Headlines

MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ: ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ: ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ: ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?

ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಘಟಿಕೋತ್ಸವದ ವೀಡಿಯೋ ವೈರಲ್ ಆಗಿದ್ದು, ಕೆಲವರು ಅಭಿನಂದನೆ ಸಲ್ಲಿಸಿದ್ದರೆ ಮತ್ತೆ ಕೆಲವರು ಅನುಮಾನವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದ ಸುಂದರ ನಟಿ ಶ್ರೀಲೀಲಾ. ಕೇವಲ ನಟನೆ ಮಾತ್ರವಲ್ಲದೇ ಓದಿನಲ್ಲೂ ಪ್ರತಿಭಾನ್ವಿತೆಯಾಗಿರುವ ಶ್ರೀಲೀಲಾ ತಮ್ಮ ಸಿನಿಮಾದ ಜೊತೆ ಜೊತೆಗೆ ಈಗ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಹೌದು ಅಲ್ಲು ಅರ್ಜುನ್ ಅಭಿನಯದ ಆಕ್ಷನ್ ಡ್ರಾಮಾ ಪುಷ್ಪ 2 ನಲ್ಲಿ ಕಿಸ್ಸಿಕ್’ ಐಟಂ ಹಾಡಿಗೆ ಡಾನ್ಸ್ ಮಾಡಿ ಎಲ್ಲರ ಹೃದಯ ಗೆದ್ದಿರುವ ಶ್ರೀಲೀಲಾ ಈಗ ಡಾಕ್ಟರ್ ಆಗಿದ್ದಾರೆ. ಹಾಗಂತ ಇವರೇನು ಇತರ ನಟ ನಟಿಯರಂತೆ ಗೌರವ ಡಾಕ್ಟರೇಟ್ ಪಡೆದು ಡಾಕ್ಟರ್ ಆಗಿದ್ದಲ್ಲ, ನಟನೆಯ ಜೊತೆ ಜೊತೆಗೆ ಸ್ವತ: ಓದಿ ಡಾಕ್ಟರ್ ಎನಿಸಿಕೊಂಡಿದ್ದಾರೆ ಶ್ರೀಲೀಲಾ..

ಶ್ರೀಲೀಲಾ ಅವರು ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ ಶ್ರೀಲೀಲಾ ಅವರ ಸಂತೋಷವು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಭಿಮಾನಿಗಳು ಅವರು ಅಧ್ಯಯನ ಪೂರ್ಣಗೊಳಿಸಿ ವೈದ್ಯರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ವೀಡಿಯೊದಲ್ಲಿ ಘಟಿಕೋತ್ಸವದ ಕೆಂಪು ಬಣ್ಣದ ವೇಷಭೂಷಣವನ್ನು ಧರಿಸಿ ಶ್ರೀಲಾ ಕೆಂಪು ಪದವಿ ಪಡೆಯುವುದನ್ನು ನೋಡಬಹುದು. ನಟಿ ಕೈಯಲ್ಲಿ ಪದವಿಯ ಜೊತೆ ಮುಖದಲ್ಲಿ ಅರಳಿದ ನಗುವನ್ನು ಕಾಣಬಹುದು. 2020 ರಲ್ಲಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸಿದ ಶ್ರೀಲೀಲಾ ಈಗ ವೈದ್ಯರಾಗಿದ್ದಾರೆ. ನಟನೆಯ ಜೊತೆ ಜೊತೆಗೆ ಕಷ್ಟಕರವೆನಿಸಿದ ವೈದ್ಯಕೀಯ ಕೋರ್ಸ್‌ನ್ನು ಅವರು ಸುಗಮವಾಗಿ ಪೂರ್ಣಗೊಳಿಸಿರುವುದಕ್ಕೆ ಅನೇಕರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಆದರೆ ಎಂಬಿಬಿಎಸ್ ಒಂದು ಆಕಸ್ಮಿಕ ಪದವಿಯಲ್ಲ. ಇದು ಭಾರತದಲ್ಲಿ ಅತ್ಯಂತ ನಿಯಂತ್ರಿತ ವೃತ್ತಿಪರ ಕೋರ್ಸ್‌ಗಳಲ್ಲಿ ಒಂದಾಗಿದೆ. ಆದ್ದರಿಂದ ಸ್ವಾಭಾವಿಕವಾಗಿಯೇ ಯಾರಾದರೂ ಹಲವಾರು ಚಲನಚಿತ್ರಗಳನ್ನು ಮಾಡುತ್ತಲೇ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವುದು ನೋಡಿದರೆ ಅನುಮಾನವಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವೈದ್ಯಕೀಯ ಕೋರ್ಸ್‌ನಲ್ಲಿ 75% ಥಿಯರಿ ಹಾಜರಾತಿ ಮತ್ತು 80% ಪ್ರಾಯೋಗಿಕ ಹಾಜರಾತಿ ಇದ್ದರೆ ಮಾತ್ರ ನೀವು ಪರೀಕ್ಷೆಗೆ ಅರ್ಹರು, ಹಾಗಾದರೆ ಹೇಗೆ? ಅವಳು ಅರ್ಹತಾ ಮಾನದಂಡಗಳನ್ನುಪಡೆದಳು. ಆದ್ದರಿಂದ ಇದು ಸ್ಪಷ್ಟವಾಗಿ ಅನುಮಾನಾಸ್ಪದವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅವರು ನಟನೆಯನ್ನು ಮುಂದುವರಿಸುವುದರ ಜೊತೆಗೆ ತಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನನಗೆ ನಂಬಲು ಸಾಧ್ಯವಾಗ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು ಅಭಿನಂದನೆಗಳು, ಕಿಸ್ಸಿಕ್ ಗರ್ಲ್ ಎಂದು ಶುಭ ಹಾರೈಸಿದ್ದಾರೆ. ನಟನೆಯ ಜೊತೆ ಜೊತೆಗೆ ಈಗ ವೈದ್ಯೆ ಎಂಬ ಹೆಗ್ಗಳಿಕೆ ಗಳಿಸಿರುವ ಶ್ರೀಲಾ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆಯೇ? ಎಂಬ ಪ್ರಶ್ನೆ ಅಭಿಮಾನಿಗಳ ಮುಂದಿದೆ. ಶ್ರೀಲೀಲಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಅವರು ಭಾರತೀಯರಾಗಿದ್ದರು ಅಮೆರಿಕನ್ ಪ್ರಜೆ. ಜೂನ್ 14, 2001 ರಂದು ಅಮೆರಿಕದಲ್ಲಿ ಜನಿಸಿದ ಶ್ರೀಲಾ 2019 ರ ಕನ್ನಡ ಚಿತ್ರ ಕಿಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆದರೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕ ಸಿನಿಮಾ ಟಾಲಿವುಡ್ ಸ್ಟಾರ್ ರವಿತೇಜ ಅಭಿನಯದ ಧಮಾಕಾ. ನಂತರ ಅವರು ಮಹೇಶ್ ಬಾಬು ಅವರ ಗುಂಟೂರು ಕರಮ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದರ ನಂತರ, ಅವರು ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದರು. ನಟಿ ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಅವರು ಬಾಲಿವುಡ್‌ನ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಸಿನಿಮಾವೊಂದರಲ್ಲಿ ನಟಿಸಲಿದ್ದು, ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಆದರೆ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ.

Source link

Leave a Reply

Your email address will not be published. Required fields are marked *