ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ರೋಗಗಳು ಬೇಡ ಎಂದರೂ ಬರುತ್ತದೆ. ಆದರೆ ಜನರು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಬದಲಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ದೇಹದಲ್ಲಿ ಅಜೀರ್ಣವಾಗುವುದು (ಜೀರ್ಣಕಾರಿ ಸಮಸ್ಯೆಗಳು) ಕೆಲವು ಲಕ್ಷಣಗಳು ಕಂಡುಬಂದರೂ ಇವು ಸಾಮಾನ್ಯ ಸಮಸ್ಯೆಗಳೆಂದು ಜನ ತಳ್ಳಿಹಾಕುತ್ತಾರೆ. ನಿಮಗೆ ತಿಳಿದಿರಲಿ, ಉತ್ತಮ ದೇಹಕ್ಕಾಗಿ ಆಹಾರ ಸರಿಯಾಗಿ ಜೀರ್ಣವಾಗುವುದರಿಂದ ಅಥವಾ ಇಲ್ಲವೇ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಇದನ್ನು ಹೇಗೆ ಗುರುತಿಸುವುದು ಎಂದು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವ್ಯಕ್ತಿ ತಿಂದ ಆಹಾರ ಹೊಟ್ಟೆಯಲ್ಲಿ ಭಾರ ಅಥವಾ ಉರಿಯ ಅನುಭವವಾದರೆ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಏಮ್ಸ್ ದೆಹಲಿಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮಾಜಿ ವೈದ್ಯ ಡಾ. ಅನನ್ಯ ಗುಪ್ತಾ ಹೇಳಿದ್ದಾರೆ. ಇದು ವಾರಕ್ಕೆ ಒಂದು ಅಥವಾ ಎರಡು ಬಾರಿ ಅಥವಾ ಹದಿನೈದು ದಿನಗಳಿಗೊಮ್ಮೆ ಕಂಡುಬಂದಿದೆ, ಕಳವಳ ಪಡಬೇಕಾಗಿಲ್ಲ. ಆದರೆ ಪ್ರತಿನಿತ್ಯವೂ ಈ ಸಮಸ್ಯೆ ಕಂಡುಬಂದರೆ ಆಹಾರವು ಜೀರ್ಣವಾಗುತ್ತಿಲ್ಲ ಎಂದರ್ಥ.
ಆಹಾರ ಸರಿಯಾಗಿ ಜೀರ್ಣವಾಗದಿರಲು ಕಾರಣಗಳೇನು?
ಸಾಮಾನ್ಯವಾಗಿ ಆಹಾರ ಸರಿಯಾಗಿ ಜೀರ್ಣವಾಗದಿರಲು ಹಲವಾರು ಕಾರಣಗಳಿವೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಮೊದಲನೆಯದು ಯಕೃತ್ತಿನ ಸಮಸ್ಯೆ. ತಡರಾತ್ರಿ ಆಹಾರ ಸೇವಿಸುವುದು, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು, ಚಹಾ ಅಥವಾ ಕಾಫಿಯ ಸೇವನೆ ಮತ್ತು ಫಾಸ್ಟ್ ಫುಡ್ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಕೆಲವರಲ್ಲಿ, ಪಿತ್ತಕೋಶವು ಅಗತ್ಯಕ್ಕಿಂತ ಹೆಚ್ಚು ಪಿತ್ತರಸವನ್ನು ಪಡೆಯುತ್ತದೆ. ಇದರಿಂದ ಕೂಡ ಅಜೀರ್ಣ ಸಮಸ್ಯೆ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ, ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳ ಕೊರತೆ ಅಥವಾ ಕರುಳಿನ ಸೋಂಕು ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಅಜೀರ್ಣ ಸಂಬಂಧಿತ ಸಮಸ್ಯೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ಜೀವನಶೈಲಿ. ಈಗ, ಈ ಸಮಸ್ಯೆಯು ಎಲ್ಲಾ ವಯಸ್ಸಿನವರಲ್ಲಿಯೂ ಇದೆ, ಆಗಾಗ್ಗೆ ಸಂಭವಿಸುವ ಅಜೀರ್ಣ ಸಮಸ್ಯೆಯು ಅನೇಕ ಬಾರಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಈ ಆಹಾರಗಳು ಅಜೀರ್ಣಕ್ಕೆ; ಸೇವನೆ ಮಾಡುವಾಗ ಎಚ್ಚರ
ಜೀರ್ಣಕ್ರಿಯೆಯನ್ನು ಸುಧಾರಿಸಲು ಏನು ಮಾಡಬೇಕು?
- ತಡರಾತ್ರಿ ಊಟ ಮಾಡುವುದನ್ನು ತಪ್ಪಿಸಿ.
- ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
- ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
- ದಿನನಿತ್ಯ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ