ಇಂದು ಬಾಂಗ್ಲಾ ಚುನಾವಣೆ : ದೇಶ ತೊರೆದ ಹಸೀನಾ ಪಕ್ಷಕ್ಕೆ ನಿರ್ಬಂಧ-299 ಸ್ಥಾನಗಳಿಗೆ ಮತ | Election In Bangladesh Hasinas Party Faces Ban

ಇಂದು ಬಾಂಗ್ಲಾ ಚುನಾವಣೆ : ದೇಶ ತೊರೆದ ಹಸೀನಾ ಪಕ್ಷಕ್ಕೆ ನಿರ್ಬಂಧ-299 ಸ್ಥಾನಗಳಿಗೆ ಮತ | Election In Bangladesh Hasinas Party Faces Ban



ಇಂದು ಬಾಂಗ್ಲಾ ಚುನಾವಣೆ : ದೇಶ ತೊರೆದ ಹಸೀನಾ ಪಕ್ಷಕ್ಕೆ ನಿರ್ಬಂಧ-299 ಸ್ಥಾನಗಳಿಗೆ ಮತ | Election In Bangladesh Hasinas Party Faces Ban

ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಸಾಮೂಹಿಕ ದಂಗೆ ಕೊನೆಗೊಳಿಸಿದ ನಂತರದ ಮೊದಲ ಬಾರಿಗೆ, ಬಾಂಗ್ಲಾದೇಶದ ಸಂಸತ್‌ ಚುನಾವಣೆ ಗುರುವಾರ ನಡೆಯಲಿದೆ. ಬಿಎನ್‌ಪಿ ಹಾಗೂ ಜಮಾತೆ ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಹಸೀನಾ ಅವರ ಅವಾಮಿ ಲೀಗ್‌ ಅನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ

ಢಾಕಾ: ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಸಾಮೂಹಿಕ ದಂಗೆ ಕೊನೆಗೊಳಿಸಿದ ನಂತರದ ಮೊದಲ ಬಾರಿಗೆ, ಬಾಂಗ್ಲಾದೇಶದ ಸಂಸತ್‌ ಚುನಾವಣೆ ಗುರುವಾರ ನಡೆಯಲಿದೆ.

ಚುನಾವಣೆಯಲ್ಲಿ ಬಿಎನ್‌ಪಿ ಹಾಗೂ ಜಮಾತೆ ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಹಸೀನಾ ಅವರ ಅವಾಮಿ ಲೀಗ್‌ ಅನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಎಷ್ಟರ ಮಟ್ಟಿಗೆ ಈ ಚುನಾವಣೆ ವಿಶ್ವಾಸಾರ್ಹವಾಗಲಿದೆ ಹಾಗೂ ಕೋಮು ದಂಗೆಯಲ್ಲಿ ತತ್ತರಿಸಿರುವ ದೇಶವನ್ನು ಮರಳಿ ಪ್ರಜಾಪ್ರಭುತ್ವದ ಹಾದಿಗೆ ಒಯ್ಯಲಿದೆ ಎಂಬುದು ಪ್ರಶ್ನೆಯಾಗಿದೆ.

ಹಸೀನಾ ಪದಚ್ಯುತಿ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರ ನೋಡಿಕೊಳ್ಳುತ್ತಿದ್ದಾರೆ.

299 ಸ್ಥಾನಗಳಿಗೆ ಚುನಾವಣೆ:

ಬಾಂಗ್ಲಾದೇಶದ ಸಂಸತ್ತು 350 ಸ್ಥಾನ ಹೊಂದಿದ್ದು, 300 ಸದಸ್ಯರನ್ನು ನೇರ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ. 50 ಮಹಿಳಾ ಮೀಸಲು ಸ್ಥಾನಗಳಿದ್ದು, ಚುನಾಯಿತ ಸಂಸದರು ಸಂಸತ್ತು ರಚನೆ ಆದ ನಂತರ ಆಯ್ಕೆ ಮಾಡುತ್ತಾರೆ.

299 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದೆ. ಅಭ್ಯರ್ಥಿಯೊಬ್ಬರ ನಿಧನದ ಕಾರಣ ಒಂದು ಸ್ಥಾನದ ಚುನಾವಣೆ ಮುಂದೂಡಲಾಗಿದೆ. f 1,755 ಅಭ್ಯರ್ಥಿಗಳಿದ್ದು, 12.8 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಸಂಸತ್ತು 5 ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತದೆ.

ಬಿಎನ್‌ಪಿ ಮುಂಚೂಣಿ?:

50 ರಾಜಕೀಯ ಪಕ್ಷಗಳಿದ್ದರೂ ಬಿಎನ್‌ಪಿ ಹಾಗೂ ಜಮಾತೆ ಇಸ್ಲಾಮಿ ಪ್ರಮುಖವಾಗಿ ಸ್ಪರ್ಧಿಸುತ್ತಿವೆ. ಎರಡೂ ಪಕ್ಷಗಳು ಭಾರತದಲ್ಲಿನ ಗ್ಯಾರಂಟಿಗಳ ರೀತಿ ಭರವಸೆ ಕೊಟ್ಟಿದ್ದು, ಚುನಾವಣೆ ರಂಗೇರಿದೆ. ದಿವಂಗತ ಬಿಎನ್‌ಪಿ ನಾಯಕಿ ಖಲೀದಾ ಜಿಯಾ ಅವರ ಪುತ್ರ ತಾರೀಖ್‌ ರೆಹಮಾನ್‌ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದು, ಗೆಲ್ಲುವ ಮುಂಚೂಣಿಯಲ್ಲಿದ್ದಾರೆ.

ಹಸೀನಾ ಇಲ್ಲದ ಮೊದಲ ಚುನಾವಣೆ:

ಅಂದ ಹಾಗೆ ಕೆಲವು ದಶಕಗಳ ಬಳಿಕ ಶೇಖ್‌ ಹಸೀನಾ ಇಲ್ಲದ ಇಲ್ಲದ ಮೊದಲ ಚುನಾವಣೆ ಇದಾಗಿದೆ. ಅವರ ಪಕ್ಷದ ಸ್ಪರ್ಧೆ ನಿರ್ಬಂಧ ಜನಾಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಚುನಾವಣೆಯ ಸಾಚಾತನವನ್ನು ಜನತೆ ಪ್ರಶ್ನಿಸಿದ್ದಾರೆ. ಸದ್ಯ ಶೇಖ್‌ ಹಸೀನಾ ಬಾಂಗ್ಲಾದೇಶ ತೊರೆದು ಭಾರತದಲ್ಲಿದ್ದಾರೆ.



Source link

Leave a Reply

Your email address will not be published. Required fields are marked *