ಹೈಕಮಾಂಡ್ ಮಾಹಿತಿ ಕೇಳಿದ ಬೆನ್ನಲ್ಲೇ ‘ಕೈ’ ಶಾಸಕರ ವಿದೇಶ ಪ್ರವಾಸದ ಬಗ್ಗೆ ಮತ್ತಷ್ಟು ಗೊಂದಲ: ಸಚಿವ ವೆಂಕಟೇಶ್ ಅಚ್ಚರಿಯ ಹೇಳಿಕೆ

ಹೈಕಮಾಂಡ್ ಮಾಹಿತಿ ಕೇಳಿದ ಬೆನ್ನಲ್ಲೇ ‘ಕೈ’ ಶಾಸಕರ ವಿದೇಶ ಪ್ರವಾಸದ ಬಗ್ಗೆ ಮತ್ತಷ್ಟು ಗೊಂದಲ: ಸಚಿವ ವೆಂಕಟೇಶ್ ಅಚ್ಚರಿಯ ಹೇಳಿಕೆ


ಸಚಿವ ವೆಂಕಟೇಶ್ ಅಚ್ಚರಿಯ ಹೇಳಿಕೆಚಿತ್ರದ ಕ್ರೆಡಿಟ್ ಮೂಲ: TV9 ನೆಟ್‌ವರ್ಕ್

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ಕಾಂಗ್ರೆಸ್‌ನಲ್ಲಿ (ಕಾಂಗ್ರೆಸ್) ಒಂದೆಡೆ ಅಧಿಕಾರ ಹಂಚಿಕೆ ಕಿತ್ತಾಟ ತಾರಕಕ್ಕೇರಿದ್ದಾರೆ, ಮತ್ತೊಂದೆಡೆ ಶಾಸಕರ ವಿದೇಶ ಪ್ರವಾಸ ವಿಚಾರ ಚರ್ಚೆಯಲ್ಲಿದೆ. ಕೆಲವು ಪಶುಸಂಗೋಪನೆ ಇಲಾಖೆ ವತಿಯಿಂದ ಕಾಂಗ್ರೆಸ್ ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿದೆ. ಆದರೆ ಇದೀಗ, ಹೈಕಮಾಂಡ್ ವರದಿ ಕೇಳಿದ ಬೆನ್ನಲ್ಲೇ ಪಶುಸಂಗೋಪನೆ ಇಲಾಖೆ ಸಚಿವ ಕೆ ವೆಂಕಟೇಶ್ ಅಚ್ಚರಿಯ ಮಾಹಿತಿ ನೀಡಿದ್ದಾರೆ. ನಮ್ಮ ಇಲಾಖೆಯಿಂದ ವಿದೇಶ ಪ್ರವಾಸ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲವು ಶಾಸರ ವಿದೇಶ ಪ್ರವಾಸಕ್ಕೂ ನಮ್ಮ ಇಲಾಖೆಗೂ ಸಂಬಂಧವಿಲ್ಲ. ನಮ್ಮ ಇಲಾಖೆ ವತಿಯಿಂದ ಪ್ರವಾಸ ಯೋಜನೆ ಮಾಡಿಲ್ಲ. ಪ್ರವಾಸಕ್ಕೆ ನನಗೂ ಆಹ್ವಾನವಿತ್ತು, ಆದರೆ ನಾನು ಹೋಗುತ್ತಿಲ್ಲ. ನಾನೇ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.

ಕೆಲ ಹಿರಿಯ ಶಾಸಕರು ವಿದೇಶ ಪ್ರವಾಸ ಹೋಗುತ್ತಿರುವುದು ನಿಜ. ಆದರೆ, ನನ್ನ ಅದು ಇಲಾಖೆಯಿಂದ ಯೋಜನೆಯಾದ ಪ್ರವಾಸವಲ್ಲ. ಪಶುಸಂಗೋಪನೆ ಇಲಾಖೆಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕರ ವಿದೇಶ ಪ್ರವಾಸದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು ವಿದೇಶ ಪ್ರವಾಸ ಹೋಗುವ ಬಗ್ಗೆ ಮಾಹಿತಿ ಇಲ್ಲ. ಆದಾಗ್ಯೂ ಅವರ ದುಡ್ಡಿನಲ್ಲಿ ಅವರು ಹೋದರೆ ತಪ್ಪೇನು ಎಂದು ಪ್ರಶ್ನಿಸಿದ್ದರು.

ವರದಿ ಕೇಳಿದ್ದ ಹೈಕಮಾಂಡ್

ಮತ್ತೊಂದೆಡೆ, ಅಧಿಕಾರ ಹಂಚಿಕೆ ಜಟಾಪಟಿ ತೀವ್ರಗೊಳ್ಳುತ್ತಿರುವ ಈ ಹೊತ್ತಿನಲ್ಲೇ ಶಾಸಕರು ವಿದೇಶ ಪ್ರವಾಸ ಹೋಗುವುದಕ್ಕೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಂಚಿಕೆ ಹಂಚಿಕೆಗೆ ಸಂಬಂಧಿಸಿದ ರಾಜಕೀಯ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ವಿದೇಶ ಪ್ರವಾಸ ಬೇಕಿತ್ತಾ ಎಂಬ ಪ್ರಶ್ನೆ ಕೆಲ ನಾಯಕರಿಂದ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಹೈಕಮಾಂಡ್ ಮಧ್ಯಪ್ರವೇಶಸಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್

ಇದೀಗ ಸಚಿವ ವೆಂಕಟೇಶ್ ನೀಡಿರುವ ಸ್ಪಷ್ಟನೆ, ಹೈಕಮಾಂಡ್ ಮಧ್ಯ ಪ್ರವೇಶಿಸದಂತೆ ವಿದೇಶ ಪ್ರವಾಸ ವಿಚಾರದಲ್ಲಿ ಒಳಗೊಳಗೇ ಬದಲಾವಣೆ ಮಾಡಿಕೊಂಡರೇ ಎಂಬ ಪ್ರಶ್ನೆ ಮೂಡಿದೆ. ಜೊತೆಗೆ, ಕಾಂಗ್ರೆಸ್ರ ವಿದೇಶ ಪ್ರವಾಸ ವಿಚಾರದಲ್ಲಿ ಮತ್ತಷ್ಟು ಗೊಂದಲ ಮೂಡಿಸಿದ್ದಂತೂ ನಿಜ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *