ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್

ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್


ಒಟ್ಟಾವಾ, ಫೆಬ್ರವರಿ 12: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(ಫೈರಿಂಗ್) ಎಲ್ಲರನ್ನೂ ಬೆಚ್ಚಿಬೀಳಿಸಿತು. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. 20ಕ್ಕೂ ಹೆಚ್ಚು ಮಂದಿ ಇದ್ದರು. ಅಂದು ಅವರೆಲ್ಲರ ಮೇಲೆ ಗುಂಡು ಹಾರಿಸಿದ್ದು ಮಂಗಳಮುಖಿ ಎಂಬುದು. ಅದೊಂದು ಭಯಾನಕ ವಿಚಾರವೇನೆಂದರೆ ಆಕೆ ಶಾಲೆಯ ಮೇಲೆ ದಾಳಿ ನಡೆಸುವ ಮುನ್ನ ತನ್ನ ತಾಯಿ ಹಾಗೂ ತನ್ನ ಸಹೋದರನ ಮೇಲೆ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಂದಿದ್ದಳು.

ಆಕೆಗಿನ್ನೂ 18 ವರ್ಷ ವಯಸ್ಸು, ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಆಕೆಯ ಹೆಸರು ಓದಿದ ಶಾಲೆಯ ಮೇಲೆಯೇ ಗುಂಡು ಹಾರಿಸಿದ್ದಾಳೆ. ಆದರೆ ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಹತ್ಯಾಕಾಂಡ ಇದಾಗಿದೆ ಆದರೆ ಈ ಘಟನೆಗೆ ಕಾರಣವೇ ಇಲ್ಲ.

ಬ್ರಿಟಿಷ್ ಕೊಲಂಬಿಯಾದ ಪೆಸಿಫಿಕ್ ಪ್ರಾಂತ್ಯದ 2,400 ಜನರಿರುವ ದೂರದ ಸಮುದಾಯವಾದ ಟಂಬ್ಲರ್ ರಿಡ್ಜ್‌ನಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೂಟ್‌ಸೆಲರ್ ಒಬ್ಬ ಟ್ರಾನ್ಸ್‌ಜೆಂಡರ್ ಆಗಿದ್ದು, ಆಕೆ ಮೊದಲು ಗಂಡಾಗಿ ಜನಿಸಿ ಬಳಿಕ ಹೆಣ್ಣಾಗಿ ಬದಲಾಗಿದ್ದಳು. ನಾಲ್ಕು ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದಿದ್ದಳು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್ಡೊನಾಲ್ಡ್ ಹೇಳಿದ್ದಾರೆ.

ಗುಂಡು ಹಾರಿಸಿದ ಮಹಿಳೆ ಈ ಹಿಂದೆ ಬಂದೂಕು ಪರವಾನಗಿಯನ್ನು ಹೊಂದಿದ್ದರು, ಆದರೆ ಅವಧಿ ಮೀರಿತ್ತು ಮತ್ತು ಆಯುಧಗಳನ್ನು ಆಕೆಯ ನಿವಾಸದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ . ಆದರೆ ನಂತರ ಹಿಂತಿರುಗಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ರೂಟ್‌ಸೆಲಾರ್‌ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಆಕೆಯ ಮನೆಗೆ ಭೇಟಿ ನೀಡಿ ವಿಚಾರಿಸುತ್ತಲೇ ಇದ್ದರು. ದಾಳಿ ನಡೆದ ಶಾಲೆಗೆ ಒಮ್ಮೆ ಅವರು ಹಾಜರಾಗಿದ್ದರು ಆದರೆ ನಾಲ್ಕು ವರ್ಷಗಳ ಹಿಂದೆ ಶಾಲೆಯನ್ನು ತೊರೆದಿದ್ದಳು. ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 24 ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.

ರೂಟ್‌ಸೆಲಾರ್ ಮೊದಲು ತನ್ನ ತಾಯಿ, 39, ಮತ್ತು 11 ವರ್ಷದ ಮಲಸಹೋದರನನ್ನು ಕುಟುಂಬದ ಮನೆಯಲ್ಲಿ ಕೊಂದಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಅವಳು ಓದುತ್ತಿದ್ದ ಹತ್ತಿರದ ಶಾಲೆಯ ಮೇಲೆ ದಾಳಿ ಮಾಡಿದ್ದಾಳೆ. ಈ ಹಂತದಲ್ಲಿ ಯಾರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಉದ್ದನೆಯ ಬ್ಯಾರೆಲ್ ಗನ್ ಮತ್ತು ಪಿಸ್ತೂಲ್ ಹೊಂದಿದ್ದ ಶೂಟರ್, ಹತ್ಯಾಕಾಂಡದ ನಂತರ ತಾನೂ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟಿದ್ದಾಳೆ.

ಕುಟುಂಬದ ಮತ್ತೊಬ್ಬ ಸದಸ್ಯರು ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಮನೆಯಲ್ಲಿ ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ರಂದು ಪ್ರಕಟಿಸಲಾಗಿದೆ – 9:48 am, ಗುರು, 12 ಫೆಬ್ರವರಿ 26



Source link

Leave a Reply

Your email address will not be published. Required fields are marked *