Headlines

2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ 2 ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ?

2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ 2 ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ?

2 ಲಕ್ಷ ಹಣದ ಬದಲು ವರ್ತೂರ್ ಸಂತೋಷ್ ಬಳಿ 2 ಹಸು ನೀಡುವಂತೆ ಕೇಳಿದ್ರಾ ರಕ್ಷಿತಾ ಶೆಟ್ಟಿ?

ಬಿಗ್ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ರಕ್ಷಿತಾಗೆ, ವರ್ತೂರ್ ಸಂತೋಷ್ ಅವರು 2 ಲಕ್ಷ ರೂಪಾಯಿಗಳ ಬದಲಾಗಿ ಎರಡು ಹಳ್ಳಿಕಾರ್ ಹಸುಗಳನ್ನು ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ರನ್ನರ್ ಅಪ್ ಅದವರಿಗೆ 2 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಈ ಹಿಂದೆ ಬಿಗ್ಬಾಸ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವರ್ತೂರ್ ಸಂತೋಷ್ ಅವರು ಹೇಳಿದ್ದರು. ಅದರಂತೆ ಅವರು ಈ ಬಾರಿಯ ಬಿಗ್ಬಾಸ್ ರನ್ನರ್‌ ಅಪ್ ರಕ್ಷಿತಾಗೆ ಎರಡು ಲಕ್ಷ ಹಣ ನೀಡುವುದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ

ಆದರೆ ಬಿಗ್ಬಾಸ್ ರಕ್ಷಿತಾ ಅವರು ಹಣದ ಬದಲು ತಮ್ಮಲ್ಲಿರುವ ಎರಡು ಹಳ್ಳಿಕಾರ್ ಹಸುಗಳನ್ನೇ ನೀಡುವಂತೆ ವರ್ತೂರ್ ಸಂತೋಷ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಅದರಂತೆ ವರ್ತೂರ್ ಸಂತೋಷ್ ಅವರು ಈಗ ರಕ್ಷಿತಾ ಅವರಿಗೆ ಎರಡು ಹಸುಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಹಾಸ್ಯನಟನ ಉದಾರತೆ ತೆರೆದಿಟ್ಟ ಗೆಳೆಯ ನವಾಜುದ್ದೀನ್ ಸಿದ್ಧಿಕಿ

ವರ್ತೂರ್ ಪ್ರಕಾಶ್ ಬಿಗ್ಬಾಸ್ ಮನೆಯ ಫಿನಾಲೆ ವೇದಿಕೆಯಲ್ಲೇ ಬಿಗ್ಬಾಸ್‌ನಲ್ಲಿ ಸ್ಪರ್ಧಿಸಿ ಗೆದ್ದ ಹಣವನ್ನು ಏನು ಮಾಡುವಿರಿ ಎಂದು ಕೇಳಿದಾಗ ತನಗೆ ಸ್ವಲ್ಪ ಹಣದಲ್ಲಿ ಹಸುಗಳನ್ನು ಖರೀದಿಸಿ ಸಾಕುವ ಯೋಚನೆ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ

ಈ ಮಧ್ಯೆ ಅವರು ವರ್ತೂರ್ ಅವರ ಬಳಿ ಹಣದ ಬದಲು ಹಸುವನ್ನೇ ಕೇಳಿದ್ದಾರೆ ಎಂದು ವರದಿಯಾಗಿದ್ದು, ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅನೇಕರು ರಕ್ಷಿತಾ ಅವರು ಇದೇ ಕಾರಣಕ್ಕೆ ನಮಗೆ ಇಷ್ಟವಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲ ಮಾಹಿತಿಗಳ ಪ್ರಕಾರ ಇದೊಂದು ಫೇಕ್ ನ್ಯೂಸ್ ಎಂದು ವರದಿಯಾಗಿದೆ.

ಇದನ್ನೂ ಓದಿ:  ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು

ಇತ್ತ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿರುವ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಅವರಿಗೆ ಸಿಕ್ಕಾಪಟ್ಟೆ ಜಾಹೀರಾತು ಅವಕಾಶಗಳು ಹರಿದು ಬರುತ್ತಿವೆ. ಜನಪ್ರಿಯತೆ ಜಾಸ್ತಿಯಾದಂತೆ ಅವರ ಬಗ್ಗೆ ನಕಲಿ ಸುದ್ದಿಗಳು ಹರಿದಾಡುವುದಕ್ಕೆ ಶುರುವಾಗಿದ್ದು, ಕೆಲ ದಿನಗಳ ಹಿಂದೆ ಅವರು ತಮ್ಮೂರಿನಲ್ಲಿ ಗೋಶಾಲೆ ಆರಂಭಿಸಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು.

ಇದನ್ನೂ ಓದಿ: ಹೇಳಿದ್ದಕ್ಕಿಂತ ಜಾಸ್ತಿ ಕೂದಲು ಕತ್ತರಿಸಿದ ಸಲೂನ್ :ಕೋರ್ಟ್ ಮೆಟ್ಟಿಲೇರಿ 25 ಲಕ್ಷ ಪರಿಹಾರ ಪಡೆದ ಯುವತಿ

Source link

Leave a Reply

Your email address will not be published. Required fields are marked *