
ದುರ್ಗಾ ಸೂಕ್ತದ ಶ್ರವಣ ಮಾಡಿದರೆ ಕೆಲವು ಬೆಳವಣಿಗೆಗಳು ನಿಮ್ಮ ಪರವಾಗಿ ಆಗಲಿವೆ. ಒಂದು ವೇಳೆ ಉದ್ಯೋಗ ಬದಲಾವಣೆಯ ಪ್ರಯತ್ನದಲ್ಲಿ ಆ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆಗಳು ದೂರ ಆಗಲಿವೆ. ಆರ್ಥಿಕ ಒತ್ತಡಗಳಿಂದ ಹೊರಬರಲು ಸಹಾಯಗಳು ಒದಗಲಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸೇಲ್ಸ್- ಮಾರ್ಕೆಟಿಂಗ್ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾ ಮೇಲಧಿಕಾರಿ ನೀಡುವ ಸಲಹೆಯನ್ನು ನೀಡಲಾಗಿದೆ. ದೂರ ಪ್ರಯಾಣ ಅನಿವಾರ್ಯ ಅಂತಾ ಯಾವುದೇ ಹಿಂಜರಿಕೆ ಮಾಡದೆ ಹೊರಟುಬಿಡಿ. ನಿಮಗೆ ಇದರಿಂದ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ. ದೇವತಾ ಕಾರ್ಯಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬಂದಲ್ಲಿ ಇಲ್ಲ ಎನ್ನದೆ ಕಡ್ಡಾಯವಾಗಿ ಭಾಗಿ ಆಗಲು ಪ್ರಯತ್ನಿಸಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿರುವ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಿದೆ. ಹೊಸ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಣ್ಣು- ತರಕಾರಿ ಬೆಳೆಗಾರರಿಗೆ ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಗೋಚರವಾಗಲಿವೆ. ಇಷ್ಟು ದಿನ ಯಾವ ಅಡೆತಡೆಗಳು ನಿಮಗೆ ಸವಾಲಾಗಿ ಪರಿಣಮಿಸಿದ್ದವೋ ಅವರಿಗೆ ದಾಟಲು ಸಾಧ್ಯವಾಗಲಿದೆ. ಚಿತ್ರಮಂದಿರಗಳ ವ್ಯವಹಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ತೀರ್ಮಾನ ಮಾಡುತ್ತೀರಿ. ಇದಕ್ಕೆ ಕುಟುಂಬದ ಸದಸ್ಯರ ಬೆಂಬಲ ಸಹ ದೊರೆಯಲಿದೆ.
ಲೇಖನ- ಸ್ವಾತಿ ಎನ್.ಕೆ.