
<p>Immunity Boosting Spicesಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ, ಅವರು ಬೇಗ ಕಾಯಿಲೆ ಬೀಳುತ್ತಾರೆ. ಇಂಥವರು ತಮ್ಮ ಡಯಟ್‌ನಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು.</p><img>ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಬೇಕಾದ ಕೆಲವು ಮಸಾಲೆ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಯೋಣ.<img>ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅತ್ಯುತ್ತಮ ಔಷಧೀಯ ಗುಣ ಹೊಂದಿದೆ.<img>ಶುಂಠಿಯಲ್ಲಿರುವ ಜಿಂಜರಾಲ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿ-ಇನ್‌ಫ್ಲಮೇಟರಿ ಗುಣಗಳೂ ಇವೆ.<img>ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಸಂಯುಕ್ತವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಪ್ರಯೋಜನಕಾರಿಯಾಗಿದೆ.<img>ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಏಲಕ್ಕಿ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.<img>ನೆಗಡಿ ಮತ್ತು ಸೀನಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಕಾಳುಮೆಣಸು ಸಹಾಯ ಮಾಡುತ್ತದೆ. ಇದು ಇಮ್ಯೂನಿಟಿ ಹೆಚ್ಚಿಸಲು ಅತ್ಯುತ್ತಮವಾಗಿದೆ.<img><p> ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವ ಚಕ್ಕೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.</p><img>ಆ್ಯಂಟಿ ಆಕ್ಸಿಡೆಂಟ್ ಗುಣಗಳಿರುವ ಲವಂಗವನ್ನು ಆಹಾರದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
Source link
Immunity Boosting Spices: ಆಸ್ಪತ್ರೆಗೆ ಅಲೆಯುವ ಬದಲು ಅಡುಗೆಮನೆಗೆ ಹೋಗಿ! ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಮಸಾಲೆ ಪದಾರ್ಥ ತಪ್ಪದೇ ತಿನ್ನಿ!