ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಇಕ್ಬಾಲ್ಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಚಿಕ್ಕಮಗಳೂರು, ಫೆಬ್ರವರಿ 11: ಕಾಂಗ್ರೆಸ್ ಶಾಸಕ ಸೇರಿ ಐವರ ಮೇಲೆ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ಕಡೂರು ತಾಲೂಕು ಕಚೇರಿಯ ಸಾಂಖ್ಯಿಕ ಇಕ್ಬಾಲ್ ನಾಪತ್ತೆಯಾದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೂಡಲೇ ಅಲರ್ಟ್ ಆದ ಪೊಲೀಸರು ಹುಡುಕಾಟ ನಡೆಸಿದ್ದು, ಈ ವೇಳೆ ಇಕ್ಬಾಲ್ ಚಿಕ್ಕಮಗಳೂರು ನಗರದ ವಿಜಯಪುರದ ತಮ್ಮ ಮನೆಯಲ್ಲಿದ್ದಾರೆ. ಡೆತ್ ನೋಟ್ ನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಉಲ್ಲೇಖಿಸಿರುವ ಅಧಿಕಾರಿ ಪ್ರಕರಣ ಗಂಭೀರ ಸ್ವರೂಪದ್ದಾಗಿದೆ.
ಇಕ್ಬಾಲ್ ಆರೋಪವೇನು?
ಕಡೂರು ಶಾಸಕ ಆನಂದ್, ಪಿಎ ಮಂಜುನಾಥ್, ಕಡೂರು ತಹಶೀಲ್ದಾರ್ ಪೂರ್ಣಿಮಾ ಸೇರಿ ಐವರ ಬಗ್ಗೆ ಇಕ್ಬಾಲ್ ಗಂಭೀರ ಆರೋಪ ಮಾಡಿದ್ದಾರೆ. ಕಡೂರು ಶಾಸಕ ಮಂಜುನಾಥ್ 25 ಸಾವಿರ ಹಣ ಕೊಡುವಂತೆ ಪೀಡಿಸಿದರು. ಕಳೆದ ಕೆಲದಿನಗಳ ಹಿಂದೆ ಫೇಕ್ ಮರಣಪತ್ರ ನೀಡುವಂತೆ ಕೇಳಿದ್ದರು. ನಾನು ಮುಸ್ಲಿಂ ಎಂಬ ಕಾರಣಕ್ಕೆ ತಹಶೀಲ್ದಾರ್ ಪೂರ್ಣಿಮಾ ಪ್ರತಿದಿನ ಬೈಯುತ್ತಿದ್ದರು. ಮಂಜುನಾಥ್ ನಮ್ಮ ಸಮುದಾಯಕ್ಕೂ ಅವಮಾನಿಸಿದ್ದು, ಈ ಬಗ್ಗೆ ಶಾಸಕರಿಗೆ ತಿಳಿಸಿದರೆ ಅವರೂ ನನಗೆ ಬೈದು ಕಳುಹಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ತನ್ನನ್ನು ವರ್ಗಾವಣೆ ಮಾಡಿದ್ದೇನೆ, ನಾನು ಆತ್ಮಹತ್ಯೆ ಮಾಡಿಕೊಳ್ಳೋದಂತೂ ನಿಜ. ನನಗೆ ಕಿರುಕುಳ ನೀಡಿದ ಜೈಲಿಗೆ ಹೋಗಲೇ ಬೇಕು.
ಇದನ್ನೂ ಓದಿ: ಫ್ಲ್ಯಾಟ್, ಚಿನ್ನದ ವ್ಯವಹಾರದಲ್ಲಿ ಉದ್ಯಮಕ್ಕೆ ಕೋಟಿ ಕೋಟಿ ದೋಖಾ! ಶೆಟ್ಟಿ ದಂಪತಿ ಮೇಲೆ ಕೇಸ್
ಕಡೂರು ತಾಲೂಕು ಕಚೇರಿಯಲ್ಲಿ ಅತೀ ಹೆಚ್ಚು ನಕಲಿ ವ್ಯವಹಾರಗಳು ನಡೆಯುತ್ತಿರುವುದು ಇಲ್ಲಿಯೇ ಕಚೇರಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಕಲಿ ಮರಣಪತ್ರ ಕೊಡಲ್ಲ ಎಂದಿದ್ದಕ್ಕೆ ನನ್ನ ಮೇಲೆ ಹುನ್ನಾರ ನಡೆಸಲಾಗಿದೆ. ನಾನು ಬದುಕಬೇಕಂದ್ರೆ ನನಗೆ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಇಕ್ಬಾಲ್ ಕಾಣುತ್ತಿದೆ. ಸ್ಥಳೀಯರಿಂದ ದೂರು ಹಾಗೂ ಅನುಚಿತ ವರ್ತನೆಗೆ ವರ್ಗಾವಣೆ ಮಾಡುವಂತೆ ಶಾಸಕ ಆನಂದ್ ಶಿಫಾರಸ್ಸು ಹಿನ್ನೆಲೆ ಇಕ್ಬಾಲ್ ಟ್ರಾನ್ಸ್ ಫರ್ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.