Headlines

ಎಷ್ಟೇ ಬ್ಯುಸಿಯಾಗಿದ್ರೂ ಬಿಡಲಿಲ್ಲ ಹಠ; ಕಿಸ್ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್​ ಲೀಲಾ! | From Silver Screen To Stethoscope Actress Sreeleela Fulfils Her Dream Of Becoming A Doctor Kvn

ಎಷ್ಟೇ ಬ್ಯುಸಿಯಾಗಿದ್ರೂ ಬಿಡಲಿಲ್ಲ ಹಠ; ಕಿಸ್ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್​ ಲೀಲಾ! | From Silver Screen To Stethoscope Actress Sreeleela Fulfils Her Dream Of Becoming A Doctor Kvn


ಕಿಸ್’ ಚಿತ್ರದ ಖ್ಯಾತಿಯ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಮ್ಮನಂತೆ ಡಾಕ್ಟರ್ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು, ಎಷ್ಟೇ ಬ್ಯುಸಿಯಾಗಿದ್ದರೂ ಛಲ ಬಿಡದೆ ಎಂಬಿಬಿಎಸ್ ಪದವಿ ಪಡೆಯುವ ಮೂಲಕ ನನಸಾಗಿಸಿಕೊಂಡಿದ್ದಾರೆ.

ಆ್ಕಕ್ಟರ್ ಆದವರು ಡಾಕ್ಟರ್ ಆದ್ರೆ ಹೆಂಗಿರುತ್ತೆ. ಇಂತದ್ದೊಂದು ಹೊಸ ಕನಸು ಈಡೇರಿಸಿಕೊಂಡಿದ್ದಾರೆ ಕಿಸ್​ ಬ್ಯೂಟಿ ಶ್ರೀಲೀಲಾ. ಅಮ್ಮನ ಆಸೆಯಂತೆ ನಟಿಯಾಗಿ ಮಿಂಚುತ್ತಿರೋ ಶ್ರೀಲೀಲಾ ಈಗ ತನ್ನ ದೊಡ್ಡ ಆಸೆಯನ್ನ ಪೂರ್ಣಗೊಳಿದ್ದಾರೆ. ಹಾಗಾದ್ರೆ ಶ್ರೀಲೀಲಾ ಕಂಡ ಡಾಕ್ಟರ್ ಕನಸು ನನಸಾಗಿದ್ದು ಹೇಗೆ? ನೋಡೋಣ ಬನ್ನಿ.

ಕಿಸ್ ಬೆಡಗಿ ಈಗ ಡಾಕ್ಟರ್​ ಲೀಲಾ, ಡಾಕ್ಟರ್​ ಆದ ಪ್ಯಾನ್​ ಇಂಡಿಯಾ ಸ್ಟಾರ್​​

ಶ್ರೀಲೀಲಾ ಎಂದಾಕ್ಷಣ ನೆನಪಿಗೆ ಬರೋದು ಆಕೆಯ ಮೈಮಾಟ, ಕಣ್ಣೋಟ, ಡಾನ್ಸ್,​ ಎನರ್ಜಿ, ಮುದ್ದು ಮುದ್ದಾದ ನಟನೆ. ಡಾನ್ಸ್​ ಅಂದ್ರೆ ಶ್ರೀಲೀಲಾ. ಶ್ರೀಲೀಲಾ ಅಂದ್ರೆ ಡಾನ್ಸ್​ ಅನ್ನೋ ಮಟ್ಟಿಗೆ ಈಕೆಯ ನೃತ್ಯ ಫೇಮಸ್​​. ಡಾನ್ಸಿಂಗ್​ ಕ್ವೀನ್​ ಅಂದ್ರೂ ಅತಿಶಯೋಕ್ತಿಯಲ್ಲ. ಸಿನಿಮಾ, ಜಾಹಿರಾತು, ರಿಯಾಲಿಟಿ ಶೋ ಅಂತ ಬ್ಯುಸಿ ಇರೋ ಲೀಲಾ ಇದೇ ಗ್ಯಾಪ್​ನಲ್ಲಿ ಡಾಕ್ಟರ್​ ಲೀಲಾ ಆಗ್ಬಿಟ್ಟಿದ್ದಾರೆ.

ಎಷ್ಟೇ ಬ್ಯುಸಿಯಾಗಿದ್ರು ಬಿಡಲಿಲ್ಲ ಹಠ

ಕನ್ನಡದ ಕಿಸ್​ ಸಿನಿಮಾ ಬಳಿಕ 2021ರಲ್ಲಿ ಪೆಲ್ಲಿ ಸಂದಡ್ ಸಿನಿಮಾ ಮೂಲಕ ಟಾಲಿವುಡ್‌ಗೆ ಹಾರಿದ ಶ್ರೀಲೀಲಾ, ಅಲ್ಲಿ ಮುಟ್ಟಿದೆಲ್ಲಾ ಚಿನ್ನ. ಲೀಲಾ ಮಾಡಿದ ಸಿನಿಮಾ, ಸಾಂಗ್​ ಎಲ್ಲವೂ ಟ್ರೆಂಡ್​ ಕ್ರಿಯೇಟ್ ಮಡಿದ್ವು. ಟಾಲಿವುಡ್​ನಿಂದ ಬಾಲಿವುಡ್​ನಲ್ಲೂ ಲೀಲಾ ಬ್ಯುಸಿ. ಹೀಗಿದ್ರೂ ಶ್ರೀಲೀಲಾ ಎಂದಿಗೂ ತನ್ನ ಗೋಲ್​ ಕೈ ಬಿಡಲಿಲ್ಲ.. ಪ್ಯಾಶನ್​ ಜೊತೆಗೆ ಏಮ್​ ಕೂಡ ಮುಖ್ಯ ಅಂತ ಆ ಕನಸಿನ ಹಿಂದೆ ಬಿದ್ದಿದ್ದ ಈ ಕಿಸ್ ಚೆಲುವೆ ಈಗ ಗೋಲ್ ರೀಚ್ ಆಗಿದ್ದಾರೆ.

ಈಡೇರಿತು ಶ್ರೀಲೀಲಾ ಕಂಡ ಡಾಕ್ಟರ್​ ಕನಸು..!

ಅಂದಹಾಗೆ ಶ್ರೀಲೀಲಾ ಕಂಪ್ಲೀಟ್​ ಮಾಡಿರೋದು ಸಾಮಾನ್ಯ ಡಿಗ್ರಿ ಅಲ್ಲ. MBBS, ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ.​ ಶ್ರೀಲೀಲಾಗೆ ಡಾಕ್ಟರ್ ಆಗೋ ಕನಸು ಚಿಕ್ಕಂದಿನಿಂದಲೇ ಇತ್ತು. ಯಾಕಂದ್ರೆ ಅಮ್ಮ ಕೂಡ ವೈದ್ಯೆ. ಈ ಚೆಲುವೆ ಬೆಳೆದಿದ್ದೆಲ್ಲಾ ಡಾಕ್ಟರ್ಸ್​​ ಸುತ್ತಾ ಮುತ್ತ. ಅಮ್ಮನ ಫ್ರೆಂಡ್ಸ್​, ಫ್ಯಾಮಿಲಿಯಲ್ಲಿ ಡಾಕ್ಟರ್​ಗಳೇ ಹೆಚ್ಚಿದ್ದಾರೆ. ಹೀಗಾಗಿ ಅದೇ ಯೋಜನೆ ಯೋಚನೆಯಲ್ಲಿದ್ದ ಶ್ರೀಲೀಲಾ ಈಗ ತನ್ನ ಕನಸನ್ನ ಈಡೇರಿಸಿಕೊಂಡಿದ್ದಾರೆ.

ವೈದ್ಯೆ, ನಟಿ, ನೃತ್ಯಗಾರ್ತಿ, ಸಕಲಕಲಾವಲ್ಲಭೆ ನಮ್ ಹುಡುಗಿ.!

ಆಕ್ಟಿಂಗ್​, ಶಿಕ್ಷಣ ಜೊತೆ ಜೊತೆಗೆ ಶ್ರೀಲೀಲಾಗೆ ನೃತ್ಯದ ಮೇಲೂ ಅಪಾರ ಪ್ರೀತಿ, ಅದಕ್ಕೆ ಆಕೆಯ ಡಾನ್ಸ್​ ನಂಬರ್​ಗಳೇ ಸಾಕ್ಷಿ. ಹಾವಿನಂತೆ ಸೊಂಟ ಬಳುಕಿಸೋ ಶ್ರೀಲೀಲಾ ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ, ಬ್ರಾಂಡಿಂಗ್​ನಲ್ಲಿ ಬ್ಯುಸಿ ಇರೋ ನಮ್ಮೂರ ಹುಡುಗಿ ಈಗ ಬೆಂಗಳೂರಿನಲ್ಲಿ ತಮ್ಮ ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದಾರೆ. ಇಷ್ಟುದಿನ ನಟಿಯಾಗಿ ಕಿಕ್​ ಕೊಡುತ್ತಿರೋ ಶ್ರೀಲೀಲಾ ಇನ್ನೇನು ಡಾಕ್ಟರಮ್ಮಳಾಗಿ ಟ್ರೀಟ್​ಮೆಂಟ್​ ಕೊಡಬಹುದೇನೋ.

– ವಿನುತಾ, ಏಷ್ಯಾನೆಟ್​ ಸುವರ್ಣನ್ಯೂಸ್​​



Source link

Leave a Reply

Your email address will not be published. Required fields are marked *