ಇತ್ತೀಚಿಗೆ ಪಾರಿವಾಳಗಳ ಸಂಖ್ಯೆ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಈ ಪಾರಿವಾಳದ ಕಾಟ ತಪ್ಪಿದ್ದಲ್ಲ. ಆರೋಗ್ಯ ಹಾಳು ಮಾಡುವ ಪಾರಿವಾಳ ಮನೆಗೆ ಬರ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.

ಬಾಲ್ಕನಿ ಹಾಗೂ ಟೆರೇಸ್ ಪಾರಿವಾಳಗಳು ಗೂಡಾಗ್ತಿದೆ. ನೀವು ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಕೊಳ್ಳಿ, ಕೆಲವೇ ಕ್ಷಣಗಳಲ್ಲಿ ನಿಮ್ಮ ಬಾಲ್ಕನಿಯನ್ನು ಅವು ಹಾಳು ಮಾಡುತ್ವೆ. ಪಾರಿವಾಳದ ಸದ್ದು, ಅದರ ಕೊಳಕು ಬರೀ ಮನೆ ಸ್ವಚ್ಛತೆ ಹಾಳು ಮಾಡೋದು ಮಾತ್ರವಲ್ಲ ಆರೋಗ್ಯಕ್ಕೂ ಹಾನಿಕಾರಕ. ಅನೇಕರು ಪಾರಿವಾಳಗಳನ್ನು ಮನೆಯಿಂದ ದೂರ ಇಡಲು ಕೆಮಿಕಲ್ ಪ್ರಯೋಗ ಮಾಡ್ತಾರೆ. ಆದ್ರೆ ಇದು ಪರಿಸರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯಕ್ಕೆ ಅಪಾಯಕಾರಿ. ನೀವು ಮನೆಯಲ್ಲೇ ನೈಸರ್ಗಿಕ ಉಪಾಯಗಳನ್ನು ಮಾಡಿ ಪಾರಿವಾಳಗಳನ್ನು ದೂರ ಓಡಿಸಬಹುದು.

ಪಾರಿವಾಳಗಳು ಸ್ವಭಾವತಃ ತುಂಬಾ ಅಂಜುಬುರುಕರು. ಅವು ಪರಭಕ್ಷಕಗಳಿಗೆ ಭಯಪಡುತ್ತವೆ. ನೀವು ಪಾರಿವಾಳ ಹೆಚ್ಚು ಬರುವ ಸ್ಥಳದಲ್ಲಿ ಪ್ರಾಣಿಗಳ ಗೊಂಬೆಯನ್ನು ಇಡಬಹುದು. ಬಾಲ್ಕನಿ ಅಥವಾ ಟೆರೇಸ್ನಲ್ಲಿ ನಾಯಿ, ಬೆಕ್ಕಿನ ಗೊಂಬೆ ಅಥವಾ ಪ್ಲಾಸ್ಟಿಕ್ ಮಂಗಗಳನ್ನುಇಡಬಹುದು. ದೂರದಿಂದ ಪ್ರಾಣಿ ಕುಳಿತಿವೆ ಎಂದು ಪಾರಿವಾಳಗಳು ಭಾವಿಸುತ್ತವೆ. ಮತ್ತೆ ಆ ಸ್ಥಳಕ್ಕೆ ಬರುವ ಧೈರ್ಯವನ್ನು ಅವು ಮಾಡೋದಿಲ್ಲ. ಒಂದೇ ಸ್ಥಳದಲ್ಲಿ ಪ್ರಾಣಿಗಳ ಗೊಂಬೆಯನ್ನು ನೀವು ಇಡಬೇಡಿ. ವಾರಕ್ಕೆ ಒಂದೆರಡು ದಿನ ಅವುಗಳ ಸ್ಥಳವನ್ನು ಬದಲಿಸಿ. ಆಗ ಪಾರಿವಾಳಗಳಿಗೆ ಸತ್ಯದ ಅರಿವಾಗೋದಿಲ್ಲ. ಅದೇ ನೀವು ಒಂದೇ ಸ್ಥಳದಲ್ಲಿ ಅದನ್ನಿಟ್ಟರೆ ಅವು ನಕಲಿ ಎಂಬುದನ್ನು ತಿಳಿದು ಮತ್ತೆ ಬರಲು ಶುರು ಮಾಡುತ್ವೆ.

ಪಾರಿವಾಳಗಳ ಕಣ್ಣುಗಳು ಬಹಳ ಸೂಕ್ಷ್ಮವಾಗಿವೆ. ಅವು ಹಠಾತ್ ಹೊಳೆಯುವ ಬೆಳಕು ಅಥವಾ ಪ್ರಜ್ವಲಿಸುವಿಕೆಯನ್ನು ಸಹಿಸುವುದಿಲ್ಲ. ನೀವು ಹಳೆಯ, ಹಾಳಾದ ಸಿಡಿ ಅಥವಾ ರಿಪ್ಲೆಕ್ಟಿವ್ ಟೇಪ್ ಅನ್ನು ಬಾಲ್ಕನಿಯಲ್ಲಿರುವ ದಾರಕ್ಕೆ ನೇತುಹಾಕಬಹುದು. ಗಾಳಿ ಬೀಸಿದಾಗ ಮತ್ತು ಸೂರ್ಯನ ಬೆಳಕು ಅವುಗಳ ಮೇಲೆ ಬಿದ್ದಾಗ, ಅವು ಹೊಳೆಯುತ್ತವೆ. ಇವು ಪಾರಿವಾಳಗಳನ್ನು ಗೊಂದಲಗೊಳಿಸುತ್ತವೆ. ಹೆದರಿ ಪಾರಿವಾಳಗಳು ಓಡಿ ಹೋಗುತ್ತವೆ.

ಪಾರಿವಾಳಗಳಿಗೆ ಅತಿಯಾದ ಶಬ್ಧ ಕೂಡ ಇಷ್ಟವಾಗೋದಿಲ್ಲ. ನೀವು ಗಾಳಿ ಚೈಮ್ ಅಥವಾ ಸಣ್ಣ ಗಂಟೆಯನ್ನು ಪಾರಿವಾಳಗಳು ಬರುವ ಜಾಗದಲ್ಲಿ ನೇತು ಹಾಕಬಹುದು. ಗಾಳಿಗೆ ಗಂಟೆಗಳು ಶಬ್ಧ ಮಾಡಿದಾಗ, ಪಾರಿವಾಳಗಳು ಭಯಗೊಳ್ಳುತ್ತವೆ. ನೀವ ಸಣ್ಣ ಸಣ್ಣ ಕಲ್ಲುಗಳನ್ನು ಪ್ಲಾಸ್ಟಿಕ್ ನ ಖಾಲಿ ಬಾಟಲಿಯಲ್ಲಿ ತುಂಬಿ ಅದನ್ನು ನೇತುಹಾಕಬಹುದು. ಗಾಳಿಗೆ ಅವು ಶಬ್ಧ ಮಾಡಿದಾಗ ಪಾರಿವಾಳ ಹತ್ತಿರ ಬರೋದಿಲ್ಲ.

ಪಾರಿವಾಳಗಳು ಕೆಲವು ಕಟುವಾದ ವಾಸನೆಗಳನ್ನು ಇಷ್ಟಪಡುವುದಿಲ್ಲ. ಹಾಗಂತ ನೀವು ಮಾರ್ಕೆಟ್ ನಿಂದ ಕಟು ವಾಸನೆಯುಳ್ಳ ರಾಸಾಯನಿಕಗಳನ್ನು ಖರೀದಿ ಮಾಡುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿರುವ ಪದಾರ್ಥಗಳನ್ನು ನೀವು ಬಳಸ್ಬಹುದು. ಬಾಲ್ಕನಿ ಅಥವಾ ಟೆರೇಸ್ ಗೆ ಪಾರಿವಾಳಗಳು ಹೆಚ್ಚಾಗಿ ಬರ್ತಿದ್ದರೆ ಅಲ್ಲಿ ಕರಿಮೆಣಸಿನ ಪುಡಿ, ಒಣಗಿದ ಕೆಂಪು ಮೆಣಸಿನಕಾಯಿ ಪುಡಿ ಅಥವಾ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಈ ಮಸಾಲೆಗಳ ಕಟುವಾದ ವಾಸನೆಯನ್ನು ಪಾರಿವಾಳಗಳು ಸಹಿಸುವುದಿಲ್ಲ. ಆ ಜಾಗಕ್ಕೆ ಅವು ಮತ್ತೆ ಬರೋದಿಲ್ಲ.

ಪಾರಿವಾಳಗಳು ಸಮತಟ್ಟಾದ, ಸ್ಥಿರವಾದ ಮೇಲ್ಮೈ ಮೇಲೆ ಕುಳಿತುಕೊಳ್ಳಲು ಬಯಸುತ್ತವೆ. ಅವು ಕುಳಿತುಕೊಳ್ಳುವ ಜಾಗವನ್ನು ನೀವು ಜಾರುವಂತೆ ಮಾಡ್ಬಹುದು. ಪಾರಿವಾಳ ಕುಳಿತುಕೊಳ್ಳುವ ಜಾಗಕ್ಕೆ ಎಣ್ಣೆ ಅಥವಾ ಗ್ರೀಸ್ ಹಚ್ಚಬೇಕು. ಪಾರಿವಾಳಗಳ ಹಿಡಿತ ದುರ್ಬಲವಾಗಿದ್ದಾಗ ಮತ್ತು ಅವುಗಳ ಪಾದಗಳು ಜಾರಿದಾಗ, ಅವು ಜಾಗ ಬದಲಿಸುತ್ತವೆ. ಮತ್ತೆ ಅಲ್ಲಿಗೆ ಬರುವ ಪ್ರಯತ್ನ ಮಾಡದಿಲ್ಲ.

Source link
ಪಾರಿವಾಳಗಳ ಕಾಟ ಮಿತಿಮೀರಿದ್ರೆ ಸಿಂಪಲ್ ಟಿಪ್ಸ್ ಫಾಲೋ ಮಾಡಿ, ಮನೆ ಹತ್ತಿರವೂ ಬರಲ್ಲ