ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರಿಯನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರಿನ ವಿಶುಕುಮಾರ್ ಎಂಬವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ರಸ್ತೆ ಪಕ್ಕ ಇದೆ ಎಂದು ಮರವನ್ನು ಕಡಿದುಹಾಕಿದ್ದಾರೆ. ನ್ಯಾಯಾಲಯದಲ್ಲಿ ಪರಿಹಾರವನ್ನು ನೀಡಬೇಕೆಂದು ಆದೇಶವಾದರೂ ಸಹ ಅರಣ್ಯ ಇಲಾಖೆ ಕೊಟ್ಟಿಲ್ಲ. ಮೂವತ್ತು ಮರ ಕಡಿದಿದ್ದಾರೆ. ಅದಕ್ಕಾಗಿ ನಾನು ಮುನ್ನೂರು ಕಡಿಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.