ಟಿ20 ವಿಶ್ವಕಪ್ 2ನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ಅಭಿಷೇಕ್ ಶರ್ಮಾ ಡೌಟ್

ಟಿ20 ವಿಶ್ವಕಪ್ 2ನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ಅಭಿಷೇಕ್ ಶರ್ಮಾ ಡೌಟ್

ಟಿ20 ವಿಶ್ವಕಪ್ 2ನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ಅಭಿಷೇಕ್ ಶರ್ಮಾ ಡೌಟ್

ಟಿ20 ವಿಶ್ವಕಪ್ 2ನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ಅಭಿಷೇಕ್ ಶರ್ಮಾ ಡೌಟ್, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಇಲ್ಲವಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಇದೀಗ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆ ಕ್ಷೀಣಿಸಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ 2ನೇ ಟಿ20 ಪಂದ್ಯದಲ್ಲಿ ಆಡುವ ಸಾಧ್ಯತೆ ಕುರಿತು ತಂಡದ ಸಹಾಯಕ ಕೋಚ್ ರ್ಯಾನ್ ಟೆನ್ ಡೊಶ್ಚೆಟ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ಶರ್ಮಾ ಹೊಟ್ಟೆ ನೋವು, ಅಜೀರ್ಣ ಸೇರಿದಂತೆ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಭಾರತದ 2ನೇ ಟಿ20 ಪಂದ್ಯಕ್ಕೆ ಎರಡು ದಿನದ ಸಮಯವಕಾಶವಿರುವ ಕಾರಣ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸದ್ಯದ ಪ್ರಕಾರ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ದ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ನಮೀಬಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಅಭ್ಯಾಸ ನಡೆಸಿದೆ. ಈ ವೇಳೆಯೂ ಅಭಿಷೇಕ್ ಶರ್ಮಾ ಗೈರಾಗಿದ್ದರು. ತಂಡದ ಇತರ ಸದಸ್ಯರು ಅಭ್ಯಾಸ ನಡೆಸಿದ್ದಾರೆ. ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡುವ ಅಭಿಷೇಕ್ ಶರ್ಮಾ ಗೈರಾದರೆ ತಂಡದ ಸಮತೋಲನ ತಪ್ಪುವ ಸಾಧ್ಯತೆ.

ಅಭಿಷೇಕ್ ಶರ್ಮಾ 2ನೇ ಪಂದ್ಯಕ್ಕೆ ಗೈರಾದರೆ ಈ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಭ್ಯಾಸದ ವೇಳೆಯೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಆದರೆ ಸೌತ್ ಆಫ್ರಿಕಾ ಸರಣಿಯಲ್ಲಿ ಸಂಜು ಸ್ಯಾಮ್ಸನ್ ರನ್ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಸ್ಪಿನ್ ಆಯ್ಕೆಯನ್ನು ಟೀಂ ಇಂಡಿಯಾ ಪರಿಗಣಿಸಿದರೆ ವಾಶಿಂಗ್ಟನ್ ಸುಂದರ್ ಆಯ್ಕೆಯಾಗುವ ಸಾಧ್ಯತೆ ಇದೆ.

ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳು ಸಾಧ್ಯತೆ ಇದೆ. ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಗೈರಾಗಿದ್ದರುು. ಆದರೆ ನಮೀಬಿಯಾ ವಿರುದ್ದದ ಪಂದ್ಯಕ್ಕೆ ಬುಮ್ರಾ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಇದೆ.

ಬುಮ್ರಾ ತಂಡಕ್ಕೆ ಮರಳುವ ಸಾಧ್ಯತೆ

Source link

Leave a Reply

Your email address will not be published. Required fields are marked *