Headlines

ಅಳಿಯನೊಂದಿಗೆ ಓಡಿ ಹೋಗಿದ್ದ ಅತ್ತೆ, ಈಗ ಮಾಜಿ ಗಂಡನ ಸೋದರಮಾವನ ಜೊತೆ ಸಂಸಾರ! ಆಂಟಿ ಹಿಂದೆ ಹೋಗಿ ಬೆಪ್ಪಾದ ರಾಹುಲ್ !

ಅಳಿಯನೊಂದಿಗೆ ಓಡಿ ಹೋಗಿದ್ದ ಅತ್ತೆ, ಈಗ ಮಾಜಿ ಗಂಡನ ಸೋದರಮಾವನ ಜೊತೆ ಸಂಸಾರ! ಆಂಟಿ ಹಿಂದೆ ಹೋಗಿ ಬೆಪ್ಪಾದ ರಾಹುಲ್ !

ಅಳಿಯನೊಂದಿಗೆ ಓಡಿ ಹೋಗಿದ್ದ ಅತ್ತೆ, ಈಗ ಮಾಜಿ ಗಂಡನ ಸೋದರಮಾವನ ಜೊತೆ ಸಂಸಾರ! ಆಂಟಿ ಹಿಂದೆ ಹೋಗಿ ಬೆಪ್ಪಾದ ರಾಹುಲ್ !

ಮಗಳ ಭಾವಿ ಪತಿ ರಾಹುಲ್ ಜೊತೆ ಪಲಾಯನ ಮಾಡಿ ಸುದ್ದಿಯಾಗಿದ್ದ ಅನಿತಾ ದೇವಿ, ಇದೀಗ ಆತನನ್ನೂ ತೊರೆದಿದ್ದಾಳೆ. ರಾಹುಲ್‌ನಿಂದ ದೂರವಾಗಿರುವ ಆಕೆ, ಸದ್ಯ ತನ್ನ ಮಾಜಿ ಪತಿಯ ಭಾವ ಜಿತೇಂದ್ರ ಕುಮಾರ್ ಎಂಬಾತನ ಜೊತೆ ವಾಸವಾಗಿದ್ದಾಳೆ. ಅನಿತಾ ದೇವಿ ಕೈ ಕೊಟ್ಟಿದ್ದಕ್ಕೆ ಪೊಲೀಸ್ ಠಾಣೆ ಸುತ್ತಾಟ

ಮಗಳು ಮದುವೆಯಾಗಬೇಕಿದ್ದ ಹುಡುಗನೊಂದಿಗೆ ಎಸ್ಕೇಪ್ ಆಗಿದ್ದ ಅನಿತಾ ದೇವಿ (ಅಪ್ನಾದೇವಿ) ಆಂಟಿ ಇದೀಗ ಮತ್ತೊಮ್ಮೆ ಎಲ್ಲರನ್ನೂ ಚಕಿತಗೊಳಿಸಿದ್ದಾಳೆ. 2025ರಲ್ಲಿ ಭಾವಿ ಅಳಿಯ ರಾಹುಲ್ ಜೊತೆ ಪಲಾಯನ ಆಗಿರೋದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸುಮಾರು 10 ತಿಂಗಳು ರಾಹುಲ್ ಜೊತೆಯಲ್ಲಿದ್ದ ಅನಿತಾದೇವಿ ಅವನಿಗೂ ಗುಡ್‌ಬೈ ಹೇಳಿದ್ದಾಳೆ.

ರಾಹುಲ್‌ನಿಂದ ದೂರವಾಗಿರುವ ಅನಿತಾ ದೇವಿ ಸದ್ಯ ತನ್ನ ಮಾಜಿ ಪತಿಯ ಭಾವನೊಂದಿಗೆ (ಸೋದರ ಮಾವ) ವಾಸವಾಗಿದ್ದಾಳೆ. ಬಿಹಾರದ ಸೀತಾಮರ್ಹಿ ಜಿಲ್ಲೆಯ ಉಸ್ರೈನಾ ಗ್ರಾಮದಲ್ಲಿ ಮಾಜಿ ಗಂಡನ ಸೋದರ ಮಾವ ಜಿತೇಂದ್ರ ಕುಮಾರ್ ಜೊತೆಯಲ್ಲಿರುವ ಬಗ್ಗೆ ವರದಿಯಾಗಿದೆ. ಜಿತೇಂದ್ರ ಕುಮಾರ್ ಓರ್ವ ಬಟ್ಟೆ ವ್ಯಾಪಾರಿಯಾಗಿದ್ದು, ಆರಂಭದಲ್ಲಾದ ಪರಿಚಯ ಪ್ರೇಮಕ್ಕೆ ತಿರುಗಿದೆ.

ಜಿತೇಂದ್ರ ಕುಮಾರ್ ಜೊತೆ ಪ್ರೇಮಾಂಕುರವಾಗುತ್ತಿದ್ದಂತೆ ರಾಹುಲ್‌ಗೆ ಅನಿತಾ ಟಾಟಾ ಹೇಳಿದ್ದಾಳೆ. ಅನಿತಾ ದೇವಿ ಮನೆಯಿಂದ ₹2 ಲಕ್ಷ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂದು ರಾಹುಲ್ ಆರೋಪಿಸಿದ್ದಾನೆ. ಅನಿತಾ ದೇವಿ ವಾಸವಾಗಿರುವ ಅಲಿಘಡ್ ನಗರಕ್ಕೆ ತೆರಳಿರುವ ರಾಹುಲ್, ದಾದನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಬಿಹಾರದಲ್ಲಿ ನಡೆದ ಘಟನೆಯೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಅನಿತಾ ದೇವಿ ಪ್ರಕರಣ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಈ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ: ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಕೆಲ ವರದಿಗಳ ಪ್ರಕಾರ, ರಾಹುಲ್ ದೂರಿನ ಮೇರೆಗೆ ಪೊಲೀಸರು ಅನಿತಾ ದೇವಿ ಮತ್ತು ಜಿತೇಂದ್ರ ಕುಮಾರ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ಪ್ರಕರಣವನ್ನು ಘಟನೆ ನಡೆದ ಸ್ಥಳದ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಏಪ್ರಿಲ್ 16, 2025 ರಂದು ಅನಿತಾ ದೇವಿ ಮಗಳು ಶಿವಾನಿಯ ಮದುವೆ ರಾಹುಲ್ ಜೊತೆ ನಿಗದಿಯಾಗಿತ್ತು. ಆಹ್ವಾನ ಪತ್ರಿಕೆ ವಿತರಣೆ ವೇಳೆ ಭಾವಿ ಅಳಿಯನೊಂದಿಗೆ ಅನಿತಾ ಜೂಟ್ ಆಗಿದ್ದಳು.

ಇದನ್ನೂ ಓದಿ: ಕಮಲಾಕರ್‌ ಭಟ್‌ನಿಂದ ನನಗೆ ಮಾರಕ ಕಾಯಿಲೆ ಬಂತು, ಇನ್ನು ಸುಚಿತ್ರಾ ಕಥೆ ಏನೋ! ಬುರ್ಕಾದಾರಿ ಮಹಿಳೆ ಅಳಲು

Source link

Leave a Reply

Your email address will not be published. Required fields are marked *