Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ದೊಡ್ಮನೆ ಹಬ್ಬ ಎಂದು ಕಾರ್ಯಕ್ರಮ ಮಾಡಲಾಗಿದೆ. ಆಗ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾವ್ ಅವರು ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ್ದಾರೆ.

ದೊಡ್ಮನೆ ಹಬ್ಬದಲ್ಲಿ ಒಂದು ಗೇಮ್ ಶೋ ಆಡಿಸಲಾಗಿದೆ. ಅಲ್ಲಿ ಕೆಲವು ಸ್ಪರ್ಧಿಗಳ ಫೋಟೋಗಳನ್ನು ಇಡಲಾಗಿದೆ. ಯಾರು ಯಾರ ಹಲ್ಲನ್ನು ಮುರಿಯಲು ಇಷ್ಟಪಡ್ತಾರೆ? ಇದಕ್ಕೆ ಕಾರಣ ಏನು ಎಂದು ಹೇಳಿ ಆ ಸ್ಪರ್ಧಿಗಳ ಫೋಟೋಕ್ಕೆ ಬಾಲ್ ಎಸೆಯಬೇಕು.

ಸೀರಿಯಲ್ ಬರೋವರೆಗೂ ಎಲ್ಲರೂ ಸಾಹಿತ್ಯ ಎಂದು ಹೇಳಿ ಅಳುತ್ತಿದ್ದರು. ಆದರೆ ಸತೀಶ್ ಸರ್ ರಾತ್ರೋರಾತ್ರಿ ನನ್ನ ಶರ್ಟ್ ಕಳ್ಳಿ ಮಾಡಿದರು. ಈ ಮಾತು ಕೇಳಿ ಸತೀಶ್ ಕ್ಯಾಡಬಮ್ಸ್ ಕೂಡ ನಕ್ಕಿದ್ದಾರೆ.

ಬಿಗ್ ಬಾಸ್ ಮನೆಯೊಳಗಡೆ ಹಲ್ಲು ಸೆಟ್ ಎಂದು ರೇಗಿಸಿದ್ದಾನೆ ಎಂದು ಅಶ್ವಿನಿ ಗೌಡ ಅವರು ಆರೋಪ ಮಾಡಿದ್ದಾರೆ. ಆಗ ಗಿಲ್ಲಿ ನಟ ಅವರು ನಾನು ಕೂಡ ಈಗ ಹಲ್ಲು ಸೆಟ್ ಮುರಿಬಹುದಿತ್ತು, ಆದರೆ ಅವರೇ ಹಲ್ಲು ಸೆಟ್ ಎಂದು ಹೇಳಿದರು, ನಾನು ಹೇಗೆ ಹಲ್ಲು ಮುರಿಯಲಿ? ಎಂದು ತಿರುಗೇಟು ಕೊಟ್ಟಿದ್ದಾರೆ.

ಸೀಸನ್ ಪೂರ್ತಿ ರೇಗಿಸಿದ್ದಕ್ಕೆ ಕಾವ್ಯ ಶೈವ ಅವರು ಗಿಲ್ಲಿ ನಟ ಹಲ್ಲು ಮುರಿದಿದ್ದಾರೆ. ಆಗ ಗಿಲ್ಲಿ ನಟ, “ಬಿಗ್ ಬಾಸ್ ಮನೆಯಲ್ಲಿ ರೇಗಿಸೋದಲ್ಲ, ಮನೆ ಹತ್ತಿರ ಹೋಗಿ ರೇಗಿಸ್ತೀನಿ, ಮೆಸೇಜ್ ಅಲ್ಲಿ ರೇಗಿಸ್ತೀನಿ” ಎಂದು ಗಿಲ್ಲಿ ನಟ ಹೇಳಿದ್ದಾರೆ.

ಗಿಲ್ಲಿ ನಟ ಹಾಗೂ ಕಾವ್ಯ ಶೈವ ಮಾತು ಕೇಳಿ, ರಕ್ಷಿತಾ ಶೆಟ್ಟಿ ಅವರು ಮುಖವನ್ನು ವ್ಯಂಗ್ಯ ಮಾಡಿದ್ದಾರೆ. ಪ್ರೋಮೋದಲ್ಲಿ ಈ ಹಾವ ಭಾವ ಸೆರೆಯಾಗಿದೆ.

Source link
Bigg Boss ಮುಗಿದ್ಮೇಲೂ ಕಾವ್ಯ ಹಿಂದೆ ಬಿದ್ದ ಗಿಲ್ಲಿ ನಟ; ಮೆಸೇಜ್ ಮೇಲೆ ಮೆಸೇಜ್; ಉರ್ಕೊಂಡ ರಕ್ಷಿತಾ!