Headlines

ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn

ವಿಜಯ್-ರಶ್ಮಿಕಾ ಮದುವೆ, ಮಧ್ಯೆ ಬಂದ ಮಾಜಿ ಗೆಳತಿ! ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ? | Is Rashmika Mandanna Facing The Same Fate As Rakshit Shetty Vijay Deverakonda Old Photos Spark Fresh Controversy Kvn


ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಹೊಸ್ತಿಲಲ್ಲಿ, ವಿಜಯ್ ಅವರ ಮಾಜಿ ಗೆಳತಿಯೊಂದಿಗಿನ ಹಳೆಯ ಫೋಟೋಗಳು ವೈರಲ್ ಆಗಿವೆ. ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿಯಲು ಕಾರಣವಾದ ಘಟನೆಯಂತೆಯೇ, ಈಗ ರಶ್ಮಿಕಾ ಕೂಡ ಎದುರಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಬೆಂಗಳೂರು: ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿಗೆ ಆದ ಸ್ಥಿತಿ ರಶ್ಮಿಕಾ ಮಂದಣ್ಣಗೂ ಆಗುತ್ತಾ? ಅಂದು ಆ ವಿಡಿಯೋ ನೋಡಿ ತಲೆ ಕೆಡಿಸಿಕೊಂಡಿದ್ದ ರಕ್ಷಿತಾಗೆ ಇಷ್ಟು ದಿನದ ವರೆಗೂ ಒಂಟಿ ಲೈಫ್ ನಡೆಸೋ ಹಾಗಾಯ್ತಲ್ಲ ಅದೇ ಗತಿ ರಶ್ಮಿಕಾಗೂ ಬರುತ್ತಾ? ಹೀಗೆನ್ನುತ್ತಿದ್ದೆ ಬಣ್ಣದ ಜಗತ್ತು. ಅದಕ್ಕೆ ಕಾರಣ ಶ್ರೀವಲ್ಲಿ ಮನದರಸನ ಆ ಒಂದಷ್ಟು ಫೋಟೋಗಳು. ಹಾಗಾದ್ರೆ ಏನಿದು ರಶ್ಮಿಕಾ ಜೀವನಗಾಥೆ ನೋಡೋಣ ಈ ಇಂಟ್ರೆಸ್ಟಿಂಗ್ ಕಹಾನಿಯಲ್ಲಿ.

ರಕ್ಷಿತ್ ಶೆಟ್ಟಿಗಾದ ಸ್ಥಿತಿ ರಶ್ಮಿಕಾಗೂ ಬರುತ್ತಾ?

ಮಾಡಿದ್ದುಣ್ಣೋ ಮಹರಾಯಾ ಅನ್ನೋ ಹಾಗಾಗಿದೆಯಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಥಿತಿ..? ಹೌದು ಎನ್ನುತ್ತಿದೆ ಇಡೀ ಬಣ್ಣದ ಜಗತ್ತು. ಅದಕ್ಕೆ ಕಾರಣ ಶ್ರೀವಲ್ಲಿ ಮನ ಮೆಚ್ಚಿದ ಹುಡುಗ ಈ ಫೋಟೋಗಳು.

ಮಾಜಿ ಗೆಳತಿ ಫೋಟೋ ಜೊತೆ ಸಿಕ್ಕಿ ಬಿದ್ದ ವಿಜಯ್!

ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಕಲ್ಯಾಣಕ್ಕೆ ಕೌಂಟ್ ಡೌನ್ ಸ್ಟಾರ್ಟ್​ ಆಗಿದೆ. ವಿಜಯ್ ಹೊಸ ಬಟ್ಟೆ ಹಾಕಿ ಮದುಮಗನಂತೆ ಮಿಂಚೋಕೆ ರೆಡಿಯಾಗ್ತಿದ್ದಾರೆ. ಅಷ್ಟರಲ್ಲಾಗಲೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅವಘಡ ನಡದೇ ಹೊಗಿದೆ. ಅದುವೇ ಈ ಫೋಟೋ ಅವಘಡ. ಮಾಜಿ ಗೆಳತಿಯ ಫೋಟೋ ಜೊತೆ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಯೆಸ್, ವಿಜಯ್ ದೇವರಕೊಂಡ ಈಗ ರಶ್ಮಿಕಾ ಮಂದಣ್ಣ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ ಅದಕ್ಕೂ ಮೊದಲು ವಿಜಯ್ ಹೃದಯ ಸಿಂಹಾಸ ಏರಿದ್ದು ಇದೇ ಹುಡುಗಿಯಂತೆ. ವಿಜಯ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು ಇದೇ ಹುಡುಗಿಯನ್ನಂತೆ.

ಬೆಲ್ಜಿಯಂ ಮೂಲದ ವರ್ಜೀನಿಯಾ ಎಂಬ ಯುವತಿ ಜೊತೆ ವಿಜಯ್‌ ಡೇಟಿಂಗ್‌ ಮಾಡುತ್ತಿದ್ದರಂತೆ. ಆಗ ತೆಗೆಸಿಕೊಂಡ ಹಳೇ ಫೋಟೋಗಳು ಈಗ ವಿಜಯ್ ರಶ್ಮಿಕಾ ಮದುವೆ ಹೊಸ್ತಿಲಲ್ಲಿ ಎಲ್ಲೆಲ್ಲೂ ಬಿಕರಿಯಾಗುತ್ತಿವೆ.

ಅಂದು ರಕ್ಷಿತ್ ಶೆಟ್ಟಿ, ಇಂದು ರಶ್ಮಿಕಾ..!

ವಿಜಯ್ ದೇವರಕೊಂಡ ಮನದ ತುಂಬ ಈಗ ತುಂಬಿಕೊಂಡಿರೋದು ರಶ್ಮಿಕಾ ಮಂದಣ್ಣ. ಆದ್ರೆ ಒಂದ್ ಕಾಲದಲ್ಲಿ ರಶ್ಮಿಕಾ ಮನದರಸ ಆಗಿದ್ದು ನಮ್ಮ ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿಯಲ್ಲಿ ಒಂದಾಗಿದ್ದ ಈ ಜೋಡಿ ದಾಂಪತ್ಯ ನಡೆಸಬೇಕು ಅಂತ ಎಂಗೇಜ್ಮೆಂಟ್​ ಮಾಡಿಕೊಂಡಿದ್ರು. ಆದ್ರೆ ಆ ನಿಶ್ಚಿತಾರ್ಥ ಒಂದು ವರ್ಷದೊಳಗೆ ಮುರಿದು ಬಿದ್ದಿತ್ತು. ಅದಕ್ಕೆ ಕಾರಣ ಆಗಿದ್ದು, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಬಸ್​ನಲ್ಲಿ ಕಿಸ್ಸಿಂಗ್ ಸೀನ್​​ನಲ್ಲಿ ಸಿಕ್ಕಿ ಬಿದ್ದಿದ್ದು.

ಈ ಸೀನ್ ನೋಡಿದ್ದ ರಕ್ಷಿತ್ ಶೆಟ್ಟಿ ಶಾಕ್​​ಗೆ ಒಳಗಾಗಿದ್ರು. ನಾನು ಪ್ರೀತಿಸೋ ಹುಡುಗಿ ಬೇರೊಬ್ಬನ ಜೊತೆ ಇಂತಹ ದೃಶ್ಯದಲ್ಲಿ ಕಾಣಿಸಿದ್ರಲ್ಲಾ ಅಂತ ಬೇಸರ ಮಾಡಿಕೊಂಡಿದ್ರು. ಕೊನೆಗೆ ಇದೇ ವಿಚಾರ ಪ್ರಚಾರ ಆಗಿ ಇಬ್ಬರ ಸಂಬಂಧದ ಮಧ್ಯೆ ಬಿರುಕು ಹುಟ್ಟಲು ಮೂಲ ಕಾರಣ ಆಯ್ತು ಅಂತ ಜಗತ್​ ಜಾಹೀರಾತಾಗಿತ್ತು.

ಈಗ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಆಗುತ್ತಿದ್ದಾರೆ. ಮದುವೆಗೆ ಎಲ್ಲಾ ತಯಾರಿ ಕೂಡ ಆಗಿದೆ. ಇನ್ನು ಹತ್ತು ದಿನ ಕಳೆದ್ರೆ ಇಬ್ಬರು ಸತಿ ಪತಿಗಳಾಗುತ್ತಾರೆ. ಇದೇ ತಿಂಗಳು 22ನೇ ತಾರೀಖು ಹಸೆಮಣೆ ಏರಲಿದ್ದಾರೆ. ಅಷ್ಟರಲ್ಲಾಗಲೇ ವಿಜಯ್ ಹಳೇ ಗೆಳತಿ ಜೊತೆಗಿದ್ದ ಫೋಟೋಗಳು ವೈರಲ್ ಆಗುತ್ತಿವೆ. ಈಗ ರಶ್ಮಿಕಾ ವಿಜಯ್ ಕನಸು ಕೂಡ ಭಗ್ನವಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಯಾಕಂದ್ರೆ ಅಂದು ರಕ್ಷಿತ್ ಶೆಟ್ಟಿ ಬಿಡಲು ಕಾರಣ ಆಗಿದ್ದು ವಿಜಯ್ ಜೊತೆಗಿನ ರಶ್ಮಿಕಾಳ ಆ ವಿಡಿಯೋ. ಈಗ ಅದೇ ತರದ ದೃಶ್ಯಗಳಲ್ಲಿ ವಿಜಯ್ ಬೇರೊಬ್ಬ ಹುಡುಗಿ ಜೊತೆ ಕಾಣಿಸಿದ್ದಾರೆ.

ನಿಜವಾಗುತ್ತಾ ಜ್ಯೋತಿಷಿ ಹೇಳಿದ್ದ ಆ ಭವಿಷ್ಯ?

ವಿಜಯ್ ರಶ್ಮಿಕಾ ಮದುವೆ ಟೈಮ್​​ನಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಖ್ಯಾತ ಸೆಲೆಬ್ರಿಟಿ ಜ್ಯೋತಿಸಿ ಎರಡು ವರ್ಷದ ಹಿಂದೆ ಹೇಳಿದ್ದ ಮಾತು ನಿಜವಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಮದುವೆ ಬಳಿಕ ಹೆಚ್ಚು ದಿನ ಒಟ್ಟಿಗೆ ಇರೋದಿಲ್ಲ ಅಂತ ಬಾಂಬ್ ಸಿಡಿಸಿದ್ರು.

ಒಟ್ನಲ್ಲಿ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಮ್ಯಾರೇಜ್​​ ಬಗ್ಗೆ ದಿನಕ್ಕೊಂದು ವಿಚಾರಗಳು ಭಹಿರಂಗ ಆಗ್ತಿವೆ. ವಿಜಯ್ ಪ್ರೀತಿಸಿದ ಮೊದಲ ಹುಡುಗಿ ಪೋಟೋಗಳು ಅಂತ ವೈರಲ್ ಆಗುತ್ತಿದ್ರೆ, ಮಾಡಿದ್ದುಣ್ಣೋ ಮಾಹರಾಯ ಅನ್ನೋ ಸ್ಥಿತಿ ರಶ್ಮಿಕಾ ಮಂದಣ್ಣಗೆ ಆಗಿದೆ ಅನ್ನೋ ಮಾತುಗಳು ಹುಟ್ಟಿಕೊಳ್ಳುತ್ತಿದೆ.



Source link

Leave a Reply

Your email address will not be published. Required fields are marked *