲೀಲ ವಿಡಿಯೋವನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದಳು. ‘ನನ್ನನ್ನು ಮತ್ತು ನನ್ನ ಮಕ್ಕಳನ್ನು ನೀನೇ ಸಾಕಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ನಿನ್ನ ಮಾನ ಮರ್ಯಾದೆ ಹರಾಜು ಹಾಕುತ್ತೇನೆ, ವಿಡಿಯೋ ಲೀಕ್ ಮಾಡುತ್ತೇನೆ’ ಎಂದು ಆಕೆ ಕಮಲಾಕರನಿಗೆ ಬೆದರಿಕೆ ಹಾಕಿದ್ದಳು. ಇದರಿಂದ ಸಮಾಜದಲ್ಲಿ ತಾನು ಗಳಿಸಿದ್ದ ಹೆಸರಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಭಯಕ್ಕೆ ಬಿದ್ದ ಕಮಲಾಕರ ಭಟ್, ಸುಚಿತ್ರಾಳ ಬ್ಲ್ಯಾಕ್‌ಮೇಲ್‌ಗೆ ಮಣಿದಿದ್ದ. ಪರಿಣಾಮವಾಗಿ, ಆಕೆಯನ್ನು ಮತ್ತು ಆಕೆಯನ್ನು ಕರೆದುಕೊಂಡು ಬಂದು ಶಿವಮೊಗ್ಗ ಸೇರಿ ಬೇರೆಡೆ ಪ್ರತ್ಯೇಕ ಮನೆ ಮಾಡಿ ವಾಸವಾಗಿದ್ದರು.
ಆಕೆ ಕೇಳಿದ್ದನ್ನು ಇಲ್ಲ ಎಂದಿಲ್ಲ. ಆಕೆ ಕೇಳಿದ್ದಕ್ಕೆ ಎರಡು ಕಾರು, ಬುಲೆಟ್ ಬೈಕ್ ಕೊಡಿಸಿದ್ದ. ಹೀಗೆ ಹಣ ಮತ್ತು ವಿಡಿಯೋ ಬ್ಲ್ಯಾಕ್‌ಮೇಲ್‌ನಿಂದ ಆರಂಭವಾದ ಸಂಬಂಧ, ಅಂತಿಮವಾಗಿ ಅಮಾಯಕ ವಸಂತ ನಾಯ್ಕ ಅವರ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡಿದೆ.