ಬಿಗ್ಬಾಸ್ ಹಾಗೂ ‘ಪಾರು’ ಖ್ಯಾತಿಯ ಮೋಕ್ಷಿತಾ ಪೈ ಇದೀಗ ‘ಜಗದ್ಧಾತ್ರಿ’ ಎಂಬ ಹೊಸ ಧಾರಾವಾಹಿಯ ಮೂಲಕ ಜೀ ಕನ್ನಡಕ್ಕೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ಕ್ರೈಂ ಬ್ರ್ಯಾಂಚ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ತೆಲುಗಿನ ಜನಪ್ರಿಯ ಸೀರಿಯಲ್ನ ರಿಮೇಕ್ ಆಗಿದೆ. ನಟ ಯಾರು?

ಬಿಗ್ಬಾಸ್ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಸಹಜವಾಗಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಫೇಮಸ್ ಆಗಿದ್ದಾರೆ. ಬಿಗ್ಬಾಸ್ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆದ್ದವರು. 3ನೇ ರನ್ನರ್ ಅಪ್ ಅರ್ಥಾತ್ 4ನೇ ಸ್ಥಾನ ಪಡೆದಿದ್ದಾರೆ ನಟಿ.

ಬಿಗ್ಬಾಸ್ಗೂ ಮುನ್ನ ಪಾರು ಸೀರಿಯಲ್ನ ನಟನೆಯಿಂದ ಮನೆ ಮಾತಾಗಿದ್ದವರು ಈಕೆ. ಇದರಲ್ಲಿ ಹಳ್ಳಿ ಹುಡುಗಿ ಪಾರು ಆಗಿ, ಕರುನಾಡಿನ ವೀಕ್ಷಕರ ಮನ ಗೆದ್ದಿದ್ದರು, ಮೋಕ್ಷಿತಾ ಅನ್ನೋದಕ್ಕಿಂತ ಪಾರು ಆಗಿ, ಅಖಿಲಾಂಡೇಶ್ವರಿ ಸೊಸೆಯಾಗಿ ಗುರುತಿಸಿಕೊಂಡಿದ್ದರು ನಟಿ. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು.

ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಧನುಷ್ ಗೌಡ ನಿರ್ದೇಶನ ಮಾಡಿರುವ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ವಿನಯ್ ಗೌಡ ಜೊತೆ ಒಂದು ಮಿನಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಈ ಬಾರಿಯ ಬಿಗ್ಬಾಸ್ಗೆ ವಿಶೇಷ ಅತಿಥಿಯಾಗಿಯೂ ಎಂಟ್ರಿ ಕೊಟ್ಟಿದ್ದರು.

ಇದೀಗ ಮೋಕ್ಷಿತಾ ಪೈ ಜೀ ಕನ್ನಡಕ್ಕೆ ವಾಪಸಾಗಿದ್ದಾರೆ. ಜಗದ್ಧಾತ್ರಿ ಸೀರಿಯಲ್ನಲ್ಲಿ ಅವರು ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಅವರು ಕ್ರೈಂ ಬ್ರ್ಯಾಂಚ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ ಸಿಕ್ಕಿರುವ ಮಾಹಿತಿಯ ಈ ಸೀರಿಯಲ್ ತೆಲುಗಿನ ಜನಪ್ರಿಯ ಧಾರಾವಾಹಿ ಜಗಧಾತ್ರಿಯ ರಿಮೇಕ್ ಆಗಿದೆ. ಈ ಧಾರಾವಾಹಿಯ ಮೂಲ ಮರಾಠಿ ಧಾರಾವಾಹಿ ಇದು ಹೌಸ್ ವೈಫ್ ಆಗಿ ಗುರುತಿಸಿಕೊಂಡಿರುವ ಸ್ಪೈ ಏಜೆಂಟ್ ಕಥೆಯಾಗಿದೆ.

ಮಾಹಿತಿಯ ಪ್ರಕಾರ ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಅನಿಕೇತ್ ಆಗಿ ಜನಮನ ಗೆದ್ದಿದ್ದರು. ಅವರ ಸ್ಟೈಲ್, ಸ್ಮೈಲ್, ನಟನೆ, ಅನಿಕೇತ್-ಮೀರಾ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಅದಾದ ಬಳಿಕ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಮಗನಾಗಿ ನಟಿಸಿದ್ದರು. ಆದರೆ ಆ ಧಾರಾವಾಹಿಯಿಂದ ಅರ್ಧದಲ್ಲೇ ನಟ ಹೊರಗೆ ಬಂದಿದ್ದರು. ಇದೀಗ ಮತ್ತೆ ಕಿರುತೆರೆಗೆ ಹಲವು ವರ್ಷಗಳ ಬಳಿಕ ಕಂ ಬ್ಯಾಕ್ ಮಾಡುತ್ತಿದ್ದಾರೆ.

Source link
'ಜಗದ್ಧಾತ್ರಿ'ಯಾಗಿ ನಟಿ ಮೋಕ್ಷಿತಾ ಪೈ ಎಂಟ್ರಿ! ಕ್ರೈಂ ಬ್ರ್ಯಾಂಚ್ ಆಫೀಸರ್- ಏನಿದು ಸ್ಟೋರಿ? ನಾಯಕ ಯಾರು?