ಸರ್ಕಾರಿ ಶಾಲೆಗಳ ‘ನಲಿ ಕಲಿ’ ಯೋಜನೆ ವಿಫಲ: ಶಿಕ್ಷಣ ಸಚಿವರಿಗೆ ವರದಿ ಸಲ್ಲಿಕೆ
ಬೆಂಗಳೂರು, ಫೆಬ್ರವರಿ 11: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ‘ನಲಿ ಕಲಿ’ (ನಲಿ-ಕಲಿ) ಯೋಜನೆ ಮಕ್ಕಳ ಉದ್ದೇಶಗಳನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸಮಗ್ರ ವರದಿಯನ್ನು ಶಿಕ್ಷಣ ಸಚಿವ ಮಧುಪ್ಪ ಅವರಿಗೆ ಸಲ್ಲಿಸಲಾಗಿದೆ.
1995-96ರಲ್ಲಿ ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ನಲಿ ಕಲಿ ಯೋಜನೆ, 2010-11ರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ವಿಸ್ತರಿಸಲಾಯಿತು. ಮಕ್ಕಳ ಚಟುವಟಿಕೆ ಆಧಾರಿತ ಹಾಗೂ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀಡುವುದು, ಭಾಷಾ ಕೌಶಲ್ಯವನ್ನು ವೃದ್ಧಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಕಾಲಕ್ರಮೇಣ ಯೋಜನೆ ಪರಿಣಾಮಕಾರಿತ್ವವನ್ನು ಕಳೆದುಕೊಂಡಿದೆ ಎಂದು ವರದಿ ಸೂಚಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಈ ಬಗ್ಗೆ ಮಾಡಿದ ಎಕ್ಸ್ ಪೋಸ್ಟ್ ಇಲ್ಲಿದೆ
ಉದ್ದೇಶ ಯೋಜನೆಯಲ್ಲಿ ಸಂಪೂರ್ಣ ವಿಫಲವಾದ ನಲಿ ಯೋಜನೆ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ#ನಲಿ_ಕಲಿ #ಶಾಲಾ_ಶಿಕ್ಷಣ_ಮತ್ತು_ಸಾಕ್ಷರತೆ_ಇಲಾಖೆ@ಮಧು_ಬಂಗಾರಪ್ಪ @ಶಾಲಾಶಿಕ್ಷಣ pic.twitter.com/uZUGnyfHoY
— ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು. (@KDA_Bengaluru) ಫೆಬ್ರವರಿ 10, 2026
ಶಿಕ್ಷಕರಿಗೆ ಸಮರ್ಪಕ ತರಬೇತಿ ಕೊರತೆ, ಬಹುತರಗತಿ ನಿರ್ವಹಣೆಯ ಸಮಸ್ಯೆಗಳು, ಹೆಚ್ಚಿನ ವಿದ್ಯಾರ್ಥಿಗಳ ವೈಯಕ್ತಿಕ ಗಮನದ ಅಭಾವ, ಅಗತ್ಯ ಕಲಿಕಾ ಸಾಮಗ್ರಿಗಳ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಪ್ರಮುಖ ಕಾರಣ. ಮೌಲ್ಯಮಾಪನ ವ್ಯವಸ್ಥೆಯಲ್ಲಿನ ದೋಷಗಳು ಮತ್ತು ಮೂರನೇ ತರಗತಿಯ ನಂತರ ಹೊಂದಾಣಿಕೆ ಸಮಸ್ಯೆಯು ಕಂಡುಬಂದಿದೆ.
ಇದನ್ನೂ ಓದಿ ಮುಂದಿನ ಶಿಕ್ಷಣ ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ
ಮೂರು ತರಗತಿಗಳಿಗೆ ಒಬ್ಬ ಶಿಕ್ಷಕ ಎಂಬ ವ್ಯವಸ್ಥೆ ಪೋಷಕರಿಂದ ಆಕ್ರೋಶಗೊಂಡಿದೆ. ಭಾಷಾ ಕಲಿಕೆಯ ಗುಣಮಟ್ಟವಾಗಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಎಲ್ಲಾ ಕಾರಣಗಳಿಂದ ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆ ಕುಸಿದು, ಖಾಸಗಿ ಶಾಲೆಗಳ ಮುಖ ನಡೆಯುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 2:45 pm, ಬುಧವಾರ, 11 ಫೆಬ್ರವರಿ 26