ಅಲ್ಲು ಅರ್ಜುನ್ (Allu Arjun) ಈಗ ಸ್ಟಾಪ್ ಪ್ಯಾನ್ ಇಂಡಿಯಾ ನಟ. ಅವರ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಗ್ಲೋಬಲ್ ಮಟ್ಟದಲ್ಲಿ ಸೂಪರ್ ಹಿಟ್ ಆಗಿವೆ. ‘ಪುಷ್ಪ 2’ ಸಿನಿಮಾ ಅಂತೂ ಹಳೆಯ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಪುಡಿಗಟ್ಟಿವೆ. ಅಲ್ಲು ಅರ್ಜುನ್ ಜನಪ್ರಿಯತೆ ಭಾರತವನ್ನು ದಾಟಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಆದರೆ ಈಗ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ, ಅಲ್ಲ ಅರ್ಜುನ್ ಎಂದು ಕೆಟ್ಟದಾಗಿ ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.
ಇತ್ತೀಚೆಗಷ್ಟೇ ಅರ್ಜುನ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿ ಆಗುವ ವ್ಯಕ್ತಿಗಳಿಗೆ 42 ನಿಬಂಧನೆಗಳನ್ನು ಹಾಕಲಾಗಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿ ಆಗುವ ಅಭಿಮಾನಿಗಳು ಹಾಗೂ ಈ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುದ್ದಿ ಹಬ್ಬಿಸಲಾಯಿತು. ಪಿಆರ್ ಸಂಸ್ಥೆಗೆ ಸೇರಿದ ಕಾವೇರಿ ಬರುವಾ ಎಂಬ ಬ್ರ್ಯಾಂಡ್ ಮ್ಯಾನೇಜರ್ ಈ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದರು. ಅದು ವೈರಲ್ ಆಗಿ, ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಅಭಿಪ್ರಾಯ ಹಬ್ಬಿತ್ತು. ಬಳಿಕ ಅಲ್ಲು ಅರ್ಜುನ್ ಅವರ ತಂಡ ಈ ಬಗ್ಗೆ ಸ್ಪಷ್ಟನೆ ನೀಡಲಾಗಿ, ಇದೆಲ್ಲವೂ ಸುಳ್ಳು, ಅಲ್ಲು ಅರ್ಜುನ್ ಅವರು ಯಾವುದೇ ರೀತಿಯ ನಿಯಮಗಳು ಯಾರ ಮೇಲೂ ಹೇರಿಲ್ಲ ಎಂದಿದ್ದರು.
ಆದರೆ ಹೀಗೆ ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಸುದ್ದಿ ಹಬ್ಬುತ್ತಿರುವುದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಇತ್ತೀಚೆಗೆ ನಡೆದಿರುವ ಘಟನೆಯನ್ನು ಉದಾಹರಣೆಯಾಗಿ ನೋಡುವುದಾದರೆ ಪ್ರಶಸ್ತಿಯ ಪಿಆರ್ ಸಂಸ್ಥೆಗೆ ಸೇರಿದ ಮಹಿಳೆ ಅಲ್ಲು ಅರ್ಜುನ್ ವಿರುದ್ಧ ಹೀಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಅಲ್ಲು ಅರ್ಜುನ್ ವಿರುದ್ಧ ಹೀಗೆ ಸುಳ್ಳು ಆರೋಪಗಳು ಬರುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಈ ರೀತಿಯ ಆರೋಪಗಳು ಬಂದಿವೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?
ಚಿತ್ರರಂಗದವರೇ ಅಲ್ಲು ಅರ್ಜುನ್ ಅವರನ್ನು ತುಳಿಯಲು, ಅವರ ಬಗ್ಗೆ ನೆಗೆಟಿವ್ ಸುದ್ದಿಗಳು ಹರಡುತ್ತಿವೆ. ಇನ್ನು ಮುಂದೆ ಈ ರೀತಿಯ ನೆಗೆಟಿವ್ ಅಪಪ್ರಚಾರ ಮಾಡುವುದು ಕಂಡು ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅರ್ಜುನ್ ತಂಡದವರು ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಹ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅಲ್ಲು ಅರ್ಜುನ್ ಅವರ ತೆಲುಗು ರಾಜ್ಯಗಳ ಅಭಿಮಾನಿಗಳ ದೊಡ್ಡ ಸಮಾವೇಶವನ್ನು ಆಯೋಜಿಸಲು ಸಜ್ಜಾಗಿದ್ದರೆ, ಎರಡೂ ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳ ಸಂಘವನ್ನು ಬಲಗೊಳಿಸಲು ಯೋಜನೆ ಸಿದ್ಧವಾಗಿದೆ. ಸಮಾವೇಶಕ್ಕೆ ತಯಾರಿ ನಡೆಯುವ ಸಮಯದಲ್ಲಿಯೇ ಅಲ್ಲು ಅರ್ಜುನ್ ವಿರುದ್ಧ ಈ ರೀತಿಯ ಅಪಪ್ರಚಾರ ಆರಂಭವಾಗಿರುವುದು ಸಹಜವಾಗಿಯೇ ಅನುಮಾನಗಳನ್ನು ಮೂಡಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ