ದಾವಣಗೆರೆ, ಫೆಬ್ರವರಿ 11: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆ (ದಾವಣಗೆರೆ) ದುರ್ಗಮ್ಮನ ಜಾತ್ರೆ ಕೂಡ ಒಂದು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜಾತ್ರೆ (ಜಾತ್ರೆ) ನಡೆಯುತ್ತಿದೆ. ನಾಟಕ, ಕುಸ್ತಿ, ಟಗರ ಕಾಳಗ ಹೀಗೆ ಹತ್ತು ಹಲವು ಕ್ಷಣಗಳು ಜಾತ್ರೆಯ ವಿಶೇಷ. ಇದೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಅಂದರೆ ಕುರಿ ಊಟ. ಮನೆ ಪ್ರತಿಗಳಿಂದ ಮೂರು ನಾಲ್ಕು ಕುರಿಗಳನ್ನು ದೇವಿಗೆ ಬಲಿ ಕೊಡುತ್ತಾರೆ. ಸದ್ಯ ಇದೇ ವಿಚಾರವಾಗಿ ಇದೀಗ ಹೊಸ ಹೋರಾಟ ಶುರುವಾಗಿದೆ.
ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆಗೆ ಶ್ರೀರಾಮ ಸೇನೆ ಕರೆ
ಶ್ರೀರಾಮ ಸೇನೆ ಹೊಸ ಹೋರಾಟಕ್ಕೆ ಮುಂದಾಗಿದೆ. ಹೇಳಿದಂತೆ ನಡೆದುಕೊಳ್ಳದಿದ್ದರೆ ದೇವಿ ಶಾಪ ಹಾಕುತ್ತಾಳೆ ಎಂಬ ಭಯ ಕೂಡ ಶ್ರೀರಾಮ ಸೇನೆ ಹಾಕುತ್ತಿದೆ. ಈ ಸಲ ಶ್ರೀರಾಮ ಸೇನೆ ಕರೆ ನೀಡಿದ್ದು, ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆ ಆಗಬೇಕು. ಮುಸ್ಲಿಂ ಕಡೆಯಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಪ್ರಚಾರ ಶುರುವಾಗಿದೆ.
ಇದನ್ನೂ ಓದಿ: ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ
ಫೆಬ್ರವರಿ 24 ಮತ್ತು 25ರಂದು ದಾವಣಗೆರೆ ದುಗ್ಗಮ್ಮನ ಜಾತ್ರೆ. ದೇವಿಗೆ ಸಾವಿರಾರು ಕುರಿಗಳ ಬಳಿ ಕೊಡದಿದ್ದರೆ. ಬಲಿ ಕೊಡುವಾಗ ಮುಸ್ಲಿಂ ಕಡೆಯಿಂದ ಹಲಾಲ್ ಮಾಡಬಾರದು. ಈ ಹಲಾಲ್ ಮಾಡುವುದು ಮುಸ್ಲಿಮರ ಪದ್ದತಿ. ದೇವಿ ಆರಾಧಕರು ಯಾರು ಕೂಡ ಮುಸ್ಲಿಮರಿಂದ ಹಲಾಲ್ ಮಾಡಬೇಡಿ. ನಮ್ಮ ಹಿಂದೂ ಸಂಪ್ರದಾಯದಂತೆ ಹಿಂದೂಗಳಲ್ಲಿರುವ ಕಲಾಲ್ ಅಥವಾ ಕಾಟೀಕ್ ಸಮಾಜದವರಿಂದ ಕುರಿ ಬಲಿ ಕೊಡಿ. ಹಿಂದೂಗಳು ಹಲಾಲ್ ಮಾಡಿಸುವುದು, ಅದರಲ್ಲಿ ಮುಸ್ಲಿಮರಿಂದ ಹಲಾಲ್ ಮಾಡಿದರೆ ಶಾಪ ತಟ್ಟುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.
ಅಲ್ಲಿ ಜಾತ್ರೆ ಸಂಭ್ರಮ ಶುರು
ದಾವಣಗೆರೆಯಲ್ಲಿ ದೇವತೆ ಜಾತ್ರೆಯ ಸಂಭ್ರಮ ಶುರುವಾಗಿದೆ. ಆಕಾಶದತ್ತೇರಕ್ಕೆ ದೇವಿಯ ಹಂದರ ಗಂಬ, ಕೇಸರಿ ಹಾರಾಟ, ಐತಿಹಾಸಿಕ ಜಾತ್ರೆಗೆ ಚಾಲನೆ ಸಿಕ್ಕಿದ್ದು ವಿಶೇಷ. ಇತ್ತೀಚಿಗೆ ಸಾವಿರಾರು ಜನರ ಸಮ್ಮುಖದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದರು. ಇಡಿದ ದೇವಸ್ಥಾನ ಸಂಭ್ರಮ ಮನೆ ಮಾಡಿತ್ತು.
ಹಂದರ ಗಂಬ ಪೂಜೆಯಾದ ಬಳಿಕ ನಿಜವಾದ ಜಾತ್ರೆಗೆ ಚಾಲನೆ ಸಿಕ್ಕಿದೆ. ಫೆಬ್ರವರಿ 24 ಮತ್ತು 25 ರಂದು ಜಾತ್ರೆಯ ಮಹತ್ವದ ದಿನಗಳು. ಅಂದರೆ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ, ಇಡಿ ನಗರವೇ ಈ ಎರಡು ದಿನ ಮಾತ್ರ ಗಮ್ಮತ್ತಾಗುತ್ತದೆ. ಒಂದು ದಿನ ಸಸ್ಯಹಾರಿಗಳಿಗೆ, ಇನ್ನೊಂದು ದಿನ ಮಾಂಸಾಹಾರಿಗಳಿಗೆ. ಇನ್ನು ದೇವಿ ಜಾತ್ರೆಯಲ್ಲಿ ಬೇವಿನ ಉಡಿಗೆ ಹಾಗೂ ಬೆತ್ತಲೆ ಸೇವೆ ನಡೆದರೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಫೆ. 22ರಂದು ದುರ್ಗಾಂಭಿಕಾ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಫೆ.23 ಮತ್ತು 24ರಂದು ಉಡಿ ತುಂಬುವ ಕಾರ್ಯವಿದೆ. ಫೆ. 24 ರಂದು ರಾತ್ರಿ 11ಕ್ಕೆ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ. ಫೆ 25 ರಂದು ಚರಗ ಚಲ್ಲುವ ಮೂಲಕ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ.
ಇದನ್ನೂ ಓದಿ: ಮಾರಾಟಕ್ಕೆ ಆಫ್ರಿಕಾಗೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಕಷ್ಟದಲ್ಲಿ: ಬಂಧನ ಭೀತಿ
ಹೀಗೆ ಒಂದು ಕಡೆ ಜಾತ್ರೆಗೆ ಸಂಭ್ರಮದ ಸಿದ್ದತೆ ನಡೆಯುತ್ತಿದೆ. ಇನ್ನೊದು ಕಡೆ ಶ್ರೀರಾಮ ಸೇನೆ ಹಲಾಲ್ ಕಟ್ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ಮೇಲಾಗಿ ದೇವಸ್ಥಾನದ ಮುಂದೆ ಕುರಿ ಬಲಿ ನಿಷೇಧವಿದೆ. ಹೀಗಾಗಿ ಕುರಿಗಳ ಬಲಿ ಕೊಡುವ ನಾಲ್ಕು ಗೋಡೆಗಳ ನಡುವೆ. ಅದು ಒಂದು ರೀತಿಯಲ್ಲಿ ಖಾಸಗಿ ವಿಚಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶ್ರೀರಾಮ ಸೇನೆ ಈ ವರ್ಷ ಹಲಾಲ್ ಕಟ್ ಮುನ್ನೆಲೆಗೆ ತಂದಿದ್ದು ಹತ್ತಾರು ಚರ್ಚೆಗೆ ಕಾರಣವಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.