ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (ಬಿಬಿಕೆ 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (ಕಲರ್ಸ್ ಕನ್ನಡ) ವಾಹಿನಿಯು ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ. ಫೆಬ್ರವರಿ 14 ರಂದು ‘ಕಲರ್ಸ್ ದೊಡ್ಮನೆ ಹಬ್ಬ’ (ಕಲರ್ಸ್ ದೊಡ್ಮನೆ ಹಬ್ಬ) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14 ರಂದು ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ನಡೆಯಲಿದೆ ಎಂದು ವಾಹಿನಿ ಹೇಳಿದೆ.
‘ಕಲರ್ಸ್ ದೊಡ್ಮನೆ ಹಬ್ಬ’ ಕಾರ್ಯಕ್ರಮ ಫೆ.14ರಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಎಲ್ಲ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಕಾರ್ಯಕ್ರಮದ ವಿಶೇಷ ಆಗಿರುತ್ತದೆ.
ಬಿಗ್ ಬಾಸ್ ಮನೆಯೊಳಗಿನ ಗಂಭೀರ ವಾತಾವರಣದ ಬದಲಿಗೆ ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ನಕ್ಕು ನಗಿಸುವ ಸಾಕಷ್ಟು ಝಲಕ್ಗಳು ‘ಕಲರ್ಸ್ ದೊಡ್ಮನೆ ಹಬ್ಬ’ದ ಹೈಲೈಟ್ ಆಗಿರಲಿವೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಅವರು ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇವಲ ಹಾಡು, ಕುಣಿತದಂತೆ ಬಿಗ್ ಬಾಸ್ ಮನೆಯ ಟಾಸ್ಕ್ಗಳನ್ನು ನೆನಪಿಸುವಂತಹ ತಮಾಷೆಯ ಆಟಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸುತ್ತದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಗಿಲ್ಲಿ ನಟ ಕೂಡ ಭಾಗಿ ಆಗಿದ್ದಾರೆ.
ಇದನ್ನೂ ಓದಿ: ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್
‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರ ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮದ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್ ಬಾಸ್ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್ ಸಹ ಈ ಸಂಭ್ರಮದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.