Actress Rashmi Prabhakar Photos: ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ರಶ್ಮಿ ಪ್ರಭಾಕರ್ ಅವರು ಮಗನಿಗೆ ಹೆಸರು ಇಡುವ ಖುಷಿಯಲ್ಲಿದ್ದಾರೆ. ಮಗನ ಮುದ್ದಾದ ಫೋಟೋಗಳನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿ ಪ್ರಭಾಕರ್ ಅವರು ಕಳೆದ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಮಗನಿಗೆ ಹೆಸರು ಇಟ್ಟಿಲ್ಲ.

ಒಂದಾದ ಮೇಲೆ ಒಂದರಂತೆ ಕನ್ನಡ ಹಾಗೂ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ಅವರು ಗರ್ಭಿಣಿಯಾದಮೇಲೆ ಸೀರಿಯಲ್‌ನಿಂದ ದೂರ ಇದ್ದರು.

ರಶ್ಮಿ ಪ್ರಭಾಕರ್ ಅವರು ನಿಖಿಲ್ ಭಾರ್ಗವ ಅವರನ್ನು ಮದುವೆಯಾಗಿದ್ದರು. ನಿಖಿಲ್ ಅವರು ಮನರಂಜನಾ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರದ್ದು ಲವ್ ಮ್ಯಾರೇಜ್.

ನಮ್ಮ ಮುದ್ದು ಕಂದಮ್ಮನಿಗೆ ಹೆಸರಿಡುವ ಸಮಯ ಬಂದಿದೆ. ವ್ಯಾವಹಾರಿಕ ( ರೂಡಿ) ನಾಮ ನಿರ್ಧಾರ ಆಗಿದೆ, ನಕ್ಷತ್ರ ನಾಮಕ್ಕೆ ಸಲಹೆ ಬೇಕು. ಅಕ್ಷರ ಶ ( Sha) ಎಂದು ರಶ್ಮಿ ಪ್ರಭಾಕರ್ ಅವರು ಪೋಸ್ಟ್ ಮಾಡಿದ್ದಾರೆ. ಅನೇಕರು ರಶ್ಮಿ ಮಗನಿಗೆ ಹೆಸರು ಇಡಲು ಸಲಹೆ ನೀಡಿದ್ದಾರೆ.

ಸದ್ಯ ತಾಯ್ತನದ ಖುಷಿಯಲ್ಲಿರುವ ರಶ್ಮಿ ಪ್ರಭಾಕರ್ ಅವರು ಯಾವಾಗ ನಟನೆಗೆ ಮರಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅವರು ಮಗನ ಸುಂದರ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಶುಭವಿವಾಹ, ಜೀವನಚೈತ್ರ, ಲಕ್ಷ್ಮೀ ಬಾರಮ್ಮ, ಮರಳಿ ಮನಸಾಗಿದೆ ಮುಂತಾದ ಧಾರಾವಾಹಿಗಳಲ್ಲಿ ರಶ್ಮಿ ಪ್ರಭಾಕರ್ ನಟಿಸಿದ್ದರು

ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಲಾವಿದರಾದ ರಶ್ಮಿ ಪ್ರಭಾಕರ್, ನೇಹಾ ಗೌಡ, ಕವಿತಾ ಗೌಡ ಅವರು ತಾಯಿಯಾಗಿದ್ದು, ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

Source link
ದೃಷ್ಟಿ ಮಾತ್ರ ಹಾಕ್ಬೇಡಿ; ಲಕ್ಷ್ಮೀ ಬಾರಮ್ಮ ಧಾರಾವಾಹಿ ರಶ್ಮಿ ಪ್ರಭಾಕರ್ ಮಗನಿಗೆ ನಾಮಕರಣದ ಸಂಭ್ರಮ Photos