ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು?

ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು?

ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು?

Kannada Serial: ಈಗ ಕನ್ನಡ ಮನರಂಜನಾ ವಾಹಿನಿಗಳಲ್ಲಿ ಕೆಲ ಧಾರಾವಾಹಿಗಳು ಅಂತ್ಯ ಆಗಲಿವೆ. ಈ ಜಾಗಕ್ಕೆ ಹೊಸದಾಗಿ ಹೊಸ ಸೀರಿಯಲ್‌ಗಳ ಆಗಮನ ಕೂಡ ಆಗಲಿದೆ. ಹಾಗಾದರೆ ಅಂತ್ಯ ಆಗಲಿರುವ ಸೀರಿಯಲ್‌ಗಳು ಯಾವುವು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಅಪ್ಪ-ಮಗಳು ಒಂದಾಗಿದ್ದಾರೆ. ತಂದೆ ಶರತ್‌ರನ್ನು ಮಗಳು ಹಿತಾ ಅಪ್ಪ ಎಂದು ಕರೆಯುತ್ತಾಳಾ? ಇಲ್ಲವಾ ಎನ್ನುವ ಡೌಟ್‌ ಇತ್ತು. ತನ್ನ ತಾಯಿ ಅಂಬಿಕಾ ಸಾವಿಗೆ ಅಪ್ಪನೇ ಕಾರಣ ಎಂದು ಅವಳು ಅಂದುಕೊಂಡು ಇಷ್ಟುದಿನಗಳಿಂದ ದೂರ ಇದ್ದಳು. ಅಂದಹಾಗೆ ದುರ್ಗಾ ಹಾಗೂ ಶರತ್‌ ಕೂಡ ಒಂದಾಗಬೇಕು, ಆದರೆ ಶರತ್‌ ಯಾರನ್ನು ಹೆಂಡ್ತಿ ಎಂದು ಒಪ್ಪಿಕೊಳ್ಳಲು ರೆಡಿ ಇಲ್ಲ. ಈಗ ಶರತ್‌-ದುರ್ಗಾ ಒಂದಾದರೆ, ವಿಲನ್‌ ಯಾರು? ಅಂಬಿಕಾರನ್ನು ಕೊಂದೋರು ಯಾರು ಎನ್ನೋದು ರಿವೀಲ್‌ ಆಗಬೇಕಿದೆ. ಸದ್ಯ ಈ ಧಾರಾವಾಹಿ ಅಂತ್ಯ ಆಗೋದು ಡೌಟ್‌ ಎನ್ನಲಾಗಿದೆ.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದಾರೆ. ಇನ್ನು ಮಲ್ಲಿ ಜೀವನ ಕೂಡ ಸೆಟಲ್‌ ಆಗ್ತಿದೆ. ಇನ್ನು ಗೌತಮ್‌ ಕುಟುಂಬ ಒಟ್ಟಾಗಿದ್ದು, ಚೆನ್ನಾಗಿ ಬದುಕುತ್ತಿದೆ. ಜಯದೇವ್‌ ಪತನ ಆಗಬೇಕಿದೆ. ಗೌತಮ್‌ ಮತ್ತೆ ಸಾಮ್ರಾಜ್ಯ ಕಟ್ಟುವ ಯೋಚನೆಯಲ್ಲಿದ್ದಾನೆ. ಈ ಸೀರಿಯಲ್‌ ಕೂಡ ಮುಗಿಯೋದು ಡೌಟ್‌ ಎನ್ನಲಾಗಿದೆ.

ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಚಿಕ್ಕೆಜಮಾನಿ ಧಾರಾವಾಹಿ ಅಂತ್ಯ ಆಗ್ತಿದೆ. ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್‌ ಕೂಡ ಮುಗಿದಿದೆ. ಸೀರಿಯಲ್‌ ತಂಡದ ಕೊನೆ ದಿನದ ಫೋಟೋಶೂಟ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಆರೂರು ಜಗದೀಶ್‌ ನಿರ್ದೇಶನದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅಂತ್ಯ ಆಗುತ್ತಲಿದೆ. ಈ ಧಾರಾವಾಹಿಯ ಕೊನೆಯ ದಿನದ ಫೋಟೊ ಕೂಡ ವೈರಲ್‌ ಆಗಿತ್ತು. ಉಮಾಶ್ರೀ, ಧನುಷ್‌, ಮಂಜುಭಾಷಿಣಿ, ಸಾರಿಕಾ ರಾಜ್‌, ಸ್ವಾತಿ ಎಚ್‌, ರಮೇಶ್‌ ಪಂಡಿತ್‌ ನಟನೆಯ ಈ ಸೀರಿಯಲ್‌ ಅಂತ್ಯ ಆಗಲಿದೆ.

ಬ್ರಹ್ಮಗಂಟು ಧಾರಾವಾಹಿ ಕೂಡ ಅಂತ್ಯ ಆಗಲಿದೆ ಎನ್ನಲಾಗಿದೆ. ಒಂದು ಕಡೆ ಸೌಂದರ್ಯ ರಹಸ್ಯ ಏನು ಎನ್ನೋದು ಚಿರು ತಂದೆಗೆ ಗೊತ್ತಾಗಿದೆ. ಇನ್ನು ಚಿರಾಗ್‌ ಹಾಗೂ ದೀಪಾ ನಡುವೆ ಪ್ರೀತಿ ಇದ್ದು, ಇದನ್ನು ಇಬ್ಬರೂ ಒಪ್ಪಿಕೊಂಡು ಬದುಕಬೇಕಿದೆ. ದೀಪಾ ಅಣ್ಣನಿಗೂ ಕೂಡ ಚಿರಾಗ್‌ ಸತ್ಯ ಗೊತ್ತಾಗಲಿದ್ದು, ಅವನು ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಕೊಡ್ತಾನೆ. ಈ ಸೀರಿಯಲ್‌ ಅಂತ್ಯದ ಬಗ್ಗೆ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಝಾನ್ಸಿಗೆ ಈಗ ಹಳೆಯ ನೆನಪು ಬರಬೇಕು, ತನಗೆ ಮದುವೆಯಾಗಿ, ಮಗು ಇದೆ ಎನ್ನೋ ವಿಚಾರ ಗೊತ್ತಾಗಬೇಕಿದೆ. ಅಷ್ಟೇ ಅಲ್ಲದೆ ಝಾನ್ಸಿ ತಾಯಿ ಮಿಲನ ಆಗಬೇಕು. ಝಾನ್ಸಿ ಅತ್ತೆಯ ಅನಾಚಾರ, ಅಕ್ರಮಗಳು ಕೂಡ ಬಯಲಾಗಬೇಕಿದೆ. ಈ ಕಥೆಯನ್ನು ನೋಡಿದರೆ ಸದ್ಯದಲ್ಲೇ ಈ ಸೀರಿಯಲ್‌ ಕೂಡ ಅಂತ್ಯ ಆಗುವ ಲಕ್ಷಣ ಕಾಣಿಸುತ್ತಿದೆ.

ತಾಂಡವ್‌ ಕಂಪ್ಲೀಟ್‌ ಆಗಿ ಶ್ರೇಷ್ಠಳಿಂದ ದೂರ ಇದ್ದಾನೆ. ಭಾಗ್ಯ ಕ್ಷಮಿಸಲಿ ಎಂದು ಅವನು ಕಾಯುತ್ತಿದ್ದಾನೆ. ಆದರೆ ಅವಳು ಮಾತ್ರ ಕ್ಷಮಿಸುತ್ತಿಲ್ಲ. ಭಾಗ್ಯ ಈಗ ಆದಿ ಪ್ರೀತಿಯನ್ನು ಒಪ್ಪಿ ಮದುವೆ ಆಗುತ್ತಾಳೋ ಅಥವಾ ತಾಂಡವ್‌ ಜೊತೆ ಸಂಸಾರ ಮಾಡುತ್ತಾಳೋ ಎಂಬ ಪ್ರಶ್ನೆ ಇದೆ. ಈ ಸೀರಿಯಲ್‌ ಮುಗಿಯಬಹುದು ಎಂಬ ಗುಸುಗುಸು ಇದ್ರೂ ಕೂಡ ಮುಗಿಯೋದು ಡೌಟ್‌ ಎನ್ನಲಾಗಿದೆ.

ಶ್ರಾವಣಿ ಹಾಗೂ ಸುಬ್ರಹ್ಮಣ್ಯ ಬದುಕಿಗೆ ನಂದಿನಿ ಎಂಟ್ರಿ ಆಗಿದ್ದು, ಇವರಿಬ್ಬರ ಫಸ್ಟ್‌ನೈಟ್‌ ಕೂಡ ಆಗಿದೆ. ಅಂದಹಾಗೆ ನಂದಿನಿ ತನ್ನ ಗಂಡನ ಜೊತೆ ಬಾಳಬೇಕು, ವಿಜಯಾಂಬಿಕಾ ಆ ಮನೆಯಿಂದ ಹೊರಗಡೆ ಹೋಗಬೇಕು. ಇದೆಲ್ಲ ಆದರೆ ಸೀರಿಯಲ್‌ ಅಂತ್ಯ ಆದಂತೆ. ಇದನ್ನೆಲ್ಲ ನೋಡಿದ್ರೆ ಸೀರಿಯಲ್‌ ಅಂತ್ಯ ಆಗುವ ಲಕ್ಷಣ ಕಾಣುತ್ತಿದೆ.

Source link

Leave a Reply

Your email address will not be published. Required fields are marked *