ಹುಬ್ಬಳ್ಳಿ, ಫೆಬ್ರವರಿ 11: ನಗರದಲ್ಲಿರುವ ಕಿಮ್ಸ್ನ ಬಡವರ ಪಾಲಿನ ಸಂಜೀವಿನಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳಿಗೆ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಆದರೆ ಇದೇ ಕಿಮ್ಸ್ನಲ್ಲಿ ಸತ್ತ ಹೆಣ್ಣೂ ದುಡ್ಡು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದು, ಮೃತ ವ್ಯಕ್ತಿಯ ಶವ ಪ್ಯಾಕ್ ಮಾಡಿ ವಾಹನ ಹಾಕುವುದರಿಂದ ರೋಗಿಯನ್ನು ಶಿಫ್ಟ್ ಮಾಡೋದಕ್ಕೂ ಇಲ್ಲಿ ಹಣ ಕೊಡಲೇ ಬೇಕು. ಆಸ್ಪತ್ರೆಯಲ್ಲಿರುವ ಸ್ವಚ್ಛತಾ ಸಿಬ್ಬಂದಿ ಮತ್ತು ಡಿ ಗ್ರೂಪ್ ನೌಕರರು ಮತ್ತು ನಂತರ ಅವರ ರಕ್ತ ಹೀರುವ ಕೆಲಸ ಮಾಡ್ತಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆಶಾಳ ಅಡವಿಬಾವಿ ನಿವಾಸಿಯಾಗಿರೋ 52 ವರ್ಷದ ಗದ್ದೆಮ್ಮ ಎಂಬ ಮಹಿಳೆ ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಕಳೆದ ಜನವರಿ 31ರಂದು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಕಳೆದ ಶನಿವಾರ ಆಕೆಗೆ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದರೆ ಗದ್ದೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವಮ್ಮ ಆಯ್ಕೆಯಾಗಿದ್ದಾರೆ. ಅವರ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಅಲ್ಲಿನ ಡ್ರಿ ಗ್ರೂಪ್ ಸಿಬ್ಬಂದಿ ಐನೂರು ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೊನೆಗೂ ಬಿದ್ದು 200 ರೂಪಾಯಿ ಪಡೆದಿದ್ದಾರೆ. ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತೆ 200 ರೂಪಾಯಿಗಾಗಿ ಪೀಡಿಸಿದ್ದಾರೆ. ಇದರಿಂದ ನೊಂದ ಗದ್ದೆಮ್ಮ ಸಂಬಂಧಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಕಳ್ಳಾಟ ಪ್ರಕರಣ; ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ
ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿರುವ ಘಟನೆ ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಿಮ್ಸ್ ನಿರ್ದಶಕ ಡಾ. ಈಶ್ವರ್ ಹೊಸಮನಿಗೆ ಕರೆ ಮಾಡಿ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಸೂಚನೆ ನೀಡಿದ್ದಾರಂತೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಮ್ಸ್ ನಿರ್ದೇಶಕ, ನಾನು ಕೂಡ ವಿಡಿಯೋ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಏಜನ್ಸಿ ಮೂಲಕ ಹೊರಗುತ್ತಿದ ಮೇಲೆ ಕೆಲಸ ಮಾಡ್ತಿರೋ ಕೆಲವರು ಕಿಮ್ಸ್ ಗೆ ಕಪ್ಪು ಮಸಿ ಬಳಿಯೋ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಏಜನ್ಸಿ ಹಾಗೂ ಹಣ ತಗೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವನು ಕೆಲಸದಿಂದ ತೆಗೆದುಹಾಕುತ್ತೇನೆ ಎಂದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.