ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?

ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?


ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 10: ಆಂಥ್ರೋಪಿಕ್‌ನ ಸೇಫ್‌ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥ ಮೃಣಾಂಕ್ ಶರ್ಮಾ (ಮೃಣಾಂಕ್ ಶರ್ಮಾ) ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಜಗತ್ತು ವಿನಾಶದ ಅಂಚಿನಲ್ಲಿದೆ (The World in peril) ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ರಾಜೀನಾಮೆಗೆ ನಿರ್ದಿಷ್ಟ ಕಾರಣ ನೀಡದೇ ನಿಗೂಢವಾಗಿರುವ ಅವರ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ತಮ್ಮ ಟ್ವೀಟ್ ಅವರು ತಾವು ರಾಜೀನಾಮೆ ನೀಡಲು ಕಾರಣವೇನೆಂದು ವಿವರಿಸಿ ಬರೆದಿರುವ ಪತ್ರದಲ್ಲಿ ಲಗತ್ತಿಸಿದ್ದಾರೆ.

ಮೃಣಾಂಕ್ ಶರ್ಮಾ ಅವರು ಆಂತ್ರೋಪಿಕ್‌ನಲ್ಲಿ ಸೇಫ್‌ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರು. ‘ಜಗತ್ತು ವಿನಾಶದ ಅಂಚಿನಲ್ಲಿದೆ’ ಎಂದಿರುವ ಅವರ ಮಾತಿನಲ್ಲಿ ನಿಜವಾಗಿಯೂ ನಿಗೂಢತೆಯನ್ನು ಹೊಂದಿದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್ ನಿಂದ ಎಐ ಸಂಚಲನ; ಈ ಕಂಪನಿಯ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

‘ಜಗತ್ತು ವಿನಾಶದಂಚಿನಲ್ಲಿದೆ. ಎಐ, ಅಥವಾ ಬಯೋವೆಪನ್‌ಗಳಷ್ಟೇ ಅಲ್ಲ, ಪರಸ್ಪರ ಜೋಡಿತವಾದ ವಿವಿಧ ಬಿಕ್ಕಟ್ಟುಗಳಿಂದ ಈ ಜಗತ್ತು ಅಪಾಯದಲ್ಲಿದೆ. ಈ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದಷ್ಟು ವಿವೇಕ ನಮ್ಮಲ್ಲಿ ಬೆಳೆಯುವ ಅವಶ್ಯಕತೆ ಇದೆ..’ ಎಂದು ಮೃಣಾಂಕ್ ಶರ್ಮಾ ಹೇಳಿದ್ದಾರೆ.

ಅಂದರೆ, ಮನುಷ್ಯನ ಶಕ್ತಿಯು ಆತನ ಜವಾಬ್ದಾರಿಗಳನ್ನು ಮೀರಿ ಬೆಳೆಯುತ್ತಿದೆ. ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ ಎಂಬರ್ಥದಲ್ಲಿ ಆಂಥ್ರೊಪಿಕ್‌ನ ಈ ಉನ್ನತ ಅಧಿಕಾರಿ ಹೇಳಿರುವುದು ನಿಜವಾಗಿ ಯಾವ ಮುಂದಿನ ದಾರಿಯ ಬಗ್ಗೆ ಯಾರಿಗಾದರೂ ಕಳವಳ ಮೂಡಬಹುದು.

ಎಐ ಸುರಕ್ಷತೆ ವಿಚಾರದ ಬಗ್ಗೆ ತಮ್ಮ ಕಂಪನಿ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ ಎಂಬುದು ಮೃಣಾಂಕ್ ಬೇಸರ. ‘ಮೌಲ್ಯಗಳ ಆಧಾರದ ಮೇಲೆ ಕ್ರಿಯೆಗಳು ನಡೆಯುವುದು ಈಗ ಬಹಳ ಕಷ್ಟವೆಂಬುದು ಬಾರಿ ತೋರುತ್ತಿದೆ. ಯಾವ ಸಂಸ್ಥೆಯು ಅದನ್ನು ನಿರ್ಲಕ್ಷಿಸಲು ಮತ್ತು ನನ್ನಲ್ಲಿ ನಿರಂತರ ಒತ್ತಡ ಬರುವುದನ್ನು ಕಂಡಿದ್ದೇನೆ’ ಎಂದು ಆಂಥ್ರೊಪಿಕ್ನ ಸೇವೆಯ ರಿಸರ್ಚ್ ಟೀಮ್ ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ: ಐಟಿ ಸೆಕ್ಟರ್‌ಗೆ ಆಂಥ್ರೊಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ಮೃಣಾಂಕ್ ಶರ್ಮಾ ಅವರ ಆಂಥ್ರೋಪಿಕ್ ಅವಧಿ ನಿನ್ನೆ (ಫೆ. 9) ಮುಗಿದಿದೆ. ಇದೀಗ ಅವರು ಬ್ರಿಟನ್ ದೇಶಕ್ಕೆ ಮರಳಿ ಹೋಗಲಿದ್ದಾರಂತೆ. ಒಂದಷ್ಟು ದಿನ ಕಾಣದ ಕಣ್ಮರೆಯಲ್ಲಿ ಇದ್ದುಬಿಡುವುದಾಗಿ ಹೇಳಿದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *