
ancient stepwell back : ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಒಬ್ಬರು ಅಧ್ಬುತ ಕೆಲಸ ಮಾಡಿದ್ದಾರೆ. ಅವರ ವಿಡಿಯೋ ಅನೇಕ ಯುವಕರು ಒಳ್ಳೆ ಕೆಲ್ಸ ಮಾಡುವಂತೆ ಮಾಡಿದೆ. ಬಾವಿಯೊಂದಕ್ಕೆ ಹೊಸ ರೂಪ ಸಿಕ್ಕಿದೆ.
ಸೋಶಿಯಲ್ ಮೀಡಿಯಾ (Social Media) ರಾತ್ರೋರಾತ್ರಿ ಜನರನ್ನು ಪ್ರಸಿದ್ಧಿ ಮಾಡೋದು ಮಾತ್ರವಲ್ಲ ಸಾಕಷ್ಟು ಒಳ್ಳೆ ಕೆಲ್ಸಗಳಿಗೆ ಪ್ರೋತ್ಸಾಹ ನೀಡುತ್ತೆ. ಇದನ್ನು ಸರಿಯಾಗಿ ಬಳಸಿಕೊಂಡಾಗ, ಜನರನ್ನು ಜಾಗೃತಿಗೊಳಿಸಿದಾಗ ಕಷ್ಟ ಅಂದ್ಕೊಂಡ ಕೆಲ್ಸ ಕೂಡ ಹೂವಿನಷ್ಟೇ ಹಗುರವಾಗ್ಬಹುದು. ಅದಕ್ಕೆ ಈ ಘಟನೆ ಉತ್ತಮ ನಿದರ್ಶನ. ಹಳೆ ಪುರಾತನ, ಮೆಟ್ಟಿಲಿರುವ ಆಳವಾದ ಬಾಯಿಯೊಂದು ಕೊಳಕಿನಲ್ಲಿ ಕಾಣೆಯಾಗಿತ್ತು. ಈಗ ಬಾವಿ ತನ್ನ ಹಳೆ ಸೌಂದರ್ಯವನ್ನು ಮರಳಿ ಪಡೆದುಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಅಧಿಕಾರಿಗಳಲ್ಲ, ನೂರಾರು ಮಂದಿ ಸಾಮಾನ್ಯ ಜನರು.
ಒಂದು ವಿಡಿಯೋದಿಂದ ಬದಲಾಯ್ತು ಬಾವಿ (well) ರೂಪ
ಆಂಧ್ರಪ್ರದೇಶ (Andhra Pradesh )ದ ಪೀಪುಲ್ಲಿ ಮಂಡಲ್ ನಲ್ಲಿರುವ ಪುರಾತನ ಬಾವಿ ದುಸ್ಥಿತಿ ಬಗ್ಗೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಅಬ್ಬಾಯಿ ಕಾಂತ್ ವಿಡಿಯೋ ಪೋಸ್ಟ್ ಮಾಡಿದ್ದರು. ಒಂದು ಕಾಲದಲ್ಲಿ ಪ್ರಮುಖ ನೀರಿನ ಮೂಲವಾಗಿದ್ದ ಮೆಟ್ಟಿಲುಬಾವಿ ಕಾಲಾನಂತರದಲ್ಲಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಪ್ಲಾಸ್ಟಿಕ್ ತ್ಯಾಜ್ಯ, ಅರಿಶಿನ ಪ್ಯಾಕೆಟ್, ತೆಂಗಿನ ಚಿಪ್ಪು, ಎಲೆ ತಟ್ಟೆ, ದೇವಾಲಯಗಳ ಹೂವಿನ ಹಾರಗಳಂತಹ ಅನೇಕ ವಸ್ತುಗಳಿಂದ ತುಂಬಿತ್ತು. ಬಾವಿಯಲ್ಲಿ ಹೂಳು ಸಾಕಷ್ಟಿತ್ತು. ಈ ಪುರಾತನ ಬಾವಿ ಕೊಳೆಯಾಗಿದ್ದು ಮಾತ್ರವಲ್ಲ ಪರಂಪರೆ ಕ್ರಮೇಣ ನಾಶವಾಗ್ತಿದೆ ಎಂಬ ಎಚ್ಚರಿಕೆಯನ್ನು ಅಬ್ಬಾಯಿ ಕಾಂತ್ ನೀಡಿದ್ದರು. ಅವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಡ್ರೆಸ್ ಇಸ್ತ್ರಿಗೆ ಹತ್ತೇ ರೂಪಾಯಿ, ತಿಂಗಳ ಗಳಿಕೆ ಮಾತ್ರ ಲಕ್ಷದಲ್ಲಿ, ಶಾಕ್ ಆಗುತ್ತೆ ಡ್ರೈ ಕ್ಲೀನರ್
ಅವರ ಜಾಗೃತಿ ವಿಡಿಯೋ ಜನರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತ್ತು. ಕೆಲವೇ ದಿನಗಳಲ್ಲಿ, ಪೂರ್ವ ಸಂಪದ ರಕ್ಷಕ ಸೇನೆ ಬಾವಿಯ ಪುನರುಜ್ಜೀವನಕ್ಕೆ ಪಣತೊಟ್ಟಿತು. ಪರಂಪರೆ ಸಂರಕ್ಷಣೆಯ ಕೆಲ್ಸ ಮಾಡ್ತಿರುವ ಈ ಸಂಘಟನೆ ಬ್ಯಾನರ್ ಅಡಿಯಲ್ಲಿ 300 ಕ್ಕೂ ಹೆಚ್ಚು ಸ್ವಯಂಸೇವಕರು ಸ್ಥಳವನ್ನು ಸ್ವಚ್ಛಗೊಳಿಸಲು ಕೈ ಜೋಡಿಸಿದ್ರು. ರಾಮ ಸೇತುವೆ ನಿರ್ಮಾಣಕ್ಕೆ ವಾನರ ಸೇನೆ ಸಹಾಯ ಮಾಡಿದಂತೆ ಎಲ್ಲರ ಕೈ ಸೇರಿ ಕೊಳಕು ಬಾವಿಗೆ ಚೆಂದದ ರೂಪ ಸಿಕ್ಕಿತು. ಒಂದೇ ದಿನಕ್ಕೆ ಆಗುವಂತ ಕೆಲ್ಸ ಇದಾಗಿರಲಿಲ್ಲ. ಕಸ ತೆಗೆದು, ಸ್ವಚ್ಛಗೊಳಿಸುವ ಜೊತೆಗೆ ಬಾವಿಯ ಕೊಳೆ ತೆಗೆದು, ನೀರನ್ನು ಶುದ್ಧಗೊಳಿಸಬೇಕಿತ್ತು. ಮೆಟ್ಟಿಲಿಗೆ ಬಣ್ಣ ಬಳಿಯುವ ಕೆಲಸವೂ ನಡೆಯಿತು.
ಸೋಶಿಯಲ್ ಮೀಡಿಯಾದಲ್ಲಿ ಹಳೆ ಬಾವಿ ಹಾಗೂ ಹೊಸ ಬಾವಿಯ ವ್ಯತ್ಯಾಸವನ್ನು ನೀವು ನೋಡ್ಬಹುದು. ಇದರ ಹಿಂದೆ ಎಷ್ಟೊಂದು ಶ್ರಮವಿದೆ ಎಂಬುದನ್ನು ನೀವು ಅರಿಯಬಹುದು. ಈಗ ಬಾವಿಯನ್ನು ನಿರ್ಲಕ್ಷಿಸದಂತೆ ನೋಡಿಕೊಳ್ಳಲು, ಸಂಘಟಕರು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದಾರೆ. ಪರಂಪರೆಯ ತಾಣಗಳನ್ನು ಗೌರವಿಸಲು ಮತ್ತು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಒತ್ತಾಯಿಸುತ್ತಿದ್ದಾರೆ. ಸಂರಕ್ಷಣೆ ಅಧಿಕಾರಿಗಳ ಕೆಲಸವಲ್ಲ, ಎಲ್ಲರ ಕರ್ತವ್ಯ ಎಂಬ ಸಂದೇಶವನ್ನು ತಿಳಿಸಲು ಸೈನ್ಬೋರ್ಡ್ಗಳನ್ನು ಹಾಕಿದ್ದಾರೆ.
ಮಹಿಳಾ ಫ್ಯಾನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ Dhurandhar ಸಿಂಗರ್ ಜಾಸ್ಮಿನ್ ಮಾಡಿದ್ದೇನು ನೋಡಿ.
ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಉತ್ತಮ ನಾಗರಿಕರು ಎಂಬ ಶಹಬ್ಬಾಸ್ ಗಿರಿ ನೀಡಿದ್ದಾರೆ. ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡಾ ಏನೆಲ್ಲ ಮಾಡಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಜನರ ನಿರ್ಲಕ್ಷ್ಯ, ಅರಿವಿನ ಕೊರತೆಯಿಂದ ಐತಿಹಾಸಿಕ ತಾಣಗಳು ಅವನತಿಗೆ ಸಾಗುತ್ತಿವೆ. ಅದನ್ನು ಉಳಿಸುವ ಜವಾಬ್ದಾರಿ ನಾಗರಿಕನ ಮೇಲಿದೆ. ಇಲ್ಲಿ ಅದ್ಭುತವಾದ ಸಂಗತಿಯೆಂದ್ರೆ ಜನರು ಈ ಅಭಿಯಾನಕ್ಕೆ ಬರೀ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ನೀಡದೆ, ಕೆಲಸಕ್ಕೆ ಕೈ ನೀಡಿದ್ದು. ಸ್ಥಳೀಯ ನಿವಾಸಿಗಳು, ಯುವ ಗುಂಪುಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣ್ಬಹುದು.