Headlines

Video: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ

Video: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ


ಕರಾವಳಿ ಗಂಡು ಕಲೆ ಯಕ್ಷಗಾನ (ಯಕ್ಷಗಾನ) ಎಂದಾಗ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಯಕ್ಷಗಾನವನ್ನು ನೋಡುವುದೇ ಕಣ್ಣಿಗೆ ಆನಂದ. ಪ್ರಸಂಗದಲ್ಲಿ ತಮಾಷೆಭರಿತವಾದ ಸಂಭಾಷಣೆಗಳನ್ನು ವೀಕ್ಷಿಸಲು ನಕ್ಕು ನಗಿಸುತ್ತವೆ. ಆದರೆ ಪೌರಾಣಿಕ ಪ್ರಸಂಗದ ನಡುವೆ ಪ್ರಸ್ತುತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳನ್ನು ಸೇರಿಸುತ್ತಾರೆ. ಆದರೆ ಇದೀಗ ಯಕ್ಷಗಾನದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ (ಬಿಗ್ ಬಾಸ್ ವಿನ್ನರ್ ಗಿಲ್ಲಿ) ಹಾಡಿನ ಹವಾ ಜೋರಾಗಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟಿಸುತ್ತಿದ್ದ ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು ಹಾಡು ಹೇಳಿ ಕಲಾವಿದರು ಪ್ರೇಕ್ಷಕ ವರ್ಗವನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಯಕ್ಷ ಚರಿತ್ರೆಯ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಲಾವಿದರು ವೇದಿಕೆಯ ಮೇಲೆ ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು ಎಂದು ಹೇಳಿದ್ದು, ಈ ತಮಾಷೆ ಭರಿತ ಸಂಭಾಷಣೆಯನ್ನು ನೀವಿಲ್ಲಿ ಕಾಣುತ್ತೇವೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಮಿತಿ ಮೀರಿದ ಹಾಸ್ಯ, ಇದು ಯಕ್ಷಗಾನಕ್ಕೆ ಅಗತ್ಯ ಇದೆಯೇ ಎಂದು ಕೇಳಿದ್ದಾರೆ. ಇತರರು, ಗಿಲ್ಲಿ ಸೂಪರ್ ಎಂದು ಹೇಳಿದರೆ, ಮತ್ತೊಬ್ಬರು, ನೆಗೆಟಿವ್ ಕಾಮೆಂಟ್ ಮಾಡುವವರು ಗಿಲ್ಲಿ ಹೇಟರ್ಸ್ ನೀವು ತಲೆ ಕೆಡಿಸಿಕೊಳ್ಳಬೇಡಿ ಅಷ್ಟಕ್ಕೂ ಆ ಹಾಡಲ್ಲಿ ಕೆಟ್ಟ ಶಬ್ದ ಏನು ಇಲ್ಲ ಚನ್ನಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *