Headlines

ಸಾರಿ ಮಮ್ಮಿ, ಪಾಪ…ಐ ಲವ್ ಯು, ನವೋದಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಸಾವಿಗೆ ಶರಣು, ಹೆತ್ತವರ ಕಣ್ಣೀರಲ್ಲಿ ಮುಳುಗಿಸಿದ! | Tragic Incident In Bidar 16 Year Old Class 10 Student Dies At Navodaya Hostel

ಬೀದರ್ ಜಿಲ್ಲೆಯ ಬಸವಕಲ್ಯಾಣದ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಶರತ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ “ಸಾರಿ ಮಮ್ಮಿ, ಪಾಪ… I love you” ಎಂದು ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ. ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆಗೆ ಶರಣಾದ ಈ ಘಟನೆ ಕುಟುಂಬಸ್ಥರು, ಸಹಪಾಠಿಗಳು ಹಾಗೂ ಸ್ಥಳೀಯರನ್ನು ತೀವ್ರವಾಗಿ ಕಲುಷಿತಗೊಳಿಸಿದೆ.

ಮೃತ ವಿದ್ಯಾರ್ಥಿಯನ್ನು ಶರತ್ ತಂದೆ ಪರಮೇಶ್ವರ್ (16) ಎಂದು ಗುರುತಿಸಲಾಗಿದೆ. ಅವರು ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ನಿವಾಸಿಯಾಗಿದ್ದು, ನಾರಾಯಣಪುರ ಗ್ರಾಮದ ನವೋದಯ ಹಾಸ್ಟೆಲ್‌ನಲ್ಲಿ ವಾಸವಿದ್ದು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನ ತಮ್ಮ ಕೊಠಡಿಯಲ್ಲೇ ಅವರು ಆತ್ಮ*ಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಭಾವನಾತ್ಮಕ ಡೆತ್‌ನೋಟ್ ಪತ್ತೆ

ಸ್ಥಳ ಪರಿಶೀಲನೆ ವೇಳೆ, “SORRY ಮಮ್ಮಿ, ಪಾಪ… I love you” ಹಾಗೂ “Keep smile forever” ಎಂದು ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಈ ಸಾಲುಗಳು ಕುಟುಂಬಸ್ಥರ ಮನಸ್ಸನ್ನು ಮತ್ತಷ್ಟು ನೋವಿಗೆ ಒಳಪಡಿಸಿದೆ. ಆತ್ಮ*ಹತ್ಯೆಗೆ ನಿಖರ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಪೊಲೀಸ್ ಪರಿಶೀಲನೆ

ಘಟನೆಯ ಮಾಹಿತಿ ಪಡೆದ ತಕ್ಷಣ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಲಾಗಿದೆ. ವಿದ್ಯಾರ್ಥಿಯ ಶವವನ್ನು ಬಸವಕಲ್ಯಾಣದ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಆಸ್ಪತ್ರೆ ಬಳಿ ಆಕ್ರಂದನ

ವಿದ್ಯಾರ್ಥಿಯ ಶವವನ್ನು ಶವಗಾರಕ್ಕೆ ತರುವಾಗ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮಗನ ಅಕಾಲಿಕ ಮರಣವನ್ನು ಸಹಿಸಲಾಗದೆ ಪೋಷಕರು ಹಾಗೂ ಸಂಬಂಧಿಕರು ಕಣ್ಣೀರಿಟ್ಟ ದೃಶ್ಯಗಳು ಮನಕಲಕುವಂತಿದ್ದವು. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ಸಿಬ್ಬಂದಿ, ಸಹಪಾಠಿಗಳು ಹಾಗೂ ಕುಟುಂಬಸ್ಥರ ಹೇಳಿಕೆಗಳನ್ನು ಪಡೆದು ಆತ್ಮ*ಹತ್ಯೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Source link

Leave a Reply

Your email address will not be published. Required fields are marked *