2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!

’ಜೋಶ್’ ಖ್ಯಾತಿಯ ನಟಿ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಪತಿ ಶಾನಿದ್ ಆಸಿಫ್ ಮತ್ತು ಮಗನೊಂದಿಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದಾರೆ.

ಜೋಶ್‌, ರಾಧಾನ ಗಂಡ ಹಾಗೂ 100ನಂಥ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪೂರ್ಣ ಅಲಿಯಾಸ್ ಶಮ್ನಾ ಖಾಸಿಮ್ ಶೀಘ್ರದಲ್ಲೇ ಮತ್ತೆ ತಾಯಿಯಾಗಲಿದ್ದಾರೆ.

ಅವರು ಪ್ರಸ್ತುತ 2ನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ. ಇತ್ತೀಚೆಗೆ, ತನ್ನ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದಿನವರೆಗೂ ಟಾಲಿವುಡ್‌ನಲ್ಲಿ ಸ್ಟಾರ್‌ ನಾಯಕಿಯಾಗಿ ಮಿಂಚಿದ್ದ ಪೂರ್ಣ ಅಲಿಯಾಸ್ ಶಮ್ನಾ ಕಾಸಿಮ್, ಮದುವೆ ಮತ್ತು ಮಕ್ಕಳಾದ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ಈಗ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ.

ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಪೂರ್ಣಾ ಹಲವಾರು ಟಿವಿ ಸೀರಿಯಲ್‌ ಮತ್ತು ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರು. ನಟಿ ಇತ್ತೀಚೆಗೆ ಬಾಲಯ್ಯ ಅವರ ಅಖಂಡ 2 ತಾಂಡವಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪೂರ್ಣ ಮೂರು ವರ್ಷಗಳ ಹಿಂದೆ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅವರನ್ನು ರಹಸ್ಯವಾಗಿ ವಿವಾಹವಾದರು. ದಂಪತಿಗೆ ಈಗಾಗಲೇ ಹಮ್ದಾನ್ ಆಸಿಫ್ ಅಲಿ ಎಂಬ ಮಗನಿದ್ದಾನೆ.

ಈಗ ಮತ್ತೆ ಗರ್ಭಿಣಿಯಾಗಿರುವ ಪೂರ್ಣಾ ಇತ್ತೀಚೆಗೆ ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಪತಿ ಮತ್ತು ಮಗನೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು.

Source link

Leave a Reply

Your email address will not be published. Required fields are marked *