Headlines

Karna Serial ಸೆಟ್ ಹೇಗಿರತ್ತೆ? ಶೂಟಿಂಗ್​ನಲ್ಲಿ ಏನೇನಾಗತ್ತೆ? ತೆರೆಯ ಹಿಂದಿನ ರೋವಿಡಿಯೋ ಇಲ್ಲಿದೆ | One Day With Zee Kannadas Karna Serial Shooting Set Video Viral Suc

Karna Serial ಸೆಟ್ ಹೇಗಿರತ್ತೆ? ಶೂಟಿಂಗ್​ನಲ್ಲಿ ಏನೇನಾಗತ್ತೆ? ತೆರೆಯ ಹಿಂದಿನ ರೋವಿಡಿಯೋ ಇಲ್ಲಿದೆ | One Day With Zee Kannadas Karna Serial Shooting Set Video Viral Suc



Karna Serial ಸೆಟ್ ಹೇಗಿರತ್ತೆ? ಶೂಟಿಂಗ್​ನಲ್ಲಿ ಏನೇನಾಗತ್ತೆ? ತೆರೆಯ ಹಿಂದಿನ ರೋವಿಡಿಯೋ ಇಲ್ಲಿದೆ | One Day With Zee Kannadas Karna Serial Shooting Set Video Viral Suc

ಜೀ ಕನ್ನಡದ ಜನಪ್ರಿಯ ‘ಕರ್ಣ’ ಸೀರಿಯಲ್ ಟಿಆರ್‌ಪಿಯಲ್ಲಿ ಮುಂಚೂಣಿಯಲ್ಲಿದೆ.   ಈ ಲೇಖನವು ಸೀರಿಯಲ್‌ನ ಶೂಟಿಂಗ್ ಸೆಟ್‌ನಲ್ಲಿ ಒಂದು ದಿನ ಹೇಗೆ ಕಳೆಯುತ್ತದೆ ಮತ್ತು ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದರ ಕುತೂಹಲಕಾರಿ ನೋಟವನ್ನು ನೀಡುತ್ತದೆ.

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ ಟಿಆರ್​ಪಿಯಲ್ಲಿಯೂ ಟಾಪ್​ ಸ್ಥಾನವನ್ನೇ ಪಡೆದುಕೊಂಡಿದೆ. ಇದನ್ನು ನೋಡುವ ದೊಡ್ಡ ವೀಕ್ಷಕ ವರ್ಗವೇ ಇದೆ. ಈ ಸೀರಿಯಲ್​ ವೀಕ್ಷಕರನ್ನು ಅದೆಷ್ಟರ ಮಟ್ಟಿಗೆ ಹುಚ್ಚು ಹಿಡಿಸಿತ್ತು ಎಂದರೆ ಇದರಲ್ಲಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ನಮ್ರತಾ ಗೌಡ (Namratha Gowda) ಅವರನ್ನು ವೀಕ್ಷಕರು ಬಾಯಿಗೆ ಬಂದ ಹಾಗೆ ಬೈದದ್ದು ಉಂಟು. ಈ ಸೀರಿಯಲ್​ ಆರಂಭದಲ್ಲಿ ಅತಿ ಒಳ್ಳೆಯವನಾದ ಕರ್ಣನ ಮೇಲೆ ನಿತ್ಯಾ ದ್ವೇಷ ಕಾರುತ್ತಿದ್ದಳು. ಆತ ಎಷ್ಟೇ ಒಳ್ಳೆಯದನ್ನು ಬಯಸಿದರೂ ಅವನ ಬಗ್ಗೆ ತಪ್ಪು ತಿಳಿದುಕೊಂಡು ಸಿಕ್ಕಾಪಟ್ಟೆ ನಿಂದಿಸುತ್ತಿದ್ದಳು. ಎಲ್ಲರ ಎದುರು ಇನ್​ಸಲ್ಟ್​ ಮಾಡುತ್ತಿದ್ದಳು. ಇದೊಂದು ಸೀರಿಯಲ್​ ರೋಲ್​ ಎನ್ನುವುದನ್ನೂ ಗಮನಿಸಿದರೆ, ನಮ್ರತಾ ಗೌಡ ಅವರಿಗೆ ಅದೆಷ್ಟೋ ಮಂದಿ ವೈಯಕ್ತಿಯವಾಗಿ ನಿಂದಿಸಿದ್ದು ಉಂಟು.

ಸೀರಿಯಲ್​ ಬಿಟ್ಟು ಹೋಗುವ ಮನಸ್ಸು…

ಈ ಪರಿಯ ನಿಂದನೆ ಕೇಳಿ ಒಂದು ಹಂತದಲ್ಲಿ ಸೀರಿಯಲ್​ ಬಿಟ್ಟು ಹೋಗೋಣ ಎನ್ನುವ ಹಾಗೆ ಆಗಿತ್ತು ಎಂದು ಖುದ್ದು ನಟಿಯೇ ಹೇಳಿಕೊಂಡದ್ದು ಉಂಟು. ಆದರೆ, ಜನರು ಈ ಪರಿ ನಿಂದಿಸುತ್ತಾರೆ ಎಂದರೆ ಅದು ಆ ಪಾತ್ರಕ್ಕೆ ಆ ಪಾತ್ರಧಾರಿ ಮಾಡುತ್ತಿರುವ ನ್ಯಾಯವಾಗಿದೆ. ಅದೇನೇ ಇದ್ದರೂ ಇದೀಗ ನಿತ್ಯಾಳನ್ನು ವೀಕ್ಷಕರು ಒಪ್ಪಿಕೊಂಡಿದ್ದಾರೆ. ಆಕೆಯ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ನಿತ್ಯಾ ಮತ್ತು ತೇಜಸ್​ ಒಂದಾಗಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಅದೇ ಇನ್ನೊಂದೆಡೆ, ನಿಧಿ ಮತ್ತು ಕರ್ಣನ ಲವ್​ ಸ್ಟೋರಿಯನ್ನೂ ಜನರು ಇಷ್ಟಪಟ್ಟುಕೊಂಡಿದ್ದಾರೆ.

ಕರ್ಣ ಸೀರಿಯಲ್​ ಸೆಟ್​ ಹೇಗಿದೆ?

ಇಂತಿಪ್ಪ ಕರ್ಣ ಸೀರಿಯಲ್​ (Karna Serial) ಶೂಟಿಂಗ್​ ಸೆಟ್​ ಹೇಗಿರುತ್ತದೆ? ಅಲ್ಲಿ ನಡೆಯುವುದು ಏನು? ಒಂದು ದಿನಕ್ಕೆ ಏನೆಲ್ಲಾ ನಡೆಯತ್ತೆ? ಹೇಗೆ ಶೂಟಿಂಗ್​ ಮಾಡಲಾಗುತ್ತೆ ಎನ್ನುವ ಕುತೂಹಲ ಹಲವರಲ್ಲಿ ಇರುವುದು ಸಹಜವೇ. ಒಂದು ದಿನದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವ ಕುರಿತು the_____baboo_73 ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಒಂದು ದಿನದ ಶೂಟಿಂಗ್​ ಬಗ್ಗೆ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಕರ್ಣ ಸೀರಿಯಲ್​ನ ಬಹುತೇಕ ಎಲ್ಲಾ ಕ್ಯಾರೆಕ್ಟರ್​ಗಳನ್ನೂ ನೋಡಬಹುದಾಗಿದೆ.

ಶೂಟಿಂಗ್​ ಎಂದರೆ ಸುಮ್ಮನಲ್ಲ

ಅಷ್ಟಕ್ಕೂ, ಒಂದು ಸೀರಿಯಲ್​ನ ಒಂದೇ ಒಂದು ಸೀನ್​ ಮಾಡುವಾಗಲೂ ಕೆಲವೊಮ್ಮೆ ಹಲವಾರು ಟೇಕ್​ಗಳನ್ನು ತೆಗೆದುಕೊಳ್ಳುವುದು ಉಂಟು. ಆದ್ದರಿಂದ ಎಷ್ಟೋ ಬಾರಿ ದಿನಪೂರ್ತಿ ಶೂಟಿಂಗ್​ ಮಾಡಿದರೂ ಕೆಲವೇ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಸಾಹಸಮಯ ದೃಶ್ಯಗಳಿಗೆ ಶೂಟಿಂಗ್​ ಸೆಟ್​ ಸಂಪೂರ್ಣವಾಗಿ ಬದಲಾಯಿಸಬೇಕಾಗುತ್ತದೆ. ಜನ ನಿಬಿಡ ಪ್ರದೇಶದಲ್ಲಿ ಶೂಟಿಂಗ್​ ಮಾಡುವಾಗ, ಅಲ್ಲಿ ಇರುವ ಜನರನ್ನು, ಅಭಿಮಾನಿಗಳನ್ನು ತಡೆಯುವುದೇ ದೊಡ್ಡ ಸವಾಲು ಎನ್ನಿಸುತ್ತದೆ. ಬಹುತೇಕ ದೃಶ್ಯಗಳನ್ನು ಶೂಟಿಂಗ್​ ಸೆಟ್​ನಲ್ಲಿ, ಸ್ಟುಡಿಯೋ, ಅಥವಾ ಶೂಟಿಂಗ್​ ಮನೆಗಳಲ್ಲಿಯೇ ತೆಗೆಯುವುದು ಇದ್ದರೂ, ಕೆಲವೊಮ್ಮೆ ಹೊರಾಂಗಣ ದೃಶ್ಯಗಳು ಅನಿವಾರ್ಯವಾಗುತ್ತವೆ. ಇವೆಲ್ಲವುಗಳ ಬಗ್ಗೆ ಚುಟುಕಾಗಿ ಈ ವಿಡಿಯೋದಲ್ಲಿ ಕರ್ಣ ಸೀರಿಯಲ್​ ದೃಶ್ಯಗಳನ್ನು ನೋಡಬಹುದಾಗಿದೆ.



Source link

Leave a Reply

Your email address will not be published. Required fields are marked *