ಸೈನಿಕ ಸಹೋದರನಿಗಾಗಿ ವಿದೇಶದಿಂದ ಮರಳಿದ ನಟಿ ಸೆಲಿನಾ, ಇವರ ಕತೆಯೇ ರೋಚಕ

ಸೈನಿಕ ಸಹೋದರನಿಗಾಗಿ ವಿದೇಶದಿಂದ ಮರಳಿದ ನಟಿ ಸೆಲಿನಾ, ಇವರ ಕತೆಯೇ ರೋಚಕ


ಸೆಲಿನಾ ಜೇಟ್ಲಿ (ಸೆಲಿನಾ ಜೇಟ್ಲಿ) 2000ರಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ, ತೆಲುಗು ಮತ್ತು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದ ಸೆಲಿನಾ ಜೇಟ್ಲಿ 2012 ರಲ್ಲಿ ತಾಯಿಯಾದ ಬಳಿಕ ನಟನೆಯಿಂದ ದೂರ ಉಳಿದರು. ಕೆಲವು ವರ್ಷಗಳ ಹಿಂದೆ ಸೆಲಿನಾ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ. ಅದೂ ತಮ್ಮ ಸೈನಿಕ ಸಹೋದರನಿಗಾಗಿ. ಇದೀಗ ತಮ್ಮ ಸಹೋದರನಿಗಾಗಿ ಹೋರಾಡುತ್ತಿದ್ದಾರೆ.

ಸೆಲಿನಾ ಜೇಟ್ಲಿಯ ಸಹೋದರ ವಿಕ್ರಾಂತ್ ಜೇಟ್ಲಿ ಭಾರತೀಯ ಸೇನೆಯ ಮೇಜರ್ ಆಗಿದ್ದರು. ಆದರೆ ಈಗ ಅವರು ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ನಿವೃತ್ತ ಮೇಜರ್ ಆಗಿರುವ ವಿಕ್ರಾಂತ್ ಜೇಟ್ಲಿ ಅವರು 2016 ರಲ್ಲಿ ನಿವೃತ್ತರಾದ ಬಳಿಕ ದುಬೈನಲ್ಲಿ ನೆಲೆಸಿ ಅಲ್ಲಿಯೇ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು. ಆದರೆ 2024 ರಲ್ಲಿ ಯುಎಇ ಪೊಲೀಸರು ವಿಕ್ರಾಂತ್ ಅವರನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ವಿಕ್ರಾಂತ್ ಅವರನ್ನು ಬಂಧಿಸಲಾಯಿತು, ಅವರ ಭೇಟಿಗೂ ಸಹ ಯಾರಿಗೂ ಅವಕಾಶ ನೀಡಿಲ್ಲ.

ಮದುವೆಯ ಬಳಿಕ ಆಸ್ಟ್ರಿಯಾದಲ್ಲಿ ನೆಲೆಸಿದ್ದ ಸೆಲಿನಾ ಜೇಟ್ಲಿ, ಸಹೋದರನ ಬಂಧನದ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು. ಆಗಲೇ ಅವರು ದೆಹಲಿ ಮೆಟ್ಟಿಲೇರಿ ಸಹೋದರನ ಬಿಡುಗಡೆಗೆ ಹೋರಾಡುತ್ತಿದ್ದಾರೆ ಆದರೆ ಅವರಿಗೆ ಈವರೆಗೆ ಯಾವುದೇ ಸಹಾಯ ದೊರೆತಿಲ್ಲ. ನಿನ್ನೆ ಇದೇ ಪ್ರಕರಣದ ವಿಚಾರಣೆ ದೆಹಲಿಯಲ್ಲಿ ನಡೆಸಲಾಯಿತು, ‘ವಿಕ್ರಾಂತ್ ಮೆಸ್ಸಿಯನ್ನು ಸಂಪರ್ಕಿಸಿ, ಅವರಿಗೆ ಕಾನೂನು ಮತ್ತು ವೈದ್ಯಕೀಯ ನೆರವು ನೀಡಿ’ ಎಂದು ಕೇಂದ್ರಕ್ಕೆ ಸೂಚಿಸಲಾಗಿದೆ.

ಇದನ್ನೂ ಓದಿ:’ಧುರಂಧರ’ ನಟ ರಣವೀರ್ ಸಿಂಗ್‌ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ವೈದ್ಯರು

ನಿವೃತ್ತ ಸೇನಾಧಿಕಾರಿ ವಿಕ್ರಾಂತ್ ಅವರನ್ನು ಬಂಧಿಸಿರುವ ಯುಎಇ ಅವರಿಗೆ ಹಾಗೂ ಇತರರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ‘ರಾಷ್ಟ್ರೀಯ ಭದ್ರತೆ’ ಅಪಾಯ ಒಡ್ಡಿದ ಕಾರಣಕ್ಕೆ ಬಂಧಿಸಲಾಗಿದೆ ಎಂದಷ್ಟೇ ಮಾಹಿತಿ ನೀಡಲಾಗಿದೆ. ತನಗೆ ಪ್ರಾಸಿಕ್ಯೂಷನ್ ಸಂಪರ್ಕ ಸಂಖ್ಯೆ ಮಾತ್ರ ಎಂದು ನಟಿ ಸೆಲಿನಾ ಜೇಟ್ಲಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಆದರೆ ಅವರ ಮೇಲೆ ಏನು ಆರೋಪ ಹೊರಿಸಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ವಿವರಣೆಯಿಲ್ಲ.

ವಿಕ್ರಾಂತ್ ಅವರು ಮಾಜಿ ಸೈನ್ಯಾಧಿಕಾರಿ ಆಗಿರುವುದು, ಇದೀಗ ಯುಎಇ ಸರ್ಕಾರವು ‘ರಾಷ್ಟ್ರೀಯ ಭದ್ರತೆ’ ಹೆಸರಿನಲ್ಲಿ ವಿಕ್ರಾಂತ್ ಅವರನ್ನು ಬಂಧಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿಕ್ರಾಂತ್ ಅವರು ಸೀಕ್ರೆಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನವೂ ಮೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *